ರೋಲ್ಸ್ ರೋಯ್ಸ್ ಬದಲು ಹೊಸ ಕಾರು ಖರೀದಿಸಿದ ಅಮಿತಾಬ್ ಬಚ್ಚನ್!
ಬಾಲಿವುಡ್ ಸ್ಟಾರ್ ನಟ ಅಮಿತಾಬ್ ಬಚ್ಚನ್ ತಮ್ಮ ನೆಚ್ಚಿನ ರೋಲ್ಸ್ ರಾಯ್ಸ್ ಕಾರನ್ನು ಬೆಂಗಳೂೂರಿಗೆ ಮಾರಾಟ ಮಾಡಿದ್ದರು. ಬಳಿಕ ಈ ಕಾರಿನ ಬದಲು ಇದೀಗ ಮರ್ಸಡೀಸ್ ಬೆಂಝ್ ಕಾರು ಖರೀದಿಸಿದ್ದಾರೆ. ಅಮಿತಾಬ್ ಬಚ್ಚನ್ ಖರೀದಿಸಿದ ಹೊಸ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.
ಮುಂಬೈ(ಏ.07): ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್‌ಗೆ ಕಾರುಗಳ ಪ್ರೀತಿ ಹೆಚ್ಚು. ಹೀಗಾಗಿ ಅಮಿತಾಬ್ ಬಚ್ಚನ್ ಬಳಿಕ ಹಲವು ಐಷಾರಾಮಿ ಕಾರುಗಳಿವೆ. ಇತ್ತೀಚೆಗಷ್ಟೇ ಅಮಿತಾಬ್ ಬಚ್ಚನ್ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಮಾರಾಟ ಮಾಡಿದ್ದರು. ಈ ಕಾರಿನ ಬದಲು ಇದೀಗ ಹೊಸ ಮರ್ಸಡೀಸ್ ಬೆಂಝ್ ಕಾರು ಖರೀದಿಸಿದ್ದಾರೆ.
ಇದನ್ನೂ ಓದಿ: ಅಮಿತಾಬ್ ಬಚ್ಚನ್ ರೋಲ್ಸ್ ರಾಯ್ಸ್ ಮಾರಾಟ- ಬೆಂಗಳೂರಿಗೆ ಬಂತು ದುಬಾರಿ ಕಾರು!
ಅಮಿತಾಬ್ ಬಚ್ಚನ್ ನೂತನ ಮರ್ಸಡೀಸ್ ಬೆಂಝ್ ವಿ ಕ್ಲಾಸ್ ಕಾರು ಖರೀದಿಸಿದ್ದಾರೆ. ಇದು 6 ಸೀಟರ್ ಕಾರಾಗಿದ್ದು, 2019ರ ಜನವರಿಯಲ್ಲಿ ಈ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಮರ್ಸಡೀಸ್ ಬೆಂಝ್ ವಿ-ಕ್ಲಾಸ್ ಎಕ್ಸ್ ಎಕ್ಸ್‌ಶೋ ರೂಮ್ ಬೆಲೆ ರೂ.68.40 ಲಕ್ಷದಿಂದ ಆರಂಭವಾಗಲಿದೆ. ಇನ್ನು ಎಕ್ಸಕ್ಲೂಸಿವ್ LWB ವೇರಿಯೆಂಟ್ ಕಾರಿನ ಬೆಲೆ81.90 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳಲಿದೆ.
ಇದನ್ನೂ ಓದಿ: ಕಳೆದ ವರ್ಷ 23 ಲಕ್ಷ ಬೆಂಝ್ ಕಾರು ಮಾರಾಟ- ಭಾರತ ಈಗ ಲಕ್ಸುರಿ ರಾಷ್ಟ್ರ!
ಚಿತ್ರ ನಟ-ನಟಿಯರು, ಉದ್ಯಮಿಗಳಿಗೆ ಇದು ಹೇಳಿ ಮಾಡಿಸಿದ ಕಾರು. ಹೈಟೆಕ್ ಟೆಕ್ನಾಲಜಿ, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸೌಲಭ್ಯಗಳು ಈ ಕಾರಿನಲ್ಲಿದೆ. ಈ ಕಾರು 2.1 ಲೀಟರ್, 2143 ಸಿಸಿ BS-VI ಡೀಸೆಲ್ ಎಂಜಿನ್ ಹೊಂದಿದ್ದು, 163 PS ಪವರ್ ಹಾಗೂ 380 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 7 ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸಮಿಶನ್ ಹೊಂದಿದೆ.
ಇದನ್ನೂ ಓದಿ: ಟಾಟಾ ಇಂಡಿಗೋ To ಮರ್ಸಡೀಸ್ ಬೆಂಝ್- ರತನ್ ಟಾಟಾ ಕಾರ್ ಕಲೆಕ್ಷನ್ ಹೇಗಿದೆ?
6 ಏರ್ ಬ್ಯಾಗ್‌ಗಳು, 360 ಡಿಗ್ರಿ ಕ್ಯಾಮರಾ ಆ್ಯಕ್ಟಿವ್ ಪಾರ್ಕಿಂಗ್, ABS, EBD ಸೇರಿದಂತೆ ಎಲ್ಲಾ ಸುರಕ್ಷತಾ ಸೌಲಭ್ಯ ಹಾಗೂ ಬ್ರೇಕಿಂಗ್ ಸಿಸ್ಟಮ್ ಹೊಂದಿದೆ. LED ಹೆಡ್‌ಲ್ಯಾಂಪ್ಸ್, ಎಲೆಕ್ಟ್ರಿಕ್ ಸ್ಲೈಡಿಂಗ್ ಡೋರ್, 360 ಡಿಗ್ರಿಗಳ ರಿವರ್ಸಿಂಗ್ ಕ್ಯಾಮರಾ ಹೊಂದಿದೆ. ಒಬ್ಸಿಡಿಯನ್ ಬ್ಲ್ಯಾಕ್ ಮೆಟಾಲಿಕ್, ಕ್ಯಾವೆನ್ಸೈಟ್ ಬ್ಲೂ ಮೆಟಾಲಿಕ್ , ಮೌಂಟನ್ ಕ್ರಿಸ್ಟಲ್ ವೈಟ್ ಮೆಟಾಲಿಕ್ ಹಾಗೂ ಬ್ರಿಲಿಯಂಟ್ ಸಿಲ್ವರ್ ಮೆಟಾಲಿಕ್ ಬಣ್ಣಗಳಲ್ಲಿ ಕಾರು ಲಭ್ಯವಿದೆ. ಅಮಿತಾಬ್ ಬಚ್ಚನ್ ಬಿಳಿ ಬಣ್ಣದ ಮರ್ಸಡೀಸ್ ಬೆಂಝ್ ವಿ ಕ್ಲಾಸ್ ಕಾರು ಖರರೀದಿಸಿದ್ದಾರೆ.