Asianet Suvarna News Asianet Suvarna News

ನೂತನ ಮಹೀಂದ್ರ ಥಾರ್ ಬೆನ್ನಲ್ಲೇ ಬಿಡುಗಡೆಯಾಗಲಿದೆ ಸ್ಕಾರ್ಪಿಯೋ, XUV500 ಕಾರು!

ಮಹೀಂದ್ರ ಕಂಪನಿ ಶೀಘ್ರದಲ್ಲೇ ಮುಂದಿನ ಪೀಳಿಗೆಯ ಥಾರ್ ಜೀಪ್ ಬಿಡುಗಡೆ ಮಾಡಲಿದೆ. ಇದರ ಬೆನ್ನಲ್ಲೇ ಸ್ಕಾರ್ಪಿಯೋ, XUV500 ಕಾರು ಬಿಡುಗಡೆಯಾಗಲಿದೆ. ಹಲವು ಬದಲಾವಣೆಗಳೊಂದಿಗೆ ನೂನತ ಕಾರು ಮಾರುಕಟ್ಟೆ ಪ್ರವೇಶಿಸುತ್ತಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Mahindra ready to introduce thar Scorpio and xuv500 car in India soon
Author
Bengaluru, First Published Jul 5, 2020, 7:07 PM IST

ಮುಂಬೈ(ಜು.05): ಭಾರತೀಯ ವಸ್ತುಗಳು, ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಮಹೀಂದ್ರ ಕಂಪನಿ ತನ್ನು ಕಾರುಗಳಿಗೆ ಹೊಸ ರೂಪ, ಹೆಚ್ಚುವರಿ ಫೀಚರ್ಸ್ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಬಿಡುಗಡೆ ಮಾಡುತ್ತಿದೆ. ಸದ್ಯ ಮಹೀಂದ್ರ ಕಂಪನಿ 3 ವಾಹನಗಳು ಸರದಿ ಸಾಲಿನಲ್ಲಿ ಬಿಡುಗಡೆಯಾಗಲಿದೆ. 

ವೆಂಟಿಲೇಟರ್ ಬಳಿಕ ಕೊರೋನಾ ವೈರಸ್ ಹೋರಾಟಕ್ಕೆ ಮಹೀಂದ್ರ ಆ್ಯಂಬುಲೆನ್ಸ್!.

ಸೆಕೆಂಡ್ ಜನರೇಶನ್ ಮಹೀಂದ್ರ ಥಾರ್ ಕೊರೋನಾ ವೈರಸ್ ಕಾರಣ ಬಿಡುಗಡೆ ಕೊಂಚ ವಿಳಂಬವಾಗಿದೆ. ಈ ವರ್ಷದ ಅಂತ್ಯದಲ್ಲಿ ನೂತನ ಥಾರ್ ಬಿಡುಗಡೆಯಾಗಲಿದೆ. ಇದಾದ ಬಳಿಕ ಮಹೀಂದ್ರ ಸ್ಕಾರ್ಪಿಯೋ ಹಾಗೂ XUV500 ಕಾರು ಬಿಡುಗಡೆಯಾಗಲಿದೆ. ಥಾರ್, ಸ್ಕಾರ್ಫಿಯೋ ಹಾಗೂ XUV500 ಮೂರು ವಾಹನಗಳು ಭಾರತದಲ್ಲಿ ಅತ್ಯಂತ ಜನಪ್ರಿಯ ಹಾಗೂ ಮಾರಾಟದಲ್ಲೂ ದಾಖಲೆ ಬರೆದಿದೆ.

ಹೊಸ ವಿನ್ಯಾಸ, ಗಾತ್ರದಲ್ಲೂ ಬದಲಾವಣೆ; ಬಿಡುಗಡೆಗೆ ರೆಡಿಯಾಗಿದೆ ಮಹೀಂದ್ರ ಥಾರ್!.

ಸೆಕೆಂಡ್ ಜನರೇಶನ್ ಸ್ಕಾರ್ಪಿಯೋ ಕಾರಿನಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. SUV ಕಾರಿನ ರೂಪ ನೀಡಲಾಗಿದೆ. 2002ರಲ್ಲಿ ಬಿಡುಗಡೆಯಾದ ಸ್ಕಾರ್ಪಿಯೋ ಭಾರಿ ಸಂಚಲನ ಮೂಡಿಸಿತ್ತು. ಫೇಸ್‌ಲಿಫ್ಟ್ ಸೇರಿದಂತೆ ಕೆಲ ಬದಲಾವಣೆಯೊಂದಿಗೆ ಬಿಡುಗಡೆಯಾಗಿತ್ತು. ಆದರೆ ಸೆಕೆಂಡ್ ಜನರೇಶನ್ ಮೂಲಕ ಮಹತ್ತರ ಬದಲಾವಣೆಯೊಂದಿಗೆ ಬಿಡುಗಡೆಯಾಗುತ್ತಿದೆ.

2.2 ಲೀಟರ್ BS6 ಡೀಸೆಲ್ ಎಂಜಿನ್ ಹಾಗೂ 2.0 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿಗೆ. 180  bhp ಪವರ್ ಹಾಗೂ 380 nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯವನ್ನು ನೂತನ ಸ್ಕಾರ್ಪಿಯೋ ಹೊಂದಿದೆ.

2021ರ ಆರಂಭದಲ್ಲಿ ಸ್ಕಾರ್ಪಿಯೋ ಬಿಡುಗಡೆಯಾಗಲಿದೆ. ಇನ್ನು 2021ರ ಅಂತ್ಯದಲ್ಲಿ ಮಹೀಂದ್ರ XUV500 ಕಾರು ಮಾರುಕಟ್ಟೆ ಪ್ರವೇಶಿಸಲಿದೆ.

Follow Us:
Download App:
  • android
  • ios