ಮುಂಬೈ(ಜೂ.15): ಕೊರೋನಾ ವೈರಸ್ ಮೀತಿ ಮೀರುತ್ತಿದೆ. ಮಹಾರಾಷ್ಟ್ರದ ಪರಿಸ್ಥಿತಿ ಗಂಭೀರವಾಗಿದೆ. ಮುಂಬೈ ಮಹಾನಗರ ಇದೀಗ ಸೋಂಕಿತರಿಂದ ತುಂಬಿ ಹೋಗಿದೆ. ಆಸ್ಪತ್ರೆ, ಸೋಂಕಿತರನ್ನು ಕರೆದೊಯ್ಯಲು ಆ್ಯುಂಬುಲೆನ್ಸ್ ಸೇವೆಗಳು ತಕ್ಷಣಕ್ಕೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಕೊರೋನಾ ವಿರುದ್ಧದ ಹೋರಾಟದಲ್ಲಿ ತೊಡಗಿರುವ ಮಹೀಂದ್ರ ಗ್ರೂಪ್ ವೆಂಟಿಲೇಟರ್ ಉತ್ಪಾದನೆ ಮಾಡುತ್ತಿದೆ. ಇದೀಗ ಮಹಾರಾಷ್ಟ್ರ ಸರ್ಕಾರಕ್ಕೆ ಅ್ಯಂಬುಲೆನ್ಸ್  ಹಸ್ತಾಂತರಿಸಿದೆ.

ಜಾವಾ ಮೀಟರ್, ಬೊಲೆರೋ ಕನ್ಸೋಲ್; ಮಹೀಂದ್ರ ವೆಂಟಿಲೇಟರ್ ಹಿಂದಿದೆ ರೋಚಕ ಕತೆ!

ಮುಂಬೈ ಮಹಾನಗರದಲ್ಲಿ ಕೊರೋನಾ ವೈರಸ್ ಜರನ್ನು ಹೈರಾಣಾಗಿಸಿದೆ. ಯಾವ ತುರ್ತು ಸೇವೆಗಳು ತಕ್ಷಣಕ್ಕೆ ಸಿಗುತ್ತಿಲ್ಲ. ಹೀಗಾಗಿ ಮಹೀಂದ್ರ ಸೋಂಕಿತರನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ನೀಡಿದೆ. ಮಹೀಂದ್ರ ಮ್ಯಾಕ್ಸಿಮೋ ಕರ್ಮಷಿಯಲ್ ವಾಹನವನ್ನು ಮಹೀಂದ್ರ ಕಂಪನಿ ಇದೀಗ ಅತ್ಯಾಧುನಿಕ ಆ್ಯಂಬುಲೆನ್ಸ್ ಆಗಿ ಪರವರ್ತಿಸಿದೆ.

 

ಸೇನೆಯಲ್ಲಿ ಟೂರ್ ಆಫ್ ಡ್ಯೂಟಿ ಸೇವೆ ಸಲ್ಲಿಸುವವರಿಗೆ ಬಿಗ್ ಆಫರ್ ನೀಡಿದ ಆನಂದ್ ಮಹೀಂದ್ರ !

ಝಿ ಗ್ರೂಪ್ ಸಹಯೋಗದಲ್ಲಿ ಮಹೀಂದ್ರ ಮೋಟಾರ್ಸ್ ನೂತನ ಆ್ಯಂಬುಲೆನ್ಸ್ ತಯಾರಿಸಿದೆ. ಇದೀಗ ಆ್ಯುಂಬುಲೆನ್ಸ್‌ಗಳನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಹಸ್ತಾಂತರಿಸಿದೆ. 8 ಸೀಟಿನ ವಾಹನ ಇದೀಗ ಹೊಚ್ಚ ಹೊಸ ಆ್ಯಂಬುಲೆನ್ಸ್ ಆಗಿ ಮಾರ್ಪಟ್ಟಿದೆ. ಮುಂಬೈನಲ್ಲಿ ಪರಿಸ್ಥಿತಿ ಕೈಮೀರುತ್ತದ್ದಂತೆ ಮಹಾರಾಷ್ಟ್ರ ಸರ್ಕಾರ, ಮಹೀಂದ್ರ ಗ್ರೂಪ್ ಬಳಿ ಆ್ಯಂಬುಲೆನ್ಸ್‌ಗೆ ಮನವಿ ಮಾಡಿತ್ತು.

ಸರ್ಕಾರದ ಮನವಿಗೆ ತಕ್ಷಣ ಸ್ಪಂದಿಸಿದ ಮಹೀಂದ್ರ, ಕೊರೋನಾ ಸೋಂಕಿತರನ್ನು ಕರೆದೊಯ್ಯಲು ಆ್ಯುಂಬುಲೆನ್ಸ್ ನೀಡಿದೆ.