ಹೊಸ ವಿನ್ಯಾಸ, ಗಾತ್ರದಲ್ಲೂ ಬದಲಾವಣೆ; ಬಿಡುಗಡೆಗೆ ರೆಡಿಯಾಗಿದೆ ಮಹೀಂದ್ರ ಥಾರ್!
ಸೆಕಂಡ್ ಜನರೇಶನ್ ಮಹೀಂದ್ರ ಥಾರ್ ಹಲವು ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದು,ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಲಾಕ್‌ಡೌನ್ ಬಳಿಕ ನೂತನ ಥಾರ್ ಮಾರುಕಟ್ಟೆ ಪ್ರವೇಶಿಸಲಿದೆ. ನೂತನ ಮಹೀಂದ್ರ ಥಾರ್ ವಿಶೇಷತೆಗಳ ವಿವರ ಇಲ್ಲಿದೆ.
ಮುಂಬೈ(ಮೇ.10): ನೂತನ ಮಹೀಂದ್ರ ಥಾರ್ ಹಾಗೂ ಸದ್ಯ ಮಾರುಕಟ್ಟೆಯಲ್ಲಿರುವ ಥಾರ್ ಜೀಪ್‌ಗೂ ಹಲವು ವ್ಯತ್ಯಾಸಗಳಿವೆ. ನೂತನ ಥಾರ್ ಜೀಪ್ ಡ್ಯಾಶ್‌ಬೋರ್ಡ್ ಸಂಪೂರ್ಣ ಬದಲಾಗಿದೆ. ಟಚ್‌ಸ್ಕ್ರೀನ್ ಇನ್ಫೊಟೈನ್‌ಮೆಂಟ್ ಸಿಸ್ಟಮ್, ಹೊಸ ಇನ್ಸ್ಟುಮೆಂಟ್ ಕ್ಲಸ್ಟರ್ , ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ ಸೇರಿದಂತೆ ಹಲವು ಬದಲಾವಣೆಗಳು ನೂತನ ಥಾರ್ ಜೀಪ್‌ನಲ್ಲಿದೆ.
5ಸಾವಿರ ರೂ.ಗೆ ಬುಕ್ ಮಾಡಿ ಮಹೀಂದ್ರ ಸ್ಕಾರ್ಪಿಯೋ BS6, ಆನ್‌ಲೈನ್‌ನಲ್ಲಿ ಮಾತ್ರ!.
ಆಲೋಯ್ ವೀಲ್, ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), ಡ್ಯುಯೆಲ್ ಏರ್‌ಬ್ಯಾಗ್, ಸ್ಪೀಡ್ ಅಲರ್ಟ್, ರಿವರ್ಸ್ ಪಾರ್ಕಿಂಗ್ ಸಿಸ್ಟಮ್ ಸೇರಿದಂತೆ ಹೆಚ್ಚುವರಿ ಫೀಚರ್ಸ್ ಸೇರಿಸಲಾಗಿದೆ. ನೂತನ ಥಾರ್ ಆಫ್ ರೋಡ್ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. BA6 ಎಂಜಿನ್ ಹೊಂದಿರುವ ನೂತನ ಥಾರ್, 2.2 ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 140 BHP ಪವರ್ ಸಾಮರ್ಥ್ಯ ಹೊಂದಿದೆ.
ಹೆಚ್ಚು ಆಕರ್ಷಕ, ನೂತನ BS6 ಮಹೀಂದ್ರ ಬೊಲೆರೋ ಬೆಲೆ ಬಹಿರಂಗ!.
6 ಸ್ಪೀಡ್ ಮಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಲಭ್ಯವಿದೆ. ಫೋರ್ಸ್ ಗೂರ್ಖಾ ಸೇರಿದಂತೆ ಜೀಪ್‌ಗಳಿಗೆ ಪ್ರತಿಸ್ಪರ್ಧಿಯಾಗಿರುವ ನೂತನ ಥಾರ್ ಬೆಲೆ ಬಹಿರಂಗವಾಗಿಲ್ಲ. ಸದ್ಯ ಮಾರುಕಟ್ಟೆಯಲ್ಲಿರುವ ಥಾರ್ ಆರಂಭಿಕ ಬೆಲೆ 9.59 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ), ಗರಿಷ್ಠ ಬೆಲೆ 9.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).