ಮಹೀಂದ್ರ XUV 300 ಬಿಡುಗಡೆ- ಕಡಿಮೆ ಬೆಲೆಯ SUV ಕಾರು!

ಮಹೀಂದ್ರ ನೂತನ XUV300 ಕಾರು  ಬಿಡುಗಡೆಯಾಗಿದೆ. ಮಾರುತಿ ಬ್ರಿಜಾ , ಟಾಟಾ ನೆಕ್ಸಾನ್, ಇಕೋ ಸ್ಪೋರ್ಟ್ ಸೇರಿದಂತೆ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯುತ್ತಿರುವ ಈ ಕಾರಿನ ವಿಶೇಷತೆ ಏನು? ಇದರ ಬೆಲೆ, ಮೈಲೇಜ್ ಎಷ್ಟು? ಇಲ್ಲಿದೆ ವಿವರ.

Mahindra launch XUV300 car in India price starts with rs 7 90 lakh

ಮುಂಬೈ(ಫೆ.14): ಪ್ರೇಮಿಗಳ ದಿನ ಮಹೀಂದ್ರ ಸಂಸ್ಥೆಯ ಬಹುನಿರೀಕ್ಷಿತ  XUV 300 ಕಾರು ಬಿಡುಗಡೆಯಾಗಿದೆ. ಕಡಿಮೆ ಬೆಲೆಯ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರೋ ನೂತನ  XUV 300 ಕಾರು ಹಲವು ವಿಶೇಷತೆಗಳನ್ನ ಒಳಗೊಂಡಿದೆ. ಮಾರುತಿ ಬ್ರಿಜಾ, ಟಾಟಾ ನೆಕ್ಸಾನ್ ಹಾಗೂ ಫೋರ್ಡ್ ಇಕೋ ಸ್ಪೋರ್ಟ್ ಸೇರಿದಂತೆ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪೈಪೋಟಿ ನೀಡಲಿದೆ.

ಇದನ್ನೂ ಓದಿ: ರಿವಿಯಾನ್ ಮೋಟಾರ್ಸ್ ಖರೀದಿಸಲು ಮುಂದಾದ ಅಮೇಜಾನ್!

Mahindra launch XUV300 car in India price starts with rs 7 90 lakh

ನೂತನ ಮಹೀಂದ್ರ  XUV300 ಕಾರಿನ ಬೆಲೆ 7.90 ಲಕ್ಷ ರೂಪಾಯಿಂದ ಆರಂಭವಾಗಲಿದೆ. ಟಾಪ್ ವೇರಿಯೆಂಟ್ ಬೆಲೆ 11.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್‌ಗಳಲ್ಲಿ ಮಹೀಂದ್ರ  XUV300 ಕಾರು ಲಭ್ಯವಿದೆ. ಪೆಟ್ರೋಲ್ ವೇರಿಯೆಂಟ್ ಕಾರು ಗರಿಷ್ಠ 17 ಕಿ.ಮೀ ಪ್ರತಿ ಲೀಟರ್‌ಗೆ ನೀಡಿದರೆ, ಡೀಸೆಲ್ ವೇರಿಯೆಂಟ್ ಗರಿಷ್ಠ 20 ಕಿ.ಮೀ ಪ್ರತಿ ಲೀಟರ್‌ಗೆ ನೀಡಲಿದೆ. 

ಇದನ್ನೂ ಓದಿ: ಮೋದಿ ಸರ್ಕಾರದ ಹೊಸ ಯೋಜನೆ- ಎಲೆಕ್ಟ್ರಿಕ್ ವಾಹನಕ್ಕೆ ಸುಲಭ ಸಾಲ!

Mahindra launch XUV300 car in India price starts with rs 7 90 lakh

ಮಹೀಂದ್ರXUV300 ಕಾರಿನ ಬೆಲೆ

ವೇರಿಯೆಂಟ್ ಪೆಟ್ರೋಲ್  ಡಿಸೆಲ್
W4 ₹ 7.90  ₹ 8.49
W6 ₹ 8.7 ₹ 9.30
W8 ₹ 10.25  ₹ 10.8
W8(O) ₹ 11.44  ₹ 11.99

ಇದನ್ನೂ ಓದಿ: ನೆಲಕ್ಕೆ ಬಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಸುಲಭವಾಗಿ ಎತ್ತಲು ಇಲ್ಲಿದೆ ಟಿಪ್ಸ್!
ಮಹೀಂದ್ರ  XUV300 ಕಾರು 3990 mm ಉದ್ದ, 1820 mm ಅಗಲ ಹಾಗೂ 1620 mm ಎತ್ತರವಿದೆ. ಇನ್ನೂ ವೀಲ್ಹ್ ಬೇಸ್ 2620 mm ಹೊಂದಿದೆ.  ನೂತನ XUV300 ಕಾರಿನ ಗ್ರೌಂಡ್ ಕ್ಲೀಯರೆನ್ಸ್  180 ಮಿಲಿಮೀಟರ್ಸ್. ಆದರೆ ಮಾರುತಿ ಬ್ರಿಜಾ, ಟಾಟಾ ನೆಕ್ಸಾನ್ ಹಾಗೂ ಇಕೋಸ್ಪೋರ್ಟ್ ಕಾರಿನ ಗ್ರೌಂಡ್ ಕ್ಲೀಯರೆನ್ಸ್  198 ಮಿಲಿಮೀಟರ್ಸ್‌ಗಿಂತ ಹೆಚ್ಚಿದೆ.

Mahindra launch XUV300 car in India price starts with rs 7 90 lakh

ಸ್ಪೆಸಿಫಿಕೇಶನ್ 1.5 ಲೀಟರ್ ಡಿಸೆಲ್  1.2 ಲೀಟರ್ ಪೆಟ್ರೋಲ್
ಎಂಜಿನ್ 1492 cc 1198 cc
ಗರಿಷ್ಠ ಪವರ್ 115 bhp @ 3750 rpm 110 bhp @ 5000 rpm
ಗರಿಷ್ಠ ಟಾರ್ಕ್ 300 Nm @ 1500 - 2500 rpm 200 Nm @ 2000 - 3500 rpm
ಗೇರ್ ಬಾಕ್ಸ್ 6-speed manual 6-speed manual
Latest Videos
Follow Us:
Download App:
  • android
  • ios