ರಿವಿಯಾನ್ ಮೋಟಾರ್ಸ್ ಖರೀದಿಸಲು ಮುಂದಾದ ಅಮೇಜಾನ್!
ರಿವಿಯಾನ್ ಎಲೆಕ್ಟ್ರಿಕ್ ಪಿಕ್ಅಪ್ ವಾಹನಗಳು ಅಮೇರಿಕಾದಲ್ಲಿ ಅತ್ಯಂತ ಜನಪ್ರಿಯ. ಟೆಸ್ಲಾ ವಾಹನಗಳಿಗೆ ಪ್ರತಿಸ್ಪರ್ಧಿಯಾಗಿರುವ ರಿವಿಯಾನ್ ಮೋಟಾರ್ಸ್‌ನಲ್ಲಿ ಬಂಡವಾಳ ಹೂಡಲು ಅಮೇಜಾನ್.ಕಾಂ ಮುಂದಾಗಿದೆ.
ನ್ಯೂಯಾರ್ಕ್(ಫೆ.13): ಟೆಸ್ಲಾ ಪ್ರತಿಸ್ಪರ್ಧಿಯಾಗಿರುವ ಅಮೇರಿಕಾ ಮೂಲದ ರಿವಿಯಾನ್ ಮೋಟಾರ್ಸ್ ಕಂಪೆನಿಯಲ್ಲಿ ಬಂಡವಾಳ ಹೂಡಲು ಇದೀಗ ಹಲವು ಪ್ರತಿಷ್ಠಿತ ಕಂಪೆನಿಗಳು ಮುಂದೆ ಬಂದಿದೆ. ಒಂದೆಡೆಯಿಂದ GM ಮೋಟಾರ್ಸ್ ಬಂಡವಾಳ ಹೂಡಲು ನಿರ್ಧರಿಸಿದ್ದರೆ, ಇತ್ತ ಅಚ್ಚರಿ ಎಂಬಂತೆ ಅಮೇಜಾನ್.ಕಾಂ ಕೂಡ ಆಟೋಮೊಬೈಲ್ ಕ್ಷೇತ್ರಕ್ಕೆ ಕಾಲಿಡಲು ಸಜ್ಜಾಗಿದೆ.
ಇದನ್ನೂ ಓದಿ: ಮೋದಿ ಸರ್ಕಾರದ ಹೊಸ ಯೋಜನೆ- ಎಲೆಕ್ಟ್ರಿಕ್ ವಾಹನಕ್ಕೆ ಸುಲಭ ಸಾಲ!
ರಿವಿಯಾನ್ ಎಲೆಕ್ಟ್ರಿಕ್ ಪಿಕ್ಅಪ್ ಆಟೋಮೊಬೈಲ್ ಕಂಪನಿ, ಟೆಸ್ಲಾಗೆ ಪೈಪೋಟಿಯಾಗಿ ವಾಹನಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ರಿವಿಯಾನ್ ಎಲೆಕ್ಟ್ರಿಕ್ ಪಿಕ್ಅಪ್ ವಾಹನಗಳು ಅಮೇರಿಕದಲ್ಲಿ ಹೆಚ್ಚು ಪ್ರಸಿದ್ಧಿಯಾಗಿದೆ. ಇದೀಗ ಇದೇ ಕಂಪನಿಯಲ್ಲಿ ಬಂಡವಾಳ ಹೂಡಲು ಅಮೇಜಾನ್.ಕಾಂ ಮಾತುಕತೆ ನಡೆಸಿದೆ.
ಇದನ್ನೂ ಓದಿ: ನೆಲಕ್ಕೆ ಬಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಸುಲಭವಾಗಿ ಎತ್ತಲು ಇಲ್ಲಿದೆ ಟಿಪ್ಸ್!
ಅಮೇಜಾನ್ ಹಾಗೂ GM ಮೋಟಾರ್ಸ್ ನಡುವೆ ಪೈಪೋಟಿ ಎರ್ಪಟ್ಟಿದೆ. ಹೀಗಾಗಿ ರಿವಿಯಾನ್ ಮೋಟಾರ್ಸ್ ಜೊತೆ ಎರಡೂ ಕಂಪೆನಿಗಳು ಮಾತುಕತೆಗೆ ಮುಂದಾಗಿದೆ. GM ಮೋಟಾರ್ಸ್ ಇದುವರೆಗೂ ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿಲ್ಲ. ಇದೀಗ ರಿವಿಯಾನ್ ಮೂಲಕ ಎಲೆಕ್ಟ್ರಿಕ್ ವಾಹನದತ್ತ ಚಿತ್ತ ಹರಿಸಲು ಮುಂದಾಗಿದೆ.