ರಾಜಧಾನಿ ಪ್ರವೇಶಿಸುವಂತಿಲ್ಲ ಇತರ ರಾಜ್ಯದ ಹಳೇ ವಾಹನ!
ರಾಷ್ಟ್ರ ರಾಜಧಾನಿಯ ಹಳೇ ವಾಹನಗಳು ಬಳಕೆ ನಿಷೇಧಿಸಲಾಗಿದೆ. ಇದೀಗ ರಾಜಧಾನಿಗೆ ಇತರ ರಾಜ್ಯದ ಹಳೇ ವಾಹನಗಳು ಕೂಡ ಎಂಟ್ರಿ ಕೊಂಡುವಂತಿಲ್ಲ. ಮಾಲಿನ್ಯ ನಿಯಂತ್ರಿಸಲು ಹೊಸ ನಿಯಮಗಳೇನು? ಇಲ್ಲಿದೆ ವಿವರ.
ನವದೆಹಲಿ(ಫೆ.15): ಮಾಲಿನ್ಯ ನಿಯಂತ್ರಿಸಲು ರಾಷ್ಟ್ರ ರಾಜಧಾನಿ ದೆಹೆಲಿಯಲ್ಲಿ 10 ವರ್ಷಕ್ಕಿಂತ ಹಳೆಯ ಡೀಸೆಲ್ ಹಾಗೂ 15 ವರ್ಷಕ್ಕಿಂತ ಹಳೇ ಪೆಟ್ರೋಲ್ ವಾಹನಗಳು ದೆಹಲಿಯಲ್ಲಿ ಓಡಾಟ ಮಾಡುವಂತಿಲ್ಲ. ಇದೀಗ ಈ ಆದೇಶವನ್ನ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಇಷ್ಟೇ ಅಲ್ಲ, ಇದರೊಂದಿಗೆ ಹೆಚ್ಚುವರಿ ನಿಯಮಗಳು ಸೇರಿಕೊಳ್ಳುತ್ತಿದೆ.
ಇದನ್ನೂ ಓದಿ: ಮನೆ ಮುಂದೆ ಕಾರು ನಿಲ್ಲಿಸಿದರೂ ನೀಡಬೇಕು ಪಾರ್ಕಿಂಗ್ ಚಾರ್ಚ್!
ನೂತನ ನಿಯಮ ರಾಜಧಾನಿ ದೆಹಲಿ ರಿಜಿಸ್ಟ್ರೇಶನ್ ವಾಹನಗಳಿಗೆ ಮಾತ್ರವಲ್ಲ. ಇತರ ರಾಜ್ಯದ ವಾಹನಗಳಿಗೂ ಅನ್ವಯವಾಗುತ್ತೆ. ಇದೀಗ ದೆಹಲಿಯಲ್ಲಿ ಇತರ ರಾಜ್ಯದ ಹಳೇ ವಾಹನಗಳು ಪ್ರವೇಶಿಸುವಂತಿಲ್ಲ. ಒಂದು ವೇಳೆ ಹಳೇ ವಾಹನಗಳು ದೆಹಲಿ ಪ್ರವೇಶಿಸಿದರೆ, ಕನಿಷ್ಠ 15,000 ರೂಪಾಯಿ ದಂಡ ವಿಧಿಸಲಾಗುವುದು.
ಇದನ್ನೂ ಓದಿ: ಹೆಲ್ಮೆಟ್ ಕಡ್ಡಾಯ ವಿರೋಧಿಸಿ ಬೀದಿಗಳಿದು ಪ್ರತಿಭಟನೆ ಮಾಡಿದ ಮುಖ್ಯಮಂತ್ರಿ!
ಹಳೇ ವಾಹನಗಳನ್ನು ಸಾರ್ವಜನಿಕ ಸ್ಥಳಗಳಲ್ಲೂ ಪಾರ್ಕ್ ಮಾಡುವಂತಿಲ್ಲ. 10 ವರ್ಷಕ್ಕಿಂತ ಹಳೆಯ ಡೀಸೆಲ್ ಹಾಗೂ 15 ವರ್ಷಕ್ಕಿಂತ ಹಳೇ ಪೆಟ್ರೋಲ್ ವಾಹನಗಳನ್ನು ಗುಜುರಿಗೆ ನೀಡಲು ಈಗಾಗಲೇ ಆದೇಶಿಸಲಾಗಿದೆ. ಒಂದು ವೇಳೆ ಈ ವಾಹವನ್ನು ಹಾಗೇ ಇಡುವುದಾದರೆ, ರಸ್ತೆ ಬದಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಕ್ ಮಾಡುವಂತಿಲ್ಲ.
ಇದನ್ನೂ ಓದಿ: ದುಬೈ ಅಲ್ಲ ಇದು ಭಾರತ - ಪೊಲೀಸರಿಗೆ ಪವರ್‌ಲ್ಯಾಂಡ್ 4X4 ATV ಬೈಕ್!
ದೆಹಲಿಯ ಹಳೇ ವಾಹನಗಳನ್ನ ಇತರ ಯಾವುದೇ ರಾಜ್ಯಕ್ಕೂ ಅಥವಾ ಗ್ರಾಮೀಣ ಪ್ರದೇಶಗಳಿಗೂ ಮಾರಾಟ ಮಾಡುವಂತಿಲ್ಲ. ಹಳೇ ವಾಹನಗಳ ರಿಜಿಸ್ಟ್ರೇಶನ್ ಕೂಡ ರದ್ದುಮಾಡಲಾಗುತ್ತಿದೆ. ಈ ಮೂಲಕ ಇತರ ಪ್ರದೇಶಗಳಲ್ಲೂ ಮಾಲಿನ್ಯ ಹೆಚ್ಚಾಗಂತೆ ತಡೆಯಲು ನಿಯಮ ಜಾರಿಗೊಳಿಸಲಾಗುತ್ತಿದೆ.