ಮನೆ ಮುಂದೆ ಕಾರು ನಿಲ್ಲಿಸಿದರೂ ನೀಡಬೇಕು ಪಾರ್ಕಿಂಗ್ ಚಾರ್ಚ್!

ಮನೆಯಲ್ಲಿ ಪಾರ್ಕಿಂಗ್ ಇಲ್ಲ ಎಂದು ಮನೆ ಮುಂದಿನ ರಸ್ತೆ, ಪಾದಾಚಾರಿ ರಸ್ತೆಯಲ್ಲಿ ಕಾರು ಅಥವಾ ವಾಹನ ಪಾರ್ಕಿಂಗ್ ಮಾಡುವುದು ಇನ್ನು ಉಚಿತವಲ್ಲ. ರಸ್ತೆಯಲ್ಲಿ ವಾಹನ ಸಂಚಾರ ಇಲ್ಲ, ಯಾರಿಗೂ ಸಮಸ್ಯೆ ಇಲ್ಲ ಎಂದರೂ ಕಾರು ಪಾರ್ಕಿಂಗ್ ಮಾಡುವಂತಿಲ್ಲ. ಈ ನೂತನ ನಿಯಮ ಜಾರಿಯಾಗುತ್ತಿರುವುದು ಬೆಂಗಳೂರಿನಲ್ಲಿ.

Vehicle parking in front of home is also chargeable New plan to be implemented in Bangalore

ಬೆಂಗಳೂರು(ಫೆ.15): ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಇಂದು ನಿನ್ನೆಯದಲ್ಲ. ಇದುವರೆಗೂ ಇದಕ್ಕೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಆದರೆ ಪ್ರತಿ ವರ್ಷ ಬೆಂಗಳೂರಲ್ಲಿ  ವಾಹನಗಳ ಸಂಖ್ಯೆ ಹೆಚ್ಚಾಗ್ತಾನೆ ಇದೆ. ಹೀಗಾಗಿ ಪಾರ್ಕಿಂಗ್ ಕೂಡ ಅತೀ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಇದೀಗ ಪಾರ್ಕಿಂಗ್ ಜಾಗ ಇಲ್ಲ ಎಂದು ಮನೆ ಮುಂದೆ ಕಾರು ನಿಲ್ಲಿಸುವುದು ಇನ್ಮುಂದೆ ಉಚಿತವಲ್ಲ.

ಇದನ್ನೂ ಓದಿ: ಹೆಲ್ಮೆಟ್ ಕಡ್ಡಾಯ ವಿರೋಧಿಸಿ ಬೀದಿಗಳಿದು ಪ್ರತಿಭಟನೆ ಮಾಡಿದ ಮುಖ್ಯಮಂತ್ರಿ!

ಮನೆಯಲ್ಲಿ ಪಾರ್ಕಿಂಗ್ ಸ್ಥಳ ಇಲ್ಲದಿದ್ದರೆ, ಮನೆ ಎದುರು ರಸ್ತೆಯಲ್ಲಿ ಬಹುತೇಕರು ಕಾರು ನಿಲ್ಲಿಸುತ್ತಾರೆ. ಇನ್ನು ಕೆಲವರು ಪಕ್ಕದ ರಸ್ತೆಯಲ್ಲಿ,ಪಾದಾಚಾರಿ ರಸ್ತೆಯಲ್ಲಿ ಸೇರಿದಂತೆ ಹಲವೆಡೆ ಕಾರು ಪಾರ್ಕಿಂಗ್ ಮಾಡುತ್ತಾರೆ. ಆದರೆ ಬೆಂಗಳೂರಲ್ಲಿ ನೂತನ ನಿಯಮ ಜಾರಿಯಾಗುತ್ತಿದೆ. ಮನೆ ಪಾರ್ಕಿಂಗ್ ಬಿಟ್ಟು, ಮನೆ ಮುಂದಿನ ರಸ್ತೆ, ಪಕ್ಕದ ರಸ್ತೆ, ನಿರ್ಜನ ರಸ್ತೆ ಎಲ್ಲೇ ನಿಲ್ಲಿಸಿದರೂ ಪಾರ್ಕಿಂಗ್ ಚಾರ್ಜ್ ನೀಡಬೇಕು.

ಇದನ್ನೂ ಓದಿ: ವಿಜಯ್ ಮಲ್ಯ to ನೀರವ್ ಮೋದಿ: ಭಾರತದಲ್ಲಿ ಬಿಟ್ಟು ಹೋದ ಕಾರುಗಳಿವು!

ರಸ್ತೆ, ಪಾದಾಚಾರಿ ಮಾರ್ಗ ವಾಹನ ಪಾರ್ಕ್ ಮಾಡಲು ಅಲ್ಲ. ಹೀಗಾಗಿ ನಾವು ಇದಕ್ಕಾಗಿ ಸೂಕ್ತ ನಿಯಮ ಜಾರಿಗೆ ತರುತ್ತಿದ್ದೇವೆ. ಮನೆಯ ಪಾರ್ಕಿಂಗ್ ಅಥವಾ ನಿಗಧಿತ ಪಾರ್ಕಿಂಗ್ ಸ್ಥಳ ಹೊರತುಪಡಿಸಿ ಎಲ್ಲೇ ಕಾರು ಪಾರ್ಕ್ ಮಾಡಿದರೂ ದಂಡ ಅಥವಾ ಪಾರ್ಕಿಂಗ್ ಚಾರ್ಜ್ ನೀಡಬೇಕು ಎಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮಹೇಂದ್ರ ಜೈನ್ ಹೇಳಿದ್ದಾರೆ.

ಇದನ್ನೂ ಓದಿ: ನೆಲಕ್ಕೆ ಬಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಸುಲಭವಾಗಿ ಎತ್ತಲು ಇಲ್ಲಿದೆ ಟಿಪ್ಸ್!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಸ್ತೆ ಬದಿಗಳಲ್ಲಿ ವಾಹನ ಪಾರ್ಕಿಂಗ್‌ ಸಮಸ್ಯೆಗೆ ಸೂಕ್ತ ಯೋಜನೆ ರೂಪಿಸಲು ಸೂಚಿಸಿದೆ. ಆರಂಭದಲ್ಲಿ ಹೆಚ್ಚು ಟ್ರಾಫಿಕ್, ಜನಸಂದಣಿ ಇರೋ ರಸ್ತೆಗಳಲ್ಲಿ ಈ ಯೋಜನೆ ಜಾರಿಗೊಳಿಸಲು BBMP ನಿರ್ಧರಿಸಿದೆ. ಬಳಿಕ ಬೆಂಗಳೂರಿನೆಲ್ಲಡೆ ಈ ನಿಯಮ ಜಾರಿಯಾಗಲಿದೆ. 

Latest Videos
Follow Us:
Download App:
  • android
  • ios