60.6 ಲಕ್ಷ ರೂಪಾಯಿಗೆ BMW X4 ಕಾರು- ಏನಿದರ ವಿಶೇಷತೆ?

BMW X4 ಕಾರು ಬಿಡುಗಡೆಯಾಗಿದೆ. ಹಲವು ವಿಶೇಷತೆ, ಗರಿಷ್ಠ ಸುರಕ್ಷತೆ ಹೊಂದಿರುವ BMW X4 ಕಾರು ಇತರ ಲಕ್ಸುರಿ ಕಾರಿಗೆ ಪೈಪೋಟಿ ನೀಡಲು ಸಜ್ಜಾಗಿದೆ. ಈ ಕಾರಿನ ಇತರ ಫೀಚರ್ಸ್ ಮಾಹಿತಿ ಇಲ್ಲಿದೆ.
 

luxury car competitor BMW X4 car launched in India

ನವದೆಹಲಿ(ಜ.21): BMW ಸಂಸ್ಥೆ ನೂತನ BMW X4 ಕಾರು ಬಿಡುಗಡೆ ಮಾಡಿದೆ. ಇದರ ಬೆಲೆ 60.6 ಲಕ್ಷ  ರೂಪಾಯಿಯಿಂದ ಆರಂಭವಾಗಲಿದೆ. ಗರಿಷ್ಠ ಸುರಕ್ಷತೆ, ಹೆಚ್ಚು ಆರಾಮದಾಯ ಪ್ರಯಾಣಕ್ಕಾಗಿ BMW ನೂತನ ಕಾರು ಬಿಡುಗಡೆ ಮಾಡಿದೆ. BMW X6 ಈಗಾಗಲೇ ಭಾರತದಲ್ಲಿ ಮಾರಾಟವಾಗುತ್ತಿದೆ. ಇದೀಗ BMW X4 ಬಿಡುಗಡೆ ಮಾಡೋ ಮೂಲಕ ಇತರ ಲಕ್ಸುರಿ ಕಾರುಗಳಿಗೆ ಭಾರಿ ಪೈಪೋಟಿ ನೀಡೋ ವಿಶ್ವಾಸದಲ್ಲಿದೆ.

luxury car competitor BMW X4 car launched in India

ಇದನ್ನೂ ಓದಿ: ಯಮಹಾ FZ, ಫೆಜರ್ ABS ಬೈಕ್ ಬಿಡುಗಡೆ- ಬೆಲೆ ಎಷ್ಟು?

BMW X4 ಕಾರಿನಲ್ಲಿ 6 ಏರ್‌ಬ್ಯಾಗ್ಸ್ (ಮುಂಭಾಗ, ಸೈಡ್, ಡ್ರೈವರ್, ಇತರ ಪ್ರಯಾಣಿಕರ, ಹೆಡ್ ಏರ್‌ಬ್ಯಾಗ್ ಹಾಗೂ ರೇರ್ ಏರ್‌ಬ್ಯಾಗ್) ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಕಾರ್ನರಿಂಗ್ ಬ್ರೇಕ್ ಕಂಟ್ರೋಲ್) ಎಲ್ಇಡಿ ಹೆಡ್‌ಲ್ಯಾಂಪ್ಸ್, ರೈನ್ ಸೆನ್ಸಿಂಗ್ ವೈಪ್ಸ್, ಆಟೋ ಹೆಡ್‌ಲ್ಯಾಂಪ್ಸ್ , ಪನೋರಮಿಕ್ ಸನ್‌ರೂಫ್, ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಫ್ರಂಟ್ & ರೇರ್ ಪಾರ್ಕಿಂಗ್ ಸೆನ್ಸಾರ್, ರೇರ್ ವಿವ್ಯೂ ಕ್ಯಾಮರ, ಆ್ಯಪಲ್ ಕಾರ್ ಪ್ಲೇ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.

 

 

ಇದನ್ನೂ ಓದಿ: ಫೋರ್ಡ್ ಮಸ್ತಂಗ್ to ರೋಲ್ಸ್ ರಾಯ್ಸ್- ಹೃತಿಕ್ ಬಳಿ ಇದೆ ಅತ್ಯಂತ ದುಬಾರಿ ಕಾರು!

BMW X4 ಕಾರು ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. 2.0 ಲೀಟರ್ ಡೀಸೆಲ್ ಎಂಜಿನ್, 190ps ಗರಿಷ್ಠ ಪವರ್ 400nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇನ್ನು 2.0 ಲೀಟರ್ ಪೆಟ್ರೋಲ್ ಎಂಜಿನ್, 253ps ಗರಿಷ್ಠ ಪವರ್, 350nm ಪೀಕ್ ಟಾರ್ಕ್ ಉತ್ವಾದಿಸಲಿದೆ.

Latest Videos
Follow Us:
Download App:
  • android
  • ios