ನವೆದಹಲಿ(ಏ.03): 2018ರಲ್ಲಿ KTM ಡ್ಯೂಕ್ 125 ಬೈಕ್ ಬಿಡುಗಡೆಯಾಗಿದೆ. 125 ಸಿಸಿ ಬೈಕ್ ಬಿಡುಗಡೆ ಮಾಡೋ ಮೂಲಕ ಬೈಕ್ ಕ್ಷೇತ್ರದಲ್ಲಿ ಯುವ ಗ್ರಾಹಕರನ್ನು ಸೆಳೆದಿತ್ತು.  ಇದೀಗ  KTM ಡ್ಯೂಕ್ 125 ಬೈಕ್ ಬೆಲೆ ಹೆಚ್ಚಳವಾಗಿದೆ. ಹೊಸ ಆರ್ಥಿಕ ವರ್ಷದ ಆರಂಭದಲ್ಲೇ KTM ಡ್ಯೂಕ್ 125 ಬೈಕ್ ಬೆಲೆ 6,800 ರೂಪಾಯಿ ಹೆಚ್ಚಳವಾಗಿದೆ.

ಇದನ್ನೂ ಓದಿ: ಕಡಿಮೆ ಬೆಲೆ, ಗರಿಷ್ಠ ಮೈಲೇಜ್- ದಾಖಲೆ ಬರೆದ TVS ರೆಡಿಯಾನ್!

KTM ಡ್ಯೂಕ್ 125 ಬೈಲೆ 1.18 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಬೆಲೆಯೊಂದಿಗೆ ಬಿಡುಗಡೆಯಾಗಿತ್ತು. ನೂತನ ಬೆಲೆ 1.25 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).  KTM ಡ್ಯೂಕ್ 125  ಬೈಕ್ ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್(ABS) ತಂತ್ರಜ್ಞಾನ ಹೊಂದಿದೆ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಬುಲೆಟ್ 350 ABS ಬೈಕ್ ಬೆಲೆ ಬಹಿರಂಗ!

15ಪಿಎಸ್ ಎಂಜಿನ್, 6 ಸ್ಪೀಡ್ ಗೇರ್ ಹೊಂದಿದೆ. 390 ಡ್ಯೂಕ್ ಹಾಗೂ 125 ಡ್ಯೂಕ್ ವಿನ್ಯಾಸ ಹೆಚ್ಚೂ ಕಡಿಮೆ ಒಂದೇ ರೀತಿ ಇರಲಿದೆ. 17 ಇಂಚು ಆಲೋಯ್ ವೀಲ್ಹ್ಸ್, LED ಹೆಡ್‌ಲ್ಯಾಂಪ್ಸ್ ಹೊಂದಿದೆ. 125 ಸಿಸಿ ಸಿಂಗಲ್ ಸಿಲಿಂಡರ್ ಫ್ಯೂಯೆಲ್ ಇಂಜೆಕ್ಟ್ ಮೋಟರ್ ಹೊಂದಿದೆ.