ಕಡಿಮೆ ಬೆಲೆ, ಗರಿಷ್ಠ ಮೈಲೇಜ್- ದಾಖಲೆ ಬರೆದ TVS ರೆಡಿಯಾನ್!
TVS ರೆಡಿಯಾನ್ ಬೈಕ್ ಕೇವಲ 7 ತಿಂಗಳಲ್ಲಿ ಹೊಸ ದಾಖಲೆ ಬರೆದಿದೆ. ಕಡಿಮೆ ಅವಧಿಯಲ್ಲಿ ದಾಖಲೆ ಬರೆದ ಹೆಗ್ಗಳಿಕೆಗೆ TVS ರೆಡಿಯಾನ್ ಪಾತ್ರವಾಗಿದೆ. ಹೀರೋ ಸ್ಪ್ಲೆಂಡರ್ ಹಾಗೂ ಇತರ 110 ಸಿಸಿ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿರುವ ಈ TVS ರೆಡಿಯಾನ್ ವಿಶೇಷತೆ ಹಾಗೂ ದಾಖಲೆ ಮಾಹಿತಿ ಇಲ್ಲಿದೆ.
ಚೆನ್ನೈ(ಏ.03): ಹೀರೋ ಸ್ಪ್ಲೆಂಡರ್ ಸೇರಿದಂತೆ ಕಡಿಮೆ ಬೆಲೆಯ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಳಿದ TVS ರೆಡಿಯಾನ್ ಇದೀಗ ಹೊಸ ದಾಖಲೆ ಬರೆದಿದೆ. 2018ರಲ್ಲಿ ಬಿಡುಗಡೆಯಾದ ಈ ಬೈಕ್ ಇದೀಗ 7 ತಿಂಗಳಲ್ಲಿ 1 ಲಕ್ಷ ಬೈಕ್ ಮಾರಾಟವಾಗೋ ಮೂಲಕ ಹೊಸ ದಾಖಲೆ ಬರೆದಿದೆ. TVS ರೆಡಿಯಾನ್ ಗರಿಷ್ಠ ಮಾರಾಟ ದಾಖಲೆ ಬರೆಯಲು ಹಲುವ ಕಾರಣವಿದೆ.
ಇದನ್ನೂ ಓದಿ: ಕಾರಿಗೆ 4.9 ಲಕ್ಷ ರೂಪಾಯಿ ದಂಡ- ತಲೆ ತಿರುಗಿ ಬಿದ್ದ ಮಾಲೀಕ!
ಟಿವಿಎಸ್ ರೆಡಿಯೊನ್ ಬೈಕ್ ಬೆಲೆ 51,884 ರೂಪಾಯಿ ಮಾತ್ರ. 110 ಸಿಸಿ ಬೈಕ್ ಹೊಸ ವಿನ್ಯಾಸ, ಆಕರ್ಷ ಬಣ್ಣ ಹಾಗೂ ಹೊಸ ತಂತ್ರಜ್ಞಾನಗಳೊಂದಿಗೆ ಟಿವಿಎಸ್ ರೆಡಿಯೊನ್ ಗ್ರಾಹಕರ ನೆಚ್ಚಿನ ಬೈಕ್ ಆಗಿ ಹೊರಹೊಮ್ಮಿದೆ. ರೆಡಿಯೊನ್ ಬೈಕ್ ಪ್ರತಿ ಲೀಟರ್ ಪೆಟ್ರೋಲ್‌ಗೆ 69.3 ಕೀಮಿ ಮೈಲೇಜ್ ನೀಡಲಿದೆ ಎಂದು ಸಂಸ್ಥೆ ಹೇಳಿದೆ. 4 ಸ್ಪೀಡ್ ಗೇರ್ ಬಾಕ್ಸ್, 8 ಬಿಹೆಚ್‌ಪಿ ಹಾಗೂ 9.7 ಎನಎಂ ಟಾರ್ಕ್ಯೂ ಉತ್ಪಾದಿಸಲಿದೆ.
ಇದನ್ನೂ ಓದಿ: ಮತ್ತೆ ಬಿಡುಗಡೆಯಾಗುತ್ತಿದೆ ಅಂಬಾಸಿಡರ್ ಕಾರು
8 ಇಂಚು ಅಲೋಯ್ ವೀಲ್ಸ್, ಸಿಂಕ್ರೋನೈಸಡ್ ಬ್ರೇಕಿಂಗ್ ಟೆಕ್ನೋಲಜಿ, ಟ್ವಿನ್ ಶಾಕಾಬ್ಸರ್ ಹಾಗೂ ಟೆಲಿಸ್ಕೋಪಿಕ್ ಫೋರ್ಕ್ಸ್ ಹೊಂದಿರುವ ರೆಡಿಯೊನ್ ಬೈಕ್ ಪ್ರೀಯರನ್ನ ಮೋಡಿ ಮಾಡುತ್ತಿದೆ.ಇತರ 110 ಸಿಸಿ ಬೈಕ್‌ಗಳಿಗೆ ಹೋಲಿಸಿದರೆ ಟಿವಿಎಸ್ ರೆಡಿಯಾನ್ ಬೈಕ್ ಉತ್ತಮವಾಗಿದೆ. ಇಂಜಿನ್ ಸಾಮರ್ಥ್ಯ, ಮೈಲೇಜ್ ಹಾಗೂ ಆಕರ್ಷಕ ವಿನ್ಯಾಸದಿಂದ ಕೂಡಿದೆ.