Asianet Suvarna News Asianet Suvarna News

ರಾಯಲ್ ಎನ್‌ಫೀಲ್ಡ್ ಬುಲೆಟ್ 350 ABS ಬೈಕ್ ಬೆಲೆ ಬಹಿರಂಗ!

ರಾಯಲ್ ಎನ್‌ಫೀಲ್ಡ್ ಬೈಕ್‌ಗಳಲ್ಲಿ ಬುಲೆಟ್ ವೇರಿಯೆಂಟ್ ಕಡಿಮೆ ಬೆಲೆಯ ಬೈಕ್. ಇದೀಗ ಬುಲೆಟ್ ಬೈಕ್ ABS ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ. ನೂತನ ತಂತ್ರಜ್ಞಾನ ಅಳವಡಿಸಿರುವ ಬುಲೆಟ್ ನೂತನ ಬೆಲೆ ಎಷ್ಟು? ಇಲ್ಲಿದೆ ವಿವರ.

Royal enfield bullet 350 ABS price revealed cheaper than classic
Author
Bengaluru, First Published Apr 3, 2019, 5:15 PM IST

ಚೆನ್ನೈ(ಏ.03): ರಾಯಲ್ ಎನ್‌ಫೀಲ್ಡ್ ಬೈಕ್‌ಗಳಲ್ಲಿ ಬುಲೆಟ್ 350 ಹಾಗೂ 500 ಕಡಿಮೆ ಬೆಲೆಯ ಬೈಕ್. ಇದೀಗ ಬುಲೆಟ್ 350 ABS ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ. ಈ ಮೂಲಕ 350ಸಿಸಿ ಹಾಗೂ ABS ತಂತ್ರಜ್ಞಾನ ಹೊಂದಿದೆ ಅತ್ಯಂತ ಕಡಿಮೆ ಬೆಲೆಯ ಬೈಕ್ ಅನ್ನೋ ಹೆಗ್ಗಳಿಕೆಗೆ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಪಾತ್ರವಾಗಿದೆ.

ಇದನ್ನೂ ಓದಿ: ಕಡಿಮೆ ಬೆಲೆ, ಗರಿಷ್ಠ ಮೈಲೇಜ್- ದಾಖಲೆ ಬರೆದ TVS ರೆಡಿಯಾನ್!

ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ಬೆಲೆ 1.17 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಇದೀಗ ABS ತಂತ್ರಜ್ಞಾನ ಹೊಂದಿರುವ ನೂತನ ಬುಲೆಟ್ 350 ಬೆಲೆ 1.21 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಬುಲೆಟ್ 350 ES ಬೆಲೆ 1.35 ಲಕ್ಷ  ರೂಪಾಯಿ(ಎಕ್ಸ್ ಶೋ ರೂಂ). ರಾಯಲ್ ಎನ್‌ಫೀಲ್ಡ್ ಬೆಲೆ ಬಹಿರಂಗ ಪಡಿಸೋ ಮೊದಲು ಡೀಲರ್‌ಗಳು ಬೆಲೆ ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: TVS ವಿಕ್ಟರ್ CBS ಬೈಕ್ ಬಿಡುಗಡೆ- ಬೆಲೆ ಎಷ್ಟು?

125ccಗಿಂತ ಹೆಚ್ಚಿನ ಎಂಜಿನ್ ಹೊಂದಿರುವ ಎಲ್ಲಾ ಬೈಕ್ ಹಾಗೂ ಸ್ಕೂಟರ್‌ಗಳು ABS(ಆ್ಯಂಟಿ ಲಾಕ್ ಬ್ರೆಕಿಂಗ್ ಸಿಸ್ಟಮ್) ಅಳವಡಿಸುವುದು ಅನಿವಾರ್ಯ. ಎಪ್ರಿಲ್ 1 ರಿಂದ ಈ ನಿಯಮ ಜಾರಿಗೆ ಬಂದಿದೆ. ಹೀಗಾಗಿ ಸದ್ಯ ಎಲ್ಲಾ ಬೈಕ್‌ಗಳು ABS ತಂತ್ರಜ್ಞಾನ ಅಳವಡಿಸಿ ಬಿಡುಗಡೆಯಾಗುತ್ತಿದೆ. 

Follow Us:
Download App:
  • android
  • ios