ಪೆಟ್ರೋಲ್,ಡೀಸೆಲ್,ವಿದ್ಯುತ್ ಬೇಡ; ಬಂದಿದೆ ಸೋಲಾರ್ ಕಾರು!
ವಿಶ್ವದಲ್ಲೇ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಕಾರನ್ನು ಭಾರತದಲ್ಲಿ ಆವಿಷ್ಕರಿಸಲಾಗಿದೆ. ಮೊಬೈಲ್ ಆ್ಯಪ್ ಮೂಲಕ ಈ ಕಾರನ್ನು ಚಲಾಯಿಸಬಹುದು. ಇಷ್ಟೇ ಅಲ್ಲ ನಿಮ್ಮ ಮನಸ್ಸಿನ ಸಂಕೇತಗಳನ್ನು ಗ್ರಹಿಸೋ ಶಕ್ತಿ ಈ ಕಾರಿಗಿದೆ. ವಿಶೇಷ ಕಾರಿನ ಕುರಿತ ಕುತೂಹಲ ಮಾಹಿತಿ ಇಲ್ಲಿದೆ.
ಕೊಚ್ಚಿ(ಜು.15): ಭಾರತದಲ್ಲಿ ಹೊಸ ಹೊಸ ಅವಿಷ್ಕಾರಗಳು ನಡೆಯುತ್ತಿರುತ್ತವೆ. ಕೆಲವು ಬೆಳಕಿಗೆ ಬಂದರೆ ಇನ್ನೂ ಕೆಲವು ಪ್ರತಿಭೆಗಳು ಬೆಳಕಿಗೆ ಬರುವುದೇ ಇಲ್ಲ. ಇದೀಗ ಕೇರಳದಲ್ಲಿ ಯಾರೂ ಊಹಿಸದ ಕಾರಿನ ಮೆಕಾನಿಸಂ ಆವಿಷ್ಕರಿಸಲಾಗಿದೆ. ಈ ಕಾರು ಸೋಲಾರ್‌ನಿಂದ ಚಲಿಸುತ್ತೆ. ಇಷ್ಟೇ ಅಲ್ಲ ಮೊಬೈಲ್ ಆ್ಯಪ್ ಹಾಗೂ ಮನಸ್ಸಿನಲ್ಲಿ ನೀಡೋ ಸನ್ನೆ ಮೂಲಕ ಕಂಟ್ರೋಲ್ ಮಾಡಬಹುದು.
ಇದನ್ನೂ ಓದಿ: ಕಾರು ಕ್ಲೀನ್ ಇಲ್ಲದಿದ್ದರೆ ಬೀಳುತ್ತೆ 9 ಸಾವಿರ ರೂ ದಂಡ!
ಮಾರುತಿ 800 ಹಳೆ ಕಾರನ್ನು ಕೇರಳದ 6 ಯುವಕರು ಸಂಪೂರ್ಣವಾಗಿ ಬದಲಾಯಿಸಿ ಹೊಸ ಲೋಕಕ್ಕೆ ಕರೆದೊಯ್ದಿದ್ದಾರೆ. ಕಾರಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಎಂಜಿನ್ ಹಾಗೂ ಟೆಕ್ನಾಲಜಿ ಸಂಪೂರ್ಣ ಬದಲಿಸಿದ್ದಾರೆ. ಸೋಲಾರ್ ಚಾಲಿತ ವಾಹನ ಹಲವು ವಿಶೇಷತೆ ಹೊಂದಿದೆ. ಈ ಕಾರನ್ನು ಮೊಬೈಲ್ ಆ್ಯಪ್ ಮೂಲಕ ಸ್ಟಾರ್ಟ್ ಮಾಡಬಹುದು. ಹೊರಗಡೆ ನಿಂತು ಆ್ಯಪ್ ಮೂಲಕವೇ ಡ್ರೈವ್ ಮಾಡಬಹುದು. ಅಂದರೆ ಕಾರ್ ರೇಸ್ ಗೇಮ್‌ನಲ್ಲಿ ಮೊಬೈಲ್ ಮೂಲಕ ಹೇಗೆ ಕಾರನ್ನೂ ಓಡಿಸುತ್ತಾರೋ, ಅದೇ ರೀತಿ ಇಲ್ಲಿ ಆ್ಯಪ್ ಮೂಲಕ ಕಾರು ಚಲಾಯಿಸಬಹುದು.
ಇದನ್ನೂ ಓದಿ: ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆ- ಇಲ್ಲಿದೆ ಬೆಲೆ, ವಿಶೇಷತೆ!
ಪಾರ್ಕಿಂಗ್ ಅಸಿಸ್ಟ್ ಮೂಲಕ ಕಾರಿನಿಂದ ಇಳಿದು ಆ್ಯಪ್ ಮೂಲಕ ಪಾರ್ಕ್ ಮಾಡಬಹುದು. ಇಷ್ಟೇ ಅಲ್ಲ, ನಿಮ್ಮ ಮನಸ್ಸಿನ ಸಂಕೇತಗಳನ್ನು ಈ ಕಾರು ಗ್ರಹಿಸುತ್ತದೆ. ಕಾರು ಸ್ಟಾರ್ಟ್ ಆಗಬೇಕು ಎಂದು ನೀವು ಮನಸ್ಸಿನಲ್ಲಿ ಸಂಕೇತ ನೀಡಿದರೆ ಸಾಕು, ಕಾರು ಸ್ಟಾರ್ ಆಗಲಿದೆ. ಇಷ್ಟೇ ಅಲ್ಲ, ಕಾರು ಓಡಿಸಲು, ರಿವರ್ಸ್ ಗೇರ್ , ರೈಟ್ ಟರ್ನ್, ಲೆಫ್ಟ್ ಟರ್ನ್ ಏನೂ ಬೇಕಾದರೂ ಮನಸ್ಸಿನಲ್ಲಿ ಹೇಳಿದರೆ ಸಾಕು, ಈ ಕಾರು ಗ್ರಹಿಸುತ್ತದೆ. ಆ ಅತ್ಯಾಧುನಿಕ ತಂತ್ರಜ್ಞಾನ ವಿಶ್ವದಲ್ಲೇ ಮೊದಲು. ಡ್ರೈವರ್ ಲೆಸ್ ಕಾರುಗಳು ಈಗಾಗಲೇ ಪರಿಚಯಿಸಲಾಗಿದೆ. ಆದರೆ ಮೈಂಡ್ ರೀಡರ್ ಕಾರು ಇನ್ನೂ ಬಂದಿಲ್ಲ. ಕೇರಳ ಹುಡುಗರ ಸಾಧನೆಗೆ ಆಟೋಮೊಬೈಲ್ ಕಂಪನಿಗಳೇ ಮೆಚ್ಚುಗೆ ವ್ಯಕ್ತಪಡಿಸಿದೆ.