ದುಬೈ(ಜು.13): ಕಾರು ಕೊಳೆಯಾಗಿದ್ದರೆ, ಕ್ಲೀನ್ ಮಾಡದೇ  ಸಾರ್ವಜನಿಕ ರಸ್ತೆಗಳ ಪಾರ್ಕಿಂಗ್ ಏರಿಯಾದಲ್ಲಿ ಪಾರ್ಕ್ ಮಾಡಿದರೆ 9,000 ರೂಪಾಯಿ ದಂಡ ಕಟ್ಟಬೇಕು. ಗಾಬರಿಯಾಗಬೇಡಿ. ಇದು ಭಾರತದಲ್ಲಿ ಅಲ್ಲ, ಬದಲಾಗಿ ದುಬೈನಲ್ಲಿ. ದುಬೈನಲ್ಲಿ ನೀತಿ ನಿಯಮಗಳನ್ನು ಪಾಲಿಸಲೇಬೇಕು. ಇಲ್ಲವಾದರೆ ದಂಡ ಅಥವಾ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತೆ.

ಇದನ್ನೂ ಓದಿ: ನೋ ಪಾರ್ಕಿಂಗ್: 23 ಸಾವಿರ ರೂಪಾಯಿ ದಂಡ!

ದುಬೈನಲ್ಲಿ ಮೋಟಾರ ವಾಹನ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ನೂತನ ನಿಯಮದ ಪ್ರಕಾರ ಕೊಳೆಯಾದ ಅಥವಾ ಕ್ಲೀನ್ ಇಲಲ್ಲದಿರುವ ಕಾರುಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಪಾರ್ಕ್ ಮಾಡಿದರೆ 9,000 ರೂಪಾಯಿ ದಂಡ ಕಟ್ಟಬೇಕು. ಕೊಳೆಯಾದ ಕಾರುಗಳು ನಗರದ ಅಂದವನ್ನು ಹಾಳುಮಾಡುತ್ತಿದೆ. ಜೊತೆಗೆ ರಸ್ತೆ ಕೂಡ ಕೊಳೆಯಾಗುತ್ತಿದೆ. ಹೀಗಾಗಿ ನೂತನ ನಿಯಮ ಜಾರಿಗೆ ತರಲಾಗಿದೆ.

ಇದನ್ನೂ ಓದಿ: ಕರ್ನಾಟಕ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ: ಯಾವುದಕ್ಕೆ ಎಷ್ಟು ದಂಡ..?

ಕೊಳೆಯಾದ ಕಾರು ಪಾರ್ಕ್ ಮಾಡಿದ್ದಲ್ಲಿ, ಮೊದಲು ಕಾರಿನ ಗಾಜಿನ ಮೇಲೆ ನೊಟೀಸ್ ಅಂಟಿಸಲಾಗುತ್ತೆ. ಬಳಿಕ 15 ದಿನ ಅವಕಾಶ ನೀಡಲಾಗುತ್ತೆ. ಬಳಿಕ ಕಾರನ್ನು ಪೊಲೀಸರು ಎತ್ತಂಗಡಿ ಮಾಡಲಿದ್ದಾರೆ. ಇಷ್ಟೇ ಅಲ್ಲ ಮುಂದಿನ 15 ದಿನಗಳ ಕಾಲ ಕಾರಿನ ಮಾಲೀಕರು ದಂಡ ಅಥವಾ ಪೊಲೀಸರನ್ನು ಸಂಪರ್ಕಿಸಿದಿದ್ದರೆ ಕಾರನ್ನು ಹರಾಜು ಹಾಕಲಾಗುವುದು ಎಂದು ದುಬೈ ಪೊಲೀಸರು ಹೇಳಿದ್ದಾರೆ.