ವಾಹನ ಸವಾರರಿಗೆ ಸಿಹಿ ಸುದ್ದಿ- ತೆರಿಗೆ ಇಳಿಸಿದ ರಾಜ್ಯ ಸರ್ಕಾರ!
ಕರ್ನಾಟಕ ಸರ್ಕಾರ ವಾಹನ ಸವಾರರಿಗೆ ಬಂಪರ್ ಕೂಡುಗೆ ನೀಡಿದೆ. ಮೋಟಾರು ವಾಹನ ತೆರಿಗೆ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಇದರ ಪರಿಣಾಮವಾಗಿ ತೆರಿಗೆ ದರ ಇಳಿಸಲಾಗಿದೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಘೋಷಣೆ ಮಾಡಿದ್ದಾರೆ.
ಬೆಂಗಳೂರು(ಸೆ.29): ಕರ್ನಾಟಕ ರಾಜ್ಯ ಸರ್ಕಾರ ವಾಹನ ಸವಾರರ ಮೇಲಿನ ಹೊರೆ ಕಡಿಮೆ ಮಾಡಿದೆ. 900 ರೂಪಾಯಿ ಇದ್ದ ಮೋಟಾರು ವಾಹನ ತೆರಿಗೆಯನ್ನು ಇದೀಗ 700 ರೂಪಾಯಿಗೆ ಇಳಿಸಲಾಗಿದೆ. ಈ ಕುರಿತು ಸಾರಿಗೆ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರಕಣೆ ಹೊರಡಿಸಿದ್ದಾರೆ.
ಲೈಸೆನ್ಸ್, ವಿಮೆ ಸೇರಿದಂತೆ ವಾಹನ ದಾಖಲೆ ಪತ್ರಗಳಿಗೆ ಹೊಸ ನಿಯಮ; ಅ.1 ರಿಂದ ಜಾರಿ!.
ಕರ್ನಾಟಕ ಮೋಟಾರು ವಾಹನಗಳ ತೆರಿಗೆ ಅಧಿನಿಯಮ 1957 ( ಕರ್ನಾಟಕ ಕಾಯ್ದೆ 35/1957) ಕಲಂ 16(1) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಮೋಟಾರು ವಾಹನಗಳ ಅಧಿನಿಯಮ 1957ರ ಷೆಡ್ಯೂಲ್ (ಎ) ಐಟಂ ಸಂಖ್ಯೆ: 5(ಎ)(iii) ರಂತೆ ರಾಜ್ಯದಲ್ಲಿನ 13 ರಿಂದ 20 ಆಸನ ಸಾಮರ್ಥ್ಯವುಳ್ಳ ಒಪ್ಪಂದ ವಾಹನಗಳಿಗೆ ಪ್ರತಿ ಆಸನಕ್ಕೆ ನಿಗದಿಪಡಿಸಿರುವ ರೂ. 900/- ಗಳ ಮೋಟಾರು ವಾಹನ ತೆರಿಗೆಯನ್ನು ರೂ. 700/- ಗಳಿಗೆ ಇಳಿಸಲಾಗಿದೆ ಎಂದು ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ.
ಮೋಟಾರು ವಾಹನಗಳ ತೆರಿಗೆಯನ್ನು ಇಳಿಸಬೇಕೆಂದು ಹಲವಾರು ವಾಹನ ಮಾಲೀಕರು, ವಿವಿಧ ಸಂಘಟನೆಗಳು ಸಲ್ಲಿಸಿದ್ದ ಬೇಡಿಕೆಗೆ ಸ್ಪಂದಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶ್ರೀ ಸವದಿ ಅವರು ತಿಳಿಸಿದ್ದಾರೆ.