ನ್ಯೂಯಾರ್ಕ್(ನ.02): ಹೆಸರು ಇಂಡಿಯನ್ ಮೋಟಾರ್. ವಿಶ್ವದಲ್ಲೇ ಅತ್ಯಂತ ಜನಪ್ರಿಯ ಮೋಟಾರ್ ಬೈಕ್. ಈ ಮೋಟಾರು ಕಂಪನಿ ಮೂಲ ಅಮೆರಿಕ. ದುಬಾರಿ ಬೆಲೆ ಇಂಡಿಯನ್ ಕಂಪನಿ ಇದೀಗ ನೂತನ ಕ್ರೂಸರ್ ಬೈಕ್ ಅನಾವರಣ ಮಾಡಿದೆ. ನೂತನ ಇಂಡಿಯನ್ ಚಾಲೆಂಜರ್ ಬೈಕ್ ಅನಾವರಣ ಮಾಡಿದ್ದು, 3 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

ಇದನ್ನೂ ಓದಿ: ಮೊದಲ ನೋಟದಲ್ಲೇ ಮನಸು ಕದ್ದ ಸುಂದರಿ, ಬಜಾಜ್ ಚಿಕ್ ಎಲೆಕ್ಟ್ರಿಕ್ ಸ್ಕೂಟರ್ ಬಂತು ನೋಡ್ರಿ

ಸ್ಟಾಂಡರ್ಡ್,  ಡಾರ್ಕ್ ಹೌಸ್ ಹಾಗೂ ಲಿಮಿಟೆಡ್ ವೇರಿಯೆಂಟ್‌ಗಳಲ್ಲಿ ಇಂಡಿಯನ್ ಚಾಲೆಂಜರ್ ಬೈಕ್ ಲಭ್ಯವಿದೆ. V ಟ್ವಿನ್ ಎಂಜಿನ್ ಹೊಂದಿರು ಈ ಬೈಕ್ ಅತ್ಯಂತ ಆಕರ್ಷಕವಾಗಿದೆ.  1,769cc ಎಂಜಿನ್ ಹೊಂದಿದ್ದು,  122hp ಪವರ್ ಹಾಗೂ 173.5Nm  ಪೀಕ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ.  6-ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.

ಇದನ್ನೂ ಓದಿ: ಜಾವಾ 90th ಆ್ಯನಿವರ್ಸರಿ ಎಡಿಶನ್ ಬೈಕ್ ಬಿಡುಗಡೆ!

LED ಹೆಡ್‌ಲ್ಯಾಂಪ್ಸ್,  7.0 ಇಂಚಿನ ಟಚ್ ಸ್ಕ್ರೀನ್,  100W ಆಡಿಯೋ ಸಿಸ್ಟಮ್ ಹಾಗೂ ಬ್ಲೂಟೂಥ್, ಕ್ರ್ಯೂಸ್ ಕಂಟ್ರೋಲ್,  ಕೀ ಲೆಸ್ ಇಗ್ನಿಶನ್ ಸೇರಿದಂತೆ ಹಲವು ಫೀಚರ್ಸ್ ಈ ಬೈಕ್‌ನಲ್ಲಿದೆ. ಭಾರತದಲ್ಲಿ ಈ ಬೈಕ್ ಬೈಲೆ 15.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).