ಜಾವಾ 90th ಆ್ಯನಿವರ್ಸರಿ ಎಡಿಶನ್ ಬೈಕ್ ಬಿಡುಗಡೆ!
ಜಾವಾ ಮೋಟರ್ ಬೈಕ್ ಆ್ಯನಿವರ್ಸರಿ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ. ನೂತನ ಬೈಕ್ ಕೆಲ ಬದಲಾವಣೆಗಳೊಂದಿಗೆ ಬಿಡುಗಡೆಯಾಗಿದೆ. ಮೊದಲು ಬುಕ್ ಮಾಡಿದವರಿಗೆ ಆದ್ಯತೆ. ಕಾರಣ ಕೆಲವೇ ಕೆಲವು ಬೈಕ್ ಮಾತ್ರ ಮಾರಾಟಕ್ಕೆ ಲಭ್ಯವಿದೆ. ನೂತನ ಬೈಕ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ನವದೆಹಲಿ(ಅ.10): ಜಾವಾ ಮೋಟರ್‌ಸೈಕಲ್ ಇದೀಗ 90ನೇ ವರ್ಷಾಚರಣೆ ಸಂಭ್ರಮದಲ್ಲಿದೆ. ಇದೇ ವೇಳೆ ಆ್ಯನಿವರ್ಸರಿ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ. 1929ರಲ್ಲಿ ಜಾವಾ ಮೋಟಾರಸೈಕಲ್ ಕಂಪನಿ ಮೊದಲ ಬೈಕ್ ಬಿಡುಗಡೆ ಮಾಡಿತ್ತು. ಜಾವಾ 500 OHV ಬೈಕ್ ಬಿಡುಗಡೆ ಮಾಡಿದ್ದ ಕಂಪನಿ ಬಳಿಕ ಹಲವು ಏರಿಳಿತ ಕಂಡಿತ್ತು. ಇದೀಗ 2018ರಲ್ಲಿ ಮತ್ತೆ ಜಾವಾ ಸದ್ದು ಮಾಡುತ್ತಿದೆ. ಇದೇ ವೇಳೆ 90ನೇ ವರ್ಷಾಚರಣೆಯ ಸವಿನೆನಪಿಗಾಗಿ ಆ್ಯನಿವರ್ಸಿ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಶೀಘ್ರದಲ್ಲೇ ಜಾವಾದಿಂದ ಮತ್ತೆ 3 ಹೊಸ ಬೈಕ್ ಬಿಡುಗಡೆ!
ಆ್ಯನಿವರ್ಸರಿ ಎಡಿಶನ್ ಬೈಕ್ ಬುಕಿಂಗ್ ಮಾಡಿ ಕಾಯಬೇಕಿಲ್ಲ. ಆದರೆ ಬೇಗ ಬುಕ್ ಮಾಡಿದವರಿಗೆ ಆದ್ಯತೆ. ಕೇವಲ 90 ಆ್ಯನಿವರ್ಸರಿ ಎಡಿಶನ್ ಬೈಕ್ ಮಾರಾಟಕ್ಕೆ ಲಭ್ಯವಿದೆ. ಕೆಲ ಬದಲಾವಣೆಗಳೊಂದಿಗೆ ನೂತನ ಬೈಕ್ ಬಿಡುಗಡೆಯಾಗಿದೆ. ಆ್ಯನಿವರ್ಸಿ ಎಡಿಶನ್ ಜಾವಾ ಬೈಕ್ ಬೆಲೆ 1.73 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ).
ಇದನ್ನೂ ಓದಿ: ಮಿಂಚಿ ಮರೆಯಾದ ಭಾರತದ 10 ಜಾವಾ-ಯೆಝೆಡಿ ಬೈಕ್!
ಕ್ರೋಮ್ ಫಿನೀಶಿಂಗ್ ಟಚ್ ಹಾಗೂ ಟ್ಯಾಂಕ್ ಮೇಲೆ 90ನೇ ವರ್ಷಾಚರಣೆ ಲೋಗೋ ಹಾಕಲಾಗಿದೆ. ಸಣ್ಣ ಬದಲಾವಣೆ ಹೊರತುಪಡಿಸಿದರೆ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 293 cc ಸಿಂಗಲ್-ಸಿಲಿಂಡರ್, ಏರ್ ಕೂಲ್‌ಡ್ ಮೋಟಾರ್ ಹೊಂದಿದ್ದು, 26 bhp ಪವರ್ ಹಾಗೂ 28 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ.
ಇದನ್ನೂ ಓದಿ: ಜಾವಾ- ಜಾವಾ 42 ಬೈಕ್ ಮೈಲೇಜ್ ಬಹಿರಂಗ!
ಡ್ಯುಯೆಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಡ್ಯುಯೆಲ್ ಶಾಕ್ಸ್ ಸಸ್ಪೆಶನ್ ಹಾಗೂ ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಹೊಂದಿದೆ.
ಜಾವಾ ಆ್ಯನಿವರ್ಸರಿ ಎಡಿಶನ್ ಬೈಕ್ ಬುಕಿಂಗ್ ಆಕ್ಟೋಬರ್ 15 ರಿಂದ 22ರವರೆಗೆ ಇರಲಿದೆ. ಈ ನಡುವೆ ಮೊದಲು ಬುಕ್ ಮಾಡಿದ 90 ಗ್ರಾಹಕರನ್ನು ಜಾವಾ ಆಯ್ಕೆ ಮಾಡಲಿದೆ. ಹೀಗಾಗಿ ಮೊದಲು ಬುಕ್ ಮಾಡಿದವರಿಗೆ ಆದ್ಯತೆ ಸಿಗಲಿದೆ.