ಯೇ ಝಮೀ ಯೇ ಆಸಮಾ ಹಾ..ಯೇ ಝಮೀ ಯೇ ಆಸಮಾ ಹಾ

ಹಮಾರಾ ಕಲ್ ಹಮಾರಾ ಆಜ್

ಬುಲಂದ್ ಭಾರತಕೀ ಬುಲಂದ್ ತಸ್ವೀರ್..

ಹಮಾರಾ ಬಜಾಜ್, ಹಮಾರಾ ಬಜಾಜ್..ಹಮಾರಾ ಬಜಾಜ್..

ಅದು ಡಿಡಿ ದೂರದರ್ರಶನ ಒಂದೇ ಚಾನಲ್ ಇದ್ದ ಕಾಲ.. ಅಂದಿನ ಜಾಹೀರಾತುಗಳು ಅಷ್ಟೇ ಕ್ರಿಯೇಟಿವ್ ಬಿಡಿ.. ಹಮಾರಾ ಬಜಾಜ್ ಜಾಹೀರಾತು 90 ರ ದಶಕದಲ್ಲಿ ಮಾಡಿದ ಮೋಡಿ ಇದೆಯಲ್ಲ. ಅದನ್ನು ನೊಡಿ ಅನುಭವಿಸಿದವರಿಗೆ ಗೊತ್ತು. 70 ರ ದಶಕದಿಂದಲೇ ಭಾರತದ ಮಧ್ಯಮ ವರ್ಗದ ಪ್ರೀತಿ ಪಾತ್ರವಾದ ವಾಹನವಾಗಿ ಬದಲಾಗಿತ್ತು.

ಹಮಾರಾ ಬಜಾಜ್.. ಇತಿಹಾಸದೊಂದಿಗೆ ಪಯಣ, ಎಲೆಕ್ಟ್ರಿಕ್ ಸ್ಕೂಟರ್ ವಿಶೇಷಗಳೇನು?

ಲಕ್ಷಾಂತರ ಜನರ ಮೆಚ್ಚುಗೆ ಗಳಿಸಿ ಮನೆಗೆ ತಂದ ಮೊದಲ ವಾಹನವಾದ ಬಜಾಜ್ ಚೇತಕ್ ಇದೀಗ ಹೊಸ ರೂಪದಲ್ಲಿ ನಿಮ್ಮ ಮುಂದೆ  ಬಂದಿದೆ

ಎಲೆಕ್ಟ್ರಿಕ್ ವರ್ಷನ್ ಬಜಾಜ್ ಸ್ಕೂಟರ್ ಗೆ ಬಜಾಜ್ ಚಿಕ್ ಎಂದು ಹೆಸರಿಡಲಾಗಿದ್ದು ಅನಾವರಣ ಮಾಡಲಾಗಿದೆ.  ದರದ ಬಗ್ಗೆ ಕಂಪನಿ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಪುಣೆ, ಬೆಂಗಳೂರು ಸೇರಿದಂತೆ ಅನೇಕ ಮಹಾನಗರದಲ್ಲಿ ಮುಂದಿನ ವರ್ಷಾರಂಭದ ಜನವರಿಯಿಂದ ಸೇಲ್ ಆರಂಭಗೊಳ್ಳುವ ನಿರೀಕ್ಷೆ ಇದೆ.  

ಮೊದಲ ನೋಟದಲ್ಲಿಯೇ ಸ್ಕೂಟರ್ ಎಲ್ಲರ ಮನಗೆದ್ದಿದೆ. ಸಿಂಗಲ್ ಯೂನಿಟ್ ಸೀಟ್,  ಮೊಟ್ಟೆಯಾಕಾರದ ಹೆಡ್ ಲ್ಯಾಂಪ್, ಕಪ್ಪು ಫ್ರಂಟ್ ಗ್ರಿಲ್, ಲಿಥುಮಿಯಂ ಐಯಾನ್ ಬ್ಯಾಟರಿ ವಿಶೇಷ.

ಸದ್ಯ ಬಜಾಜ್ ಚೇತಕ್ ಇ-ಸ್ಕೂಟರ್ ಬೆಲೆಯನ್ನು ಬಹಿರಂಗಪಡಿಸಿಲ್ಲ. ಆದರೆ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯನ್ನು ಸ್ಪರ್ಧಾತ್ಮಕವಾಗಿ ನಿಗದಿಪಡಿಸುವುದಾಗಿ ಬಜಾಜ್ ಆಟೋ ಆಡಳಿತ ನಿರ್ದೇಶಕ ರಾಜೀವ್ ಬಜಾಜ್ ತಿಳಿಸಿದ್ದಾರೆ.

ಹೊಸ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಗೆ ಸ್ಟ್ಯಾಂಡರ್ಡ್ 5-15ಎಎಂಪಿ ಎಲೆಕ್ಟ್ರಿಕಲ್ ಔಟ್ ಲೆಟ್ ಗಳಲ್ಲಿ ಬ್ಯಾಟರಿ ಚಾರ್ಜ್ ಮಾಡಬಹುದಾಗಿದೆ. ಇ-ಸ್ಕೂಟರ್ ನಲ್ಲಿ ಇಂಟೆಲಿಜೆಂಟ್ ಬ್ಯಾಟರಿ ಮ್ಯಾನೇಜ್ ಮೆಂಟ್ ಸಿಸ್ಟಮ್ ಇದೆ. ಇದು ಚಾರ್ಜ್ ಕಂಟ್ರೋಲ್ ಮತ್ತು ಡಿಸ್ ಚಾರ್ಜ್ ನಿರ್ವಹಣೆ ಮಾಡಲಿದೆ. ಅಷ್ಟೇ ಅಲ್ಲ ಗ್ರಾಹಕರಿಗೆ ಮನೆಯಲ್ಲಿಯೇ ಚಾರ್ಚ್ ಸ್ಟೇಷನ್ ಅವಕಾಶ ನೀಡುವ ಆಲೋಚನೆಯನ್ನು ಕಂಪನಿ ಮಾಡಿದೆ.

ಬಜಾಜ್ ಚೇತಕ್ ಎರಡು ಡ್ರೈವಿಂಗ್ ಮಾದರಿಯ ಆಫರ್ ನೀಡಿದ್ದು, ಇಕೋ(95ಕಿಲೋ ಮೀಟರ್ ದೂರ) ಮತ್ತು ಸ್ಪೋರ್ಟ್ (85 ಕಿಲೋ ಮೀಟರ್ ದೂರ) ಮಾದರಿಯಲ್ಲಿ ರಸ್ತೆಗೆ ಇಳಿಯಲಿದೆ. ಆರು ಬಣ್ಣಗಳಲ್ಲಿ ಚೇತಕ್ ಇ ಸ್ಕೂಟರ್ ಲಭ್ಯವಿದೆ ಎಂದು ತಿಳಿಸಲಾಗಿದೆ.  ವಾಹನಕ್ಕೆ  ಕೀ ಸಹ ಬೇಕಾಗಿಲ್ಲ.. ಮೊಬೈಲ್ ಆ್ಯಪ್ ಮೂಲಕವೇ ಚಾಲನೆಯಾಗುವಂತೆಯೂ ಮಾಡಲಾಗಿದೆ.
 

ಇಂಗ್ಲಿಷ್‌ನಲ್ಲಿಯೂ ಓದಿ