Asianet Suvarna News Asianet Suvarna News

ಸ್ಥಳೀಯರಿಗೆ ಉದ್ಯೋಗ; ಭಾರತದಲ್ಲಿರುವ ಚೀನಾ ಕಂಪನಿಗಳ ಪ್ಲಾನ್!

ಲಡಾಖ್ ಗಡಿ ಬಿಕ್ಕಟ್ಟಿನ ಬೆನ್ನಲ್ಲೇ ಚೀನಾ ವಸ್ತುಗಳ ಬಹಿಷ್ಕಾರದ ಕೂಗ ತೀವ್ರಗೊಳ್ಳುತ್ತಿದೆ. ಸೆಲೆಬ್ರೆಟಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡಿರುವ ಕಾರಣ ಭಾರತದಲ್ಲಿರುವ ಚೀನಾ ಕಂಪನಿಗಳ ತಲೆನೋವು ಹೆಚ್ಚಿಸಿದೆ. ಹೀಗಾಗಿ ಚೀನಾ ಕಂಪನಿಗಳು ಇದೀಗ ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ. ಭಾರತದಲ್ಲಿರುವ ಕಂಪನಿಗಳು ಸಂಪೂರ್ಣ ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಲು ಮುಂದಾಗಿದೆ.

China auto companies recruiting more Indians after Boycott china products in India
Author
Bengaluru, First Published Jun 22, 2020, 2:38 PM IST
  • Facebook
  • Twitter
  • Whatsapp

ನವದೆಹಲಿ(ಜೂ.22): ಭಾರತ- ಚೀನಾ ನಡುವಿನ ಗಡಿ ಬಿಕ್ಕಟ್ಟನ್ನು ಭಾರತೀಯರು ಗಂಭೀರವಾಗಿ ಪರಿಗಣಿಸಿದ್ದಾರೆ. 20 ಯೋಧರ ಬಲಿದಾನಕ್ಕೆ ಪ್ರತೀಕಾರವಾಗಿ ಪ್ರತಿಯೊಬ್ಬರು ಚೀನಾ ವಸ್ತುಗಳು ಬಹಷ್ಕರಿಸಲು ಪಣ ತೊಟ್ಟಿದ್ದಾರೆ. ಇದು ಭಾರತದಲ್ಲಿರುವ ಚೀನಾ ಕಂಪನಿಗಳ ತಲೆ ನೋವು ಹೆಚ್ಚಾಗಿದೆ. ಹೀಗಾಗಿ ಭಾರತದಲ್ಲಿರುವ ಭಾರತದ ಕಂಪನಿಗಳು ಇದೀಗ ಸಂಪೂರ್ಣವಾಗಿ ಸ್ಥಳೀಯರನ್ನು ನೇಮಿಸಲು ಮುಂದಾಗಿದೆ.

ಹೊಸ ಕಾರಿನ ಕೀ ಪಡೆದ ಮರುಕ್ಷಣದಲ್ಲೇ ಶೋ ರೂಂ ಗೋಡೆಗೆ ಡಿಕ್ಕಿ, ಮಾಲೀಕನ ಕನಸು ಪುಡಿ ಪುಡಿ

ಆಟೋಮೊಬೈಲ್ ಕಂಪನಿಗಳ ಪೈಕಿ ಭಾರತಕ್ಕೆ ಎಂಟ್ರಿ ಕೊಟ್ಟಿರುವ ಮೊದಲ ಕಂಪನಿ ಎಂಜಿ ಮೋಟಾರ್ಸ್ ನಿಯಮವನ್ನೇ ಇದೀಗ ಇತರ ಚೀನಾ ಕಂಪನಿಗಳು ಅಳವಡಿಸಲು  ಮುಂದಾಗಿದೆ. ಭಾರತದಲ್ಲಿರುವ ಎಂಜಿ ಮೋಟಾರ್ಸ್ ಕಂಪನಿ 99.5% ಕೆಲಸಗಾರರು ಭಾರತೀಯರೇ ಆಗಿದ್ದಾರೆ. ಕೇವಲ ಕಂಪನಿ ಸಿಇಓ ಸೇರಿದಂತೆ ಕೆಲ ಸಿಬ್ಬಂದಿಗಳು ಮಾತ್ರ ಚೀನಾ ಮೂಲದವರಿದ್ದಾರೆ. 

65 ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬುಕ್ ಮಾಡಿದ ಸರ್ಕಾರ!

ಇದೀಗ ಚೀನಾದಿಂದ ಭಾರತಕ್ಕೆ ಆಗಮಿಸುತ್ತಿರುವ ಗ್ರೇಟ್ ವಾಲ್ ಮೋಟಾರ್ಸ್, ಫೊಟಾನ್, ಬಿವೈಡಿ ಸೇರಿದಂತೆ ಇತರ ಆಟೋಮೊಬೈಲ್ ಕಂಪನಿಗಳು ಇದೇ ಮಾದರಿ ಅನುಸರಿಸಲು ಮುಂದಾಗಿದೆ. ಈ ಮೂಲಕ ಮಾರಾಟ ಹಾಗೂ ಭಾರತೀಯರ ವಿಶ್ವಾಸಗಳಿಸಲು ಮುಂದಾಗಿದೆ. ಭಾರತೀಯರಿಗೆ ಉದ್ಯೋಗ ಅವಕಾಶ, ಸಂಶೋಧನೆ, ಅಧ್ಯಯನ ಸೇರಿದಂತೆ ಇತರ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಭಾರತದಲ್ಲಿ ಮಾರಾಟ ಜಾಲ ವೃದ್ಧಿಸಲು ಮುಂದಾಗಿದೆ.

ಎಂಜಿ ಮೋಟಾರ್ಸ್ ಭಾರತದಲ್ಲಿ 1,700 ಉದ್ಯೋಗಿಗಳನ್ನು ಹೊಂದಿದೆ. ಇದರಲ್ಲಿ ಕೇವಲ 14 ಮಂದಿ ಚೀನಾ ಮೂಲದವರು, ಉಳಿದೆಲ್ಲ ಭಾರತೀಯರು ಎಂದು ಎಂಜಿ ಮೋಟಾರ್ಸ್ ಭಾರತದ ಅಧ್ಯಕ್ಷ ರಾಜೀವ ಚಬಾ ಹೇಳಿದ್ದಾರೆ. ಎಂಜಿ ಮೋಟಾರ್ಸ್ ಭಾರತದಲ್ಲೇ ನಿರ್ಮಾಣವಾಗುತ್ತಿದೆ, ಭಾರತೀಯ ಉದ್ಯೋಗಿಗಳಿಂದಲೇ ಕಾರು ಉತ್ಪಾನೆಯಾಗುತ್ತಿದ್ದು, ನಿರ್ಧಾರಗಳನ್ನು ತೆಗೆದುಕೊಳ್ಳುವುದು ಭಾರತೀಯರೇ ಆಗಿದ್ದಾರೆ. ಹೀಗಾಗಿ ಎಂಜಿ ಮೂಲ ಕಂಪನಿ ಚೀನಾ ಆಗಿದ್ದರೂ, ಮೇಡ್ ಇನ್ ಇಂಡಿಯಾ ಹಾಗೂ ಮೇಡ್ ಫಾರ್ ಇಂಡಿಯಾ ಎಂದು ರಾಜೀವ್ ಹೇಳಿದ್ದಾರೆ.

Follow Us:
Download App:
  • android
  • ios