ಅತ್ಯಾಧುನಿಕ, ದಕ್ಷ ಹಾಗೂ ಬಲಿಷ್ಠ ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಬಿಡುಗಡೆ ದಿನಾಂಕ ಬಹಿರಂಗ !
- ಅ.15ಕ್ಕೆ ಭಾರತದಲ್ಲಿ ಹೊಸ ಲ್ಯಾಂಡ್ ರೋವರ್ ಕಾರು ಬಿಡುಗಡೆ
- ಲ್ಯಾಂಡ್ ರೋವರ್ ನ ಯಾತ್ರೆಯಲ್ಲಿ ಪ್ರಮುಖವಾದ ಮೈಲಿಗಲ್ಲಾಗಲಿದೆ
ಬೆಂಗಳೂರು(ಸೆ.29): ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಇಂದು ತನ್ನ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಭಾರತದಲ್ಲಿ 15ನೇ ಅಕ್ಟೋಬರ್ 2020ರಂದು ರಾತ್ರಿ 7.30ಕ್ಕೆ ಬಿಡುಗಡೆ ಮಾಡಲಿದೆ.. ಲ್ಯಾಂಡ್ ರೋವರ್ ಗ್ರಾಹಕರು ಮತ್ತು ಬ್ರ್ಯಾಂಡ್‍ನ ಅಭಿಮಾನಿಗಳಿಗೆ ತೆರೆದಿರುವ ಈ ಕಾರ್ಯಕ್ರಮವು ಒಂದು ಅನನ್ಯವಾದ ರೀತಿಯ ಡಿಜೀಟಲ್ ಪರಿಚಯದ ಕಾರ್ಯಕ್ರಮವಾಗಿರಲಿದೆ ಎಂದು ಲ್ಯಾಂಡ್ ರೋವರ್ ಇಂಡಿಯಾ ಹೇಳಿದೆ.
ಬೆಂಗಳೂರಿನಲ್ಲಿ ನೂತನ ಜಾಗ್ವಾರ್ ಲ್ಯಾಂಡ್ ರೋವರ್ ರೀಟೈಲರ್ ಘಟಕ ಉದ್ಘಾಟನೆ!
2009ರಲ್ಲಿ ನಾವು ಈ ದೇಶಕ್ಕೆ ಕಾಲಿಟ್ಟ ಸಮಯದಿಂದ ಮೊದಲ ಬಾರಿಗೆ ಭಾರತದಲ್ಲಿ ನಮ್ಮ ಹೊಸ ಡಿಫೆಂಡರ್ ಕಾರು ತರುವುದು ಹೆಮ್ಮೆಯ ಘಳಿಗೆಯಾಗಿತ್ತು. ವಿಶ್ವಾದ್ಯಂತ ಮೆಚ್ಚುಗೆಗಳಿಸಿದ ವಾಹನವನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಭಾರತದಲ್ಲಿ ಲ್ಯಾಂಡ್ ರೋವರ್‌ಗೆ ಜನ ನೀಡಿ ಪ್ರೀತಿ ಅಪಾರವಾಗಿದೆ. ಇದು ವಾಹನ ಉದ್ಯಮಕ್ಕೆ ಪ್ರಮುಖವಾದ ಮೈಲಿಗಲ್ಲಾಗಲಿದೆ. ಇದೀಗ ಡಿಜಿಟಲ್ ಸೇವೆ ಕಾರ್ಯಕ್ರಮದ ಮೂಲಕ ಭಾರತದಲ್ಲಿ ವ್ಯವಹಾರ ಮತ್ತಷ್ಟು ವಿಸ್ತಾರಗೊಳ್ಳುತ್ತಿದೆ ಎಂದು ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಲಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಪುರಿ ಹೇಳಿದರು.
ಕಾಡು-ಮೇಡು ಸುತ್ತಲು ಹೇಳಿ ಮಾಡಿಸಿದ ಕಾರು ಲ್ಯಾಂಡ್‌ರೋವರ್!
ಭಾರತದಲ್ಲಿ ಲ್ಯಾಂಡ್ ರೋವರ್ ಉತ್ಪನ್ನಗಳ ಪಟ್ಟಿ
ಭಾರತದಲ್ಲಿ ಲಭ್ಯವಿರುವ ಲ್ಯಾಂಡ್ ರೋವರ್ ಶ್ರೇಣಿಯಂದರೆ ಡಿಸ್ಕವರಿ ಸ್ಪೋರ್ಟ್ (ಆರಂಭ ರೂ. 59.91 ಲಕ್ಷಗಳು), ರೇಂಜ್ ರೋವರ್ ಇವೋಕ್ (ಆರಂಭ ರೂ. 58.67 ಲಕ್ಷಗಳು), ಡಿಸ್ಕವರಿ (ಆರಂಭ ರೂ. 75.59 ಲಕ್ಷಗಳು), ರೇಂಜ್ ರೋವರ್ ಸ್ಪೋರ್ಟ್ (ಆರಂಭ ರೂ. 87.02 ಲಕ್ಷಗಳು), ಮತ್ತು ರೇಂಜ್ ರೋವರ್ (ಆರಂಭ ರೂ. 196.4 ಲಕ್ಷಗಳು). ನಮೂದಿಸಲಾದ ಎಲ್ಲಾ ದರಗಳೂ ಎಕ್ಸ್- ಶೋರೂಂ ಭಾರತದಲ್ಲಿ.
ಭಾರತದಲ್ಲಿ ಜಾಗ್ವಾರ್ ಜಾಲ
ಭಾರತದಲ್ಲಿ ಜಾಗ್ವಾರ್ ವಾಹನಗಳು ಭಾರತದಲ್ಲಿ 24 ನಗರಗಳಲ್ಲಿ 27 ಅಧಿಕೃತ ಮಳಿಗೆಗಳ ಮೂಲಕ ಲಭ್ಯವಿದೆ, ಅಹಮ್ಮದಾಬಾದ್, ಔರಂಗಾಬಾದ್, ಬೆಂಗಳೂರು(2), ಭುವನೇಶ್ವರ, ಚಂಡೀಘಡ, ಚೆನ್ನೈ, ಕೊಯಮತ್ತೂರು, ದೆಹಲಿ(2), ಗುರ್ಗಾವ್, ಹೈದರಾಬಾದ್, ಇಂಡೋರ್, ಜೈಪುರ, ರಾಯ್‌ಪುರ, ಕೊಚ್ಚಿ, ಲಖನೌ, ಲುಧಿಯಾನ, ಮಂಗಳೂರು, ಮುಂಬಯಿ(2), ನಾಗ್ಪುರ, ನೋಯ್ಡಾ, ಪುಣೆ, ರಾಯಪುರ, ವಿಜಯವಾಡ, ಮತ್ತು ಸೂರತ್ ಗಳಲ್ಲಿ ಜಾಗ್ವಾರ್ ಮಳಿಗೆಗಳಿವೆ.