ಬೆಂಗಳೂರು(ಆ.21): ಜಾಗ್ವಾರ್ ಲ್ಯಾಂಡೋ ರೋವರ್ ಇಂಡಿಯಾದಲ್ಲಿ ವಹಿವಾಟು ವಿಸ್ತರಿಸುತ್ತಿದೆ. ವಿಶೇಷ ಅಂದರೆ ಬೆಂಗಳೂರಿನಲ್ಲಿ ಹೊಸ ಜಾಗ್ವಾರ್ ಲ್ಯಾಂಡ್ ರೋವರ್ ರೀಟೈಲರ್ ಘಟಕ ಆರಂಭಿಸಿದೆ.  ಹೊಸ ವಿಮಾನ ನಿಲ್ದಾಣ ರಸ್ತೆಯಲ್ಲಿ ಬೆಂಗಳೂರಿನ ಮಾರ್ಕ್‌ಲ್ಯಾಂಜ್ ಅವರಿಂದ  ನೂತನ ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ ಹೊಚ್ಚ ಹೊಸ 3S ರೀಟೈಲರ್ ಘಟಕವನ್ನು ಆರಂಭಿಸಿದೆ..

ಜಾಗ್ವಾರ್ ಕಾರು ಖರೀದಿ ಇನ್ನು ಸುಲಭ; ಬೆಂಗಳೂರಿನಲ್ಲಿ ಡಿಜಿಟಲ್ ಶೋ ರೂಂ...

ನಗರದ ಪ್ರತಿಷ್ಠಿತ ಸ್ಥಳಗಳಲ್ಲಿ ಒಂದಾದ ಹೊಸ ವಿಮಾನ ನಿಲ್ದಾಣ ರಸ್ತೆಯಲ್ಲಿ ನೆಲೆಯಾಗಿರುವ ಈ ಹೊಸ 3S ರೀಟೈಲರ್ ಘಟಕ, ಅಸಾಧಾರಣ ಗ್ರಾಹಕ ಅನುಭವ ಮತ್ತು ಅನುಕೂಲ ಒದಗಿಸಲು ನಗರದ ಮಧ್ಯಭಾಗದಲ್ಲಿರುವ ಕನ್ನಿಂಗ್‍ಹ್ಯಾಂ ರಸ್ತೆಯಲ್ಲಿರುವ ಬುಟೀಕ್ ಶೋರೂಂಗೆ ಪೂರಕವಾಗಿದೆ. ಈ ಮುಂಚೆ ಮಾರ್ಕ್‍ಲ್ಯಾಂಡ್ ತನ್ನ 3S ಘಟಕವನ್ನು ಹೊಸೂರು ರಸ್ತೆಯಲ್ಲಿ ಹೊಂದಿತ್ತು. 

ರೇಂಜ್ ರೋವರ್ ಕಾರಿಗೆ 50ರ ಸಂಭ್ರಮ; ರೋವರ್ ಫಿಫ್ಟಿ ಬಿಡುಗಡೆ!.

ಜಾಗ್ವಾರ್ ಲ್ಯಾಂಡ್ ರೋವರ್ ಅನುಮೋದಿತ ಪೂರ್ವದಲ್ಲಿ ಹೊಂದಿದ ಕಾರ್ ಗಳ ಭಾಗವನ್ನೂ ಹೊಂದಿರುವ ಈ ಘಟಕ, ತನ್ನ ನಿಷ್ಠಾವಂತ ಗ್ರಾಹಕರಿಗೆ ಜಾಗ್ವಾರ್ ಲ್ಯಾಂಡ್ ರೋವರ್ ಬ್ರ್ಯಾಂಡ್‍ಗಳ ಉಪಸಾಧನಗಳನ್ನು ಹಾಗೂ ಸರಕುಗಳನ್ನು ಸಹ ಪ್ರದರ್ಶಿಸುತ್ತದೆ. ಸಂಪೂರ್ಣವಾಗಿ ಸುಸಜ್ಜಿತವಾದ ಕಾರ್ಯಾಗಾರವು ಅತ್ಯಾಧುನಿಕ ಟೂಲ್ಸ್ ಹಾಗೂ ಸಲಕರಣೆಗಳಿಂದ ಕೂಡಿದ್ದು ಉಚ್ಛ ಗುಣಮಟ್ಟದ ಮಾರಾಟ ನಂತರ ಅನುಭವ ಒದಗಿಸುವ ತರಬೇತಿ ಹೊಂದಿದ ಟೆಕ್ನಿಶಿಯನ್‍ಗಳು ಹಾಗೂ ಸಿಬ್ಬಂದಿಯಿಂದ ಕೂಡಿದೆ.

2019 ರಲ್ಲಿ ನಗರದ ಹೃದಯ ಭಾಗದಲ್ಲಿ ಬುಟೀಕ್ ಶೋರೂಂ ಆರಂಭಿಸಿದ ನಂತರ,ಹೊಸ ವಿಮಾನ ನಿಒಲ್ದಾಣ ರಸ್ತೆಯಲ್ಲಿ ಆರಂಭವಾಗುತ್ತಿರುವ ಈ ಹೊಸ, ಅತ್ಯಾಧುನಿಕ ಸಂಯೋಜಿತ 3S ಘಟಕ, ಬೆಂಗಳೂರು ನಗರ ಪ್ರದೇಶದಲ್ಲಿ ಜೆ ಆರ್ ಎಲ್ ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುತ್ತದೆ. ನಮ್ಮ ಗ್ರಾಹಕರು ವಿಶ್ವದರ್ಜೆ ಮಟ್ಟದ ಮಾರಾಟ, ಸರ್ವಿಸ್ ಮತ್ತು ಬಿಡಿಭಾಗಗಳನ್ನು ಒಂದೇ ಸೂರಿನಡಿ ಪಡೆಯಲು ಸಾಧ್ಯವಾಗುವಂತೆ ಮಾಡುತ್ತದೆ ಎಂದು ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ (JLRIL)ಅಧ್ಯಕ್ಷ ಹಾಗೂ ನಿರ್ವಾಹಕ ನಿರ್ದೇಶಕ ರೋಹಿತ್ ಸೂರಿ ಹೇಳಿದರು.

4160 ಚ.ಮೀ. ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಹೊಸ ಘಟಕ ಅತ್ಯುತ್ಕೃಷ್ಟ ಗುಣಮಟ್ಟದ ಮಾರಾಟ ಹಾಗೂ ಮಾರಾಟ ನಂತರ ಸೇವೆ ಒದಗಿಸುವ ರೀತಿಯಲ್ಲಿ ವಿನ್ಯಾಸಗೊಂಡಿದೆ. ಉನ್ನತ ಗ್ರಾಹಕ ಅನುಭವ ಒದಗಿಸುವ ಈ ಘಟಕದಲ್ಲಿ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್‌ನ ಉತ್ಪನ್ನ ಪೋರ್ಟ್‍ಫೋಲಿಯೋದಿಂದ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಪ್ರದರ್ಶಿಸುವ ಶೋರೂಂ ಹಾಗೂ ಗ್ರಾಹಕರಿಗೆ ವಾಹನಗಳನ್ನು ಡೆಲಿವರಿ ಮಾಡಲು ಆಕರ್ಷಕ ಹಸ್ತಾಂತರ ಸ್ಥಳಾವಕಾಶ ಒಳಗೊಂಡಿದೆ.

ಭಾರತದಲ್ಲಿ ಜಾಗ್ವಾರ್ ಉತ್ಪನ್ನ ಪೋರ್ಟ್‍ಫೋಲಿಯೊ
ಭಾರತದಲ್ಲಿ ಜಗುವಾರ್ ಶ್ರೇಣಿಯಲ್ಲಿ XE (ರೂ. 46.64 ಲಕ್ಷದಿಂದ ಆರಂಭ), XF (ರೂ. 55.67 ಲಕ್ಷದಿಂದ ಆರಂಭ), F-PACE  (ರೂ. 66.07 ಲಕ್ಷದಿಂದ ಆರಂಭ),ಮತ್ತು  F-TYPE (ರೂ. 95.12 ಲಕ್ಷದಿಂದ ಆರಂಭ) ಒಳಗೊಂಡಿವೆ. ತಿಳಿಸಲಾದ ಎಲ್ಲಾ ಬೆಲೆಗಳು ಭಾರತದಲ್ಲಿ ಎಕ್ಸ್ ಶೋರೂಂ ಬೆಲೆಗಳು.

ಭಾರತದಲ್ಲಿ ಲ್ಯಾಂಡ್ ರೋವರ್ ಉತ್ಪನ್ನ ಪೋರ್ಟ್‍ಫೋಲಿಯೊ 
ಭಾರತದಲ್ಲಿ ಲ್ಯಾಂಡ್ ರೋವರ್ ಕಾರುಗಳ ಬೆಲೆ ವಿವರ. ಎಲ್ಲಾ ಬೆಲೆಗಳು ಎಕ್ಸ್‌ಶೋರೂಂ ಆಗಿವೆ.
Range Rover Evoque  (ರೂ. 58 ಲಕ್ಷದಿಂದ ಆರಂಭ),
Discovery Sport (ರೂ. 59.91 ಲಕ್ಷದಿಂದ ಆರಂಭ), 
Range Rover Velar (ರೂ. 73.30 ಲಕ್ಷ ರೂಪಾಯಿ ),
Discovery  (ರೂ. 75.59     ಲಕ್ಷದಿಂದ ಆರಂಭ), 
Range Rover Sport (ರೂ. 87.02 ಲಕ್ಷದಿಂದ ಆರಂಭ), 
Range Rover (ರೂ. 196.74 ಲಕ್ಷದಿಂದ ಆರಂಭ),
Land Rover Defender (ರೂ. 69.99 ಲಕ್ಷದಿಂದ ಆರಂಭ) 

ಭಾರತದಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ರೀಟೈಲರ್ ನೆಟ್‍ವರ್ಕ್
ಭಾರತದಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ಶ್ರೇಣಿಗಳು ಅಹ್ಮದಾಬಾದ್, ಔರಂಗಾಬಾದ್, ಬೆಂಗಳೂರು(2), ಭುವನೇಶ್ವರ, ಚಂಧೀಘಢ, ಚೆನ್ನೈ, ಕೊಯಮತ್ತೂರು, ದೆಹಲಿ(2), ಗುರುಗಾಂವ್, ಹೈದರಾಬಾದ್, ಇಂಧೋರ್, ಜೈಪುರ, ಕೋಲ್ಕತ್ತ, ಕೊಚಿ, ಕರ್ನಾಲ್, ಲಕ್ನೊ, ಲುಧಿಯಾನ, ಮಂಗಳೂರು, ಮುಂಬೈ(2), ನೊಯ್ಡ, ಪುಣೆ, ರಾಯ್ಪುರ, ಸೂರತ್ ಮತ್ತು ವಿಜಯವಾಡಗಳಲ್ಲಿ 27 ಮಳಿಗೆಗಳ ಮೂಲಕ ಲಭ್ಯವಿದೆ.