ಹ್ಯುಂಡೈನಿಂದ 2ನೇ ಎಲೆಕ್ಟ್ರಿಕ್ ಕಾರು ಮಿಸ್ಟ್ರಾ EV ಅನಾವರಣಕ್ಕೆ ಸಜ್ಜು!
ಹ್ಯುಂಡೈ ಮೋಟಾರ್ ಈಗಾಗಲೇ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಕೋನಾ SUVಕಾರು ಯಶಸ್ಸು ಕಂಡಿದೆ. SUV ಕಾರಿನ ಬಳಿಕ ಇದೀಗ ಸೆಡಾನ್ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಲು ಸಜ್ಜಾಗಿದೆ. ನೂತನ ಕಾರಿನ ಮೈಲೇಜ್ ಸೇರಿದಂತೆ ಇತರ ಮಾಹಿತಿ ಇಲ್ಲಿವೆ.
ಚೀನಾ(ನ.21); ಎಲೆಕ್ಟ್ರಿಕ್ ಕಾರು ಉತ್ಪಾದನೆಯಲ್ಲಿ ಹ್ಯುಂಡೈ ಮೋಟಾರ್ ಮುಂಚೂಣಿಯಲ್ಲಿದೆ. ಈಗಾಗಲೇ ಹ್ಯುಂಡೈ ಕೋನಾ ಎಲೆಕ್ಟ್ರಿಕ್ SUV ಕಾರು ಬಿಡುಗಡೆ ಮಾಡಿ ಯಶಸ್ಸು ಕಂಡಿದೆ. ಇದೀಗ ಗೌಂಝೌವ್ ಮೋಟಾರು ಶೋದಲ್ಲಿ ಹ್ಯುಂಡೈ ಆಕರ್ಷಕ ಸೆಡಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ರೆಡಿಯಾಗಿದೆ. ಮಿಸ್ಟ್ರಾ ಸೆಡಾನ್ ಎಲೆಕ್ಟ್ರಿಕ್ ಕಾರು ಈಗಾಗಲೇ ಎಲ್ಲರ ಕುತೂಹಲ ಹೆಚ್ಚಿಸಿದೆ.
ಒಂದು ಚಾರ್ಜ್‌ಗೆ 1,026 ಕಿ.ಮೀ ಮೈಲೇಜ್: ದಾಖಲೆ ಬರೆದ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು!..
ಕೊರೋನಾ ವೈರಸ್ ಕಾರಣ ಕಳೆದ ಎಪ್ರಿಲ್-ಮೇ ತಿಂಗಳಲ್ಲಿ ನಡೆಯಬೇಕಿದ್ದ ಹಲವು ಆಟೋ ಶೋಗಳು ರದ್ದಾಗಿದೆ. ಇದೀಗ ಕೊರೋನಾ ವಕ್ಕರಿಸಿದ 8 ತಿಂಗಳ ಬಳಿಕ ಗೌಂಝೌವ್ ಮೋಟಾರು ಶೋ ಆಯೋಜಿಸಲಾಗಿದೆ. ಈ ಶೋದಲ್ಲಿ ಹ್ಯುಂಡೈ ಮೋಟಾರ್ ಹೊಚ್ಚ ಹೊಸ ಮಿಸ್ಟ್ರಾ ಎಲೆಕ್ಟ್ರಿಕ್ ಸೆಡಾನ್ ಕಾರು ಪರಿಚಯಿಸಲಿದೆ
Photo Gallery: ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು; ಸವಾರಿ ಬಲು ಜೋರು!.
ಹೊಚ್ಚ ಹೊಸ ಮಿಸ್ಟ್ರಾ ಎಲೆಕ್ಟ್ರಿಕ್ ಸೆಡಾನ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 520 ಕಿ.ಮೀ ಮೈಲೇಜ್ ನೀಡಲಿದೆ. ಇನ್ನು ಆತ್ಯಂತ ಆಕರ್ಷಕ ವಿನ್ಯಾಸದಲ್ಲಿ ನೂತನ ಕಾರು ಅನಾವರಣಗೊಳ್ಳುತ್ತಿದೆ. LED ಹೆಡ್‌ಲ್ಯಾಂಪ್ಸ್ ಹಾಗೂ ಟೈಲ್ ಲ್ಯಾಂಪ್ಸ್, ಕ್ರೆಟಾ ರೀತಿ ಫ್ರಂಟ್ ಗ್ರಿಲ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿವೆ.
ಹೆಚ್ಚು ಸ್ಥಳಾವಕಾಶ ಹೊಂದಿರುವ ನೂತನ ಮಿಸ್ಟ್ರಾ ಸೆಡಾನ್ ಕಾರು 56.5khw ಬ್ಯಾಟರಿ ಹೊಂದಿದೆ. 40 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿವೆ. ನೂತನ ಕಾರು 2021ರಲ್ಲಿ ಬಿಡುಗಡೆಯಾಗಲಿದೆ. ಆರಂಭಿಕ ಹಂತದಲ್ಲಿ ಮಿಸ್ಟ್ರಾ ಸೆಡಾನ್ ಎಲೆಕ್ಟ್ರಿಕ್ ಕಾರು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.