Photo Gallery: ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು; ಸವಾರಿ ಬಲು ಜೋರು!
ಭಾರತ ಈಗ ಎಲೆಕ್ಟ್ರಿಕ್ ವಾಹನದತ್ತ ಗಮನ ಕೇಂದ್ರೀಕರಿಸಿದೆ. ಕೇಂದ್ರ ಸರ್ಕಾರ ಕೂಡ ಎಲೆಕ್ಟ್ರಿಕ್ ಕಾರಿಗೆ ಉತ್ತೇಜನ ನೀಡಲು ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡಿದೆ. ಇದರ ಬೆನ್ನಲ್ಲೇ ಹ್ಯುಂಡೈ ಕಂಪನಿಯ ಬಹುನಿರೀಕ್ಷಿತ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿದೆ. ಹಲವು ವಿಶೇಷತೆಗಳನ್ನೊಳಗೊಂಡಿರುವ ಕೋನಾ ಕಾರು ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ.
ಹ್ಯುಂಡೈ ಕೋನಾ ಭಾರತದ ಮೊಟ್ಟ ಮೊದಲ SUV ಎಲೆಕ್ಟ್ರಿಕ್ ಕಾರು
ಹ್ಯುಂಡೈ ಕೋನಾ ಕಾರಿನ ಆರಂಭಿಕ ಬೆಲೆ 25.30 ಲಕ್ಷ ರೂಪಾಯಿ
ಕೋನಾ ಕಾರಿನ ಗರಿಷ್ಠ ಮೈಲೇಜ್ ರೇಂಜ್ ಸಂಪೂರ್ಣ ಚಾರ್ಜ್‌ಗೆ 452 ಕಿ.ಮೀ
39.2kWh ಬ್ಯಾಟರಿ ಚಾಲಿತ ಕೋನಾ ಎಂಜಿನ್ 289 ಕಿ.ಮೀ ಮೈಲೇಜ್ ರೇಂಜ್ ನೀಡಿಲಿದೆ
ಫಾಸ್ಟ್ ಚಾರ್ಜಿಂಗ್ ಆಯ್ಕೆ ಮೂಲಕ 54 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ
64kWh ಬ್ಯಾಟರಿ ಚಾಲಿತ ಕೋನಾ ಎಂಜಿನ್ 452 ಕಿ.ಮೀ ಮೈಲೇಜ್ ನೀಡಲಿದೆ
ನೂತನ ಕೋನಾ ಎಲೆಕ್ಟ್ರಿಕ್ ಕಾರು 5 ಬಣ್ಣಗಳಲ್ಲಿ ಲಭ್ಯವಿದೆ
ಭಾರತದಲ್ಲಿ ಬಿಡುಗಡೆಯಾಗಿರುವ ಕೋನಾ ಕಾರಿನಲ್ಲಿ 100 kW ಮೋಟಾರು ಬಳಸಲಾಗಿದೆ
131 bhp ಪವರ್ ಹಾಗೂ 395 Nm ಪೀಕ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ
ಹ್ಯುಂಡೈ ಕ್ರೆಟಾ ಕಾರಿನಂತೆ ಕೋನಾ ಕೂಡ ಹೆಚ್ಚು ಸ್ಥಳಾವಕಾಶ ಹೊಂದಿದೆ