Asianet Suvarna News Asianet Suvarna News

Kashmir Tweet Row: ಪಾಕಿಸ್ತಾನಿ ಡೀಲರ್‌ನ ವಿವಾದಾತ್ಮಕ ಪೋಸ್ಟ್‌ಗೆ ವಿಷಾದ ವ್ಯಕ್ತಪಡಿಸಿದ ಹುಂಡೈ ಇಂಡಿಯಾ!

*ಕಾಶ್ಮೀರ ಪ್ರತ್ಯೇಕತೆ ಬೆಂಬಲಿಸಿದ ಕಾರಣಕ್ಕೆ ಬಾಯ್‌ಕಾಟ್ ಹ್ಯುಂಡೈ ಟ್ರೆಂಡಿಂಗ್
*ಟೀಕೆ, ಆಕ್ರೋಶ ಹೆಚ್ಚಾದಂತೆ ಸ್ಪಷ್ಟನೆ ನೀಡಿದ್ದ ಹ್ಯುಂಡೈ ಇಂಡಿಯಾ
*ಭಾರತ ಎರಡನೇ ತವರು, ರಾಷ್ಟ್ರೀಯತೆಯನ್ನು ಗೌರವಿಸುತ್ತದೆ ಎಂದಿದ್ದ ಕಂಪನಿ
*ಹೊಸ ಹೇಳಿಕೆ ಮೂಲಕ  ವಿಷಾದ ವ್ಯಕ್ತಪಡಿಸಿದ ಹುಂಡೈ ಮೋಟಾರ್ಸ್ 
 

Hyundai Regrets Offense Caused To People Of India for Pakistan distributor inappropriate Kashmir post mnj
Author
Bengaluru, First Published Feb 8, 2022, 11:58 AM IST

ನವದೆಹಲಿ (ಫೆ. 08): ಕಾಶ್ಮೀರ ಪ್ರತ್ಯೇತಕತೆ ವಿಚಾರವಾಗಿ ಹೊತ್ತಿಕೊಂಡ ಟ್ವಿಟರ್ ವಿರೋಧದ ಬೆನ್ನಲ್ಲೇ ಹ್ಯುಂಡೈ ಇಂಡಿಯಾ ರವಿವಾರ ಸ್ಪಷ್ಟನೆ ನೀಡಿ ಟ್ವೀಟ್‌ ಮಾಡಿತ್ತು. ಆದರೆ  ಸಾಮಾಜಿಕ ಮಾಧ್ಯಮದಲ್ಲಿ ಬ್ರ್ಯಾಂಡ್ ಪ್ರೊಫೈಲ್‌ನಲ್ಲಿ ಮಾಡಿದ ಆಕ್ಷೇಪಾರ್ಹ ಹೇಳಿಕೆಗೆ  ಕ್ಷಮೆ ಅಥವಾ ವಿಷಾದ ವ್ಯಕ್ತಪಡಿಸಿರಲಿಲ್ಲ. ಮಂಗಳವಾರ (ಫೆ. 08) ಹುಂಡೈ ಮೋಟಾರ್ಸ್ ಇಂಡಿಯಾ ಹೊಸ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿನ ಗ್ರಾಹಕರಿಗೆ ಉಂಟಾದ ಯಾವುದೇ ಅಪರಾಧಕ್ಕಾಗಿ ಕಂಪನಿ ತೀವ್ರ ವಿಷಾದ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದೆ. 

ಪಾಕಿಸ್ತಾನ(Pakistan) ಹ್ಯುಂಡೈ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕಾಶ್ಮೀರ ಪ್ರತ್ಯೇಕಿಸುವ(Kashmir) ಹೋರಾಟಕ್ಕೆ ಬೆಂಬಲ ಸೂಚಿಸಿ ಟ್ವೀಟ್ ಮಾಡಲಾಗಿತ್ತು. ಈ ಕುರಿತು ಹ್ಯುಂಡೈ ಇಂಡಿಯಾ ನಿಲುವ ಕೇಳಿದ ಭಾರತೀಯರ ಖಾತೆಗಳನ್ನು ಟ್ವಿಟರ್ ಬ್ಲಾಕ್ ಮಾಡಿತ್ತು. ಹೀಗಾಗಿ ಹ್ಯುಂಡೈ ಕಾರುಗಳನ್ನು ಬಹಿಷ್ಕರಿಸಿ(Boycott Hyundai) ಎಂಬ ಅಭಿಯಾನ ಕಳೆದ ಕೆಲವು ದಿನಗಳಿಂದ ಟ್ವಿಟರ್‌ನಲ್ಲಿ ಭಾರಿ ಟ್ರೆಂಡ್ ಆಗುತ್ತಿದೆ. ಈ ಟ್ರೆಂಡಿಂಗ್ ಗಂಭೀರತೆ ಅರಿತ ಹ್ಯುಂಡೈ ಇಂಡಿಯಾ ಇದೀಗ ವಿಷಾದ ವ್ಯಕ್ತಪಡಿಸಿದೆ.

ಪೋಸ್ಟ್ ಕಂಪನಿ ನೀತಿ ಉಲ್ಲಂಘಿಸಿದೆ:  ಹ್ಯುಂಡೈ ಮೋಟಾರ್ ಕಂಪನಿಯು ವ್ಯಾಪಾರ ನೀತಿಯಂತೆ ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ರಾಜಕೀಯ ಅಥವಾ ಧಾರ್ಮಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಮತ್ತು ಪಾಕಿಸ್ತಾನದ ಸ್ವತಂತ್ರ ಸ್ವಾಮ್ಯದ ವಿತರಕರ ಖಾತೆಯಿಂದ ಕಾಶ್ಮೀರಕ್ಕೆ ಸಂಬಂಧಿಸಿದ ಪೋಸ್ಟ್ ಈ ನೀತಿಯನ್ನು ಉಲ್ಲಂಘಿಸಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಪಾಕಿಸ್ತಾನ ಮೂಲದ ವಿತರಕರ "ಅನಧಿಕೃತ, ವ್ಯಾಪಾರೇತರ ಸಂಬಂಧಿತ ಸಾಮಾಜಿಕ ಮಾಧ್ಯಮ ಪೋಸ್ಟ್‌ನ್ನು ಬಲವಾಗಿ ತಿರಸ್ಕರಿಸಿದ ಹುಂಡೈ, ಪಾಕಿಸ್ತಾನದ ವಿತರಕರಿಗೆ ಅವರ ತಪ್ಪಾದ ವರ್ತನೆ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಕಂಪನಿ ಹೇಳಿದೆ. 

 

 

ಪೋಸ್ಟ್‌ ಡಿಲೀಟ್:  ಭವಿಷ್ಯದಲ್ಲಿ ಈ ರೀತಿಯ ಪೋಸ್ಟ್‌ಗಳು ಮರುಕಳಿಸದಂತೆ ತಡೆಯಲು ಕ್ರಮಗಳನ್ನು ಕೈಗೊಂಡಿದ್ದೇವೆ ಮತ್ತು ಈ ಹಿಂದೆ ಮಾಡಲಾದ  ಪೋಸ್ಟನ್ನು ತೆಗೆದುಹಾಕಲಾಗಿದೆ ಎಂದು ಕಂಪನಿಯು ತಿಳಿಸಿದೆ. ಅನಧಿಕೃತ ಸಾಮಾಜಿಕ ಮಾಧ್ಯಮ ಚಟುವಟಿಕೆಯ ಬಗ್ಗೆ ತೀವ್ರವಾಗಿ ವಿಷಾದಿಸುತ್ತಾ, ಹುಂಡೈ ಮೋಟಾರ್ಸ್ ಭಾರತದಲ್ಲಿ ಹಲವು ದಶಕಗಳಿಂದ ಹೂಡಿಕೆ ಮಾಡುತ್ತಿದೆ ಮತ್ತು ತನ್ನ ಭಾರತೀಯ ಗ್ರಾಹಕರಿಗ ಬದ್ಧವಾಗಿದೆ ಎಂದು ಹೇಳಿದೆ.

ಹ್ಯುಂಡೈ ಮೋಟಾರ್ಸ್ ಇಂಡಿ ಟ್ವೀಟರ್‌ನಲ್ಲಿ ಬಲವಾದ ವಿರೊಧ ಎದುರಿಸಿದ ಬಳಿಕ  ಹೇಳಿಕೆಯನ್ನು ಬಿಡುಗಡೆ ಮಾಡಿತ್ತು, ಆದರೆ  ನಂತರ ಸಾಮಾಜಿಕ ಮಾಧ್ಯಮದಲ್ಲಿ ಬ್ರ್ಯಾಂಡ್ ಪ್ರೊಫೈಲ್‌ನಲ್ಲಿ ಮಾಡಿದ ಆಕ್ಷೇಪಾರ್ಹ ಹೇಳಿಕೆಗೆ ವಿಷಾದ ವ್ಯಕ್ತಪಡಿಸಲಿಲ್ಲ ಅಥವಾ ಕ್ಷಮೆಯಾಚಿಸಿರಲಿಲ್ಲ. ಆದರೆ ಈಗ ಮತ್ತೊಂದ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಪಾಕಿಸ್ತಾನದ ವಿತರಕತ ನಡೆಗೆ ವಿಷಾದ ವ್ಯಕ್ತಪಡಿಸಿದೆ. 

ಏನಿದು ಪ್ರಕರಣ?: ಭಾರತದಲ್ಲಿ ದಿಢೀರ್ ಹ್ಯುಂಡೈ ಕಾರು ಬಹಿಷ್ಕರಿಸಿ ಅಭಿಯಾನ ಟ್ವಿಟರ್‌ನಲ್ಲಿ ಭಾರಿ ಟ್ರೆಂಡ್ ಆಗಿದೆ. ಹ್ಯುಂಡೈ ವಿರುದ್ಧ ಭಾರತೀಯರು ಆಕ್ರೋಶ, ಟೀಕೆಗಳನ್ನು ವ್ಯಕ್ತಪಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಲು ಆರಂಭಿಸಿದ್ದಾರೆ. ಇದಕ್ಕೆ  ಕಾರಣ ಕಾಶ್ಮೀರ ಪ್ರತ್ಯೇಕತೆಯ ಕೂಗು ಹಾಗೂ ಹ್ಯುಂಡೈ ನಿಲುವಾಗಿತ್ತು. ಫೆಬ್ರವರಿ 5ನೇ ತಾರೀಖನ್ನು ಪಾಕಿಸ್ತಾನ ಕಾಶ್ಮೀರ ದಿನ(kashmir solidarity day) ಎಂದು ಆಚರಿಸುತ್ತದೆ. ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದೆ, ಇದರ ವಿಮೋಚನೆ ಅಗತ್ಯ. ಇದಕ್ಕಾಗಿ ಪಾಕಿಸ್ತಾನ ಕಾಶ್ಮೀರ ದಿನ ಎಂದು ಆಚರಿಸಿ ಭಾರತವನ್ನು ಕೆಣಕುವ ಹಾಗೂ ಎಚ್ಚರಿಸುವ ಕೆಲಸ ಪ್ರತಿ ವರ್ಷ ಮಾಡುತ್ತಿದೆ.

ಇದನ್ನೂ ಓದಿ:  'Boycott Amazon': ತ್ರಿವರ್ಣ ಧ್ವಜಕ್ಕೆ ಅವಮಾನ : ಭಾರತೀಯರ ಕೆಂಗಣ್ಣಿಗೆ ಗುರಿಯಾದ ಅಮೆಝಾನ್!

ಇದಕ್ಕೆ ತುಪ್ಪ ಸುರಿಯಲು ಪಾಕಿಸ್ತಾನ ಹ್ಯುಂಡೈ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕಾಶ್ಮೀರವನ್ನು ಪ್ರತ್ಯೇಕಿಸುವ ಹಾಗೂ ಭಾರತದ ವಿರುದ್ಧದ ಹೋರಾಟ ಬೆಂಬಿಲಿಸಿ ಟ್ವೀಟ್ ಮಾಡಿದೆ. ಕಾಶ್ಮೀರ ಪ್ರತ್ಯೇಕಿಸುವಲ್ಲಿ ಹೋರಾಟ ಮಾಡಿದ ನಮ್ಮ ಕಾಶ್ಮೀರಿ ಸಹೋದರರನ್ನು ಸ್ಮರಿಸೋಣ, ಮುಂದಿನ ಹೋರಾಟವನ್ನು ಬೆಂಬಲಿಸೋಣ ಎಂದು ಟ್ವೀಟ್ ಮಾಡಿದೆ. ಈ ಟ್ವೀಟ್ ಜೊತೆಗೆ ದಾಲ್ ಸರೋವರದ ಫೋಟೋ ಹಾಕಿ ಕಾಶ್ಮೀರಕ್ಕೆ ಮುಳ್ಳಿನ ಬೇಲಿ ಹಾಕಿದ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ. ಈ ಮೂಲಕ ಕಾಶ್ಮೀರವನ್ನು ಮುಕ್ತಿಗೊಳಿಸೋಣ ಎಂದು ಹ್ಯುಂಡೈ ಪಾಕಿಸ್ತಾನ ಟ್ವೀಟ್ ಮಾಡಿದೆ.

ಈ ಟ್ವೀಟ್ ಗಮನಿಸಿದ ಭಾರತೀಯರು ತಕ್ಷಣ ಹ್ಯುಂಡೈ ಗ್ಲೋಬಲ್ ಹಾಗೂ ಹ್ಯುಂಡೈ ಇಂಡಿಯಾ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಇದೇ ವೇಳೆ ಟ್ವೀಟ್ ಕುರಿತು ಹ್ಯುಂಡೈ ಇಂಡಿಯಾ ನಿಲುವೇನು? ಪಾಕ್ ಟ್ವೀಟ್ ಖಂಡಿಸುತ್ತೀರಾ ಎಂದು ಹಲವರು ಪ್ರಶ್ನಿಸಿದ್ದಾರೆ. ಯಾವುದೇ ಪ್ರತಿಕ್ರಿಯೆ ನೀಡಿದ ಹ್ಯುಂಡೈ ಇಂಡಿಯಾ ಪ್ರಶ್ನಿಸಿದ ನೆಟ್ಟಿಗರ ಖಾತೆಯನ್ನೇ ಬ್ಲಾಕ್ ಮಾಡಿದೆ. ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದ ಹ್ಯುಂಡೈ ಕಾರು ಬಹಿಷ್ಕರಿಸಿ ಅಭಿಯಾನ ಆರಂಭಗೊಂಡಿತು.

Follow Us:
Download App:
  • android
  • ios