'Boycott Amazon': ತ್ರಿವರ್ಣ ಧ್ವಜಕ್ಕೆ ಅವಮಾನ : ಭಾರತೀಯರ ಕೆಂಗಣ್ಣಿಗೆ ಗುರಿಯಾದ ಅಮೆಝಾನ್!
*ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವಂತಹ ವಸ್ತುಗಳನ್ನು ಮಾರಾಟ
*ಭಾರತೀಯರ ಕೆಂಗಣ್ಣಿಗೆ ಗುರಿಯಾದ ಇ-ಕಾಮರ್ಸ್ ದೈತ್ಯ ಅಮೆಝಾನ್
*#Amazon_Insults_National_Flag ಟ್ವೀಟರ್ ಟ್ರೆಂಡ್
Tech Desk: ಗಣರಾಜ್ಯೋತ್ಸಕ್ಕೆ ಕೆಲ ದಿನ ಬಾಕಿ ಇರುವಂತೆಯೇ ಇ- ಕಾಮರ್ಸ್ ದೈತ್ಯ ಅಮೆಝಾನ್ (Amazon) ಭಾರತದ ರಾಷ್ಟ್ರಧ್ವಜಕ್ಕೆ (Indian National Flag) ಅಪಮಾನ ಮಾಡುವಂತಹ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಈಗ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಅಮೆಝಾನ್ ಭಾರತೀಯ ತ್ರಿವರ್ಣ ಧ್ವಜ ಬಳಸಿ ಡಿಸೈನ್ ಮಾಡಿದ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಿದ್ದಕ್ಕಾಗಿ ಭಾರೀ ಆಕ್ರೋಶ ವ್ಯಕ್ತವಾಗಿದೆ. #Amazon_Insults_National_Flag ಎಂಬ ಹ್ಯಾಶ್‌ಟ್ಯಾಗ್ ಜತೆಗೆ ಅಮೆಝಾನ್ ಬಹಿಷ್ಕರಿಸಿ ಎಂದು ಟ್ವೀಟರ್‌ನಲ್ಲಿ ಸೋಮವಾರದಿಂದ ಟ್ರೆಂಡ್ ಆರಂಭವಾಗಿದೆ.
ಟ್ವಿಟರ್ ಬಳಕೆದಾರರೊಬ್ಬರು "ಚಾಕೊಲೇಟ್‌ಗಳು, ಫೇಸ್ ಮಾಸ್ಕ್‌ಗಳು, ಸೆರಾಮಿಕ್ ಮಗ್‌ಗಳು, ಕೀಚೈನ್‌ಗಳು ಮತ್ತು ಮಕ್ಕಳ ಉಡುಪುಗಳಂತಹ ವಸ್ತುಗಳು ಧ್ವಜದ ಮುದ್ರೆಯನ್ನು ಹೊಂದಿದ್ದು, ಇದು ಭಾರತದ ಧ್ವಜ ಸಂಹಿತೆ, 2002ಗೆ (Flag Code of India) ವಿರುದ್ಧವಾಗಿದೆ" ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Flag Code of India 2002: ಭಾರತದ ಧ್ವಜ ಸಂಹಿತೆ ಪ್ರಕಾರ ಧ್ವಜವನ್ನು ಯಾವುದೇ ವೇಷಭೂಷಣ ಅಥವಾ ಸಮವಸ್ತ್ರದ ಭಾಗವಾಗಿ ಬಳಸುವಂತಿಲ್ಲ. ಕುಶನ್‌ಗಳು, ಕರವಸ್ತ್ರಗಳು ಅಥವಾ ಪೆಟ್ಟಿಗೆಗಳ ಮೇಲೆ ಅದನ್ನು ಕಸೂತಿ ಮಾಡುವುದು ಅಥವಾ ಮುದ್ರಿಸುವಂತಿಲ್ಲ. ಹೀಗಾಗಿ ಈ ಕಾನೂನನ್ನು ಅಮೆಝಾನ್ ಉಲ್ಲಂಘಿಸಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಆದರೆ ಭಾರತೀಯ ಧ್ವಜದ ಮೂರು ಪ್ರಾಥಮಿಕ ಬಣ್ಣಗಳ ಬಳಕೆ ಅಥವಾ ಭಾರತೀಯ ಧ್ವಜದ ವಿಭಿನ್ನ ರೂಪವನ್ನು ಬಳಸಬಹುದೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. .
ಇದನ್ನೂ ಓದಿ: 75 ವರ್ಷದಲ್ಲಿ ಮೊದಲ ಬಾರಿ, 30 ನಿಮಿಷ ತಡವಾಗಿ ಆರಂಭವಾಗುತ್ತೆ Republic Day ಪರೇಡ್!
ಸೋಮವಾರದಿಂದ ಅಮೆಝಾನ್ ಬಹಿಷ್ಕಾರದ ಟ್ವೀಟ್ಸ್ ಟ್ರೆಂಡ್‌ನಲ್ಲಿದ್ದು ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಕೆಲವು ಟ್ವಿಟರ್ ಬಳಕೆದಾರರು ಅಮೆಝಾನ್ ತನ್ನ ಸೇಲ್ ಹೆಚ್ಚಿಸಲು 'cheap method' ಬಳಸುತ್ತಿದೆ ಎಂದು ಹೇಳಿದರೆ ಇನ್ನೂ ಕೆಲವರು ದೇಶಭಕ್ತಿಯ ಪ್ರದರ್ಶನದ ಮೂಲಕ ಗ್ರಾಹಕರನ್ನು ಮೆಚ್ಚಿಸಲು ಕಂಪನಿಯು ಶ್ರಮಿಸುತ್ತಿದೆ ಎಂದು ಗಮನಸೆಳೆದಿದ್ದಾರೆ. ಇಕಾಮರ್ಸ್ ದೈತ್ಯ ಅಮೆಝಾನ್ ಜನವರಿ 26 ರಂದು 73 ನೇ ಗಣರಾಜ್ಯೋತ್ಸವದ ಮೊದಲ ಸೇಲ್ ನಡೆಸಿತ್ತು.
2019 ರಲ್ಲಿ, ಕಂಪನಿಯು ಹಿಂದೂ ದೇವರುಗಳ ಮುದ್ರಣಗಳೊಂದಿಗೆ ಟಾಯ್ಲೆಟ್ ಸೀಟ್ ಕವರ್‌ಗಳು ಮತ್ತು ಡೋರ್‌ಮ್ಯಾಟ್‌ಗಳನ್ನು ಮಾರಾಟ ಮಾಡುತ್ತಿದೆ ಎಂದು ಆರೋಪಿಸಲಾಗಿತ್ತು. 2019ರಲ್ಲಿ ಕೂಡ ಇದೇ ರೀತಿಯ ಬಹಿಷ್ಕಾರ ಅಭಿಯಾನವನ್ನು ಪ್ರೇರೇಪಿಸಿತ್ತು. 2017 ರಲ್ಲಿ, ಅಮೆಝಾನ್‌ನ ಕೆನಡಾದ ವೆಬ್‌ಸೈಟ್‌ನಲ್ಲಿ ರಾಷ್ಟ್ರೀಯ ಧ್ವಜದ ಮುದ್ರೆಯನ್ನು ಹೊಂದಿರುವ ಡೋರ್‌ಮ್ಯಾಟ್ ಅನ್ನು ಪಟ್ಟಿ ಮಾಡಿದಾಗ ಇದೇ ರೀತಿಯ ಹಿನ್ನಡೆಯನ್ನು ಎದುರಿಸಿತ್ತು. ಆ ಸಮಯದಲ್ಲಿ ಭಾರತ ಸರ್ಕಾರವು ಅಮೆಜಾನ್‌ನ ಹಿರಿಯ ಅಧಿಕಾರಿಗಳೊಂದಿಗೆ ವಿಷಯವನ್ನು ಪ್ರಸ್ತಾಪಿಸಲು ಯುಎಸ್ ಮತ್ತು ಕೆನಡಾದ ರಾಯಭಾರ ಕಚೇರಿಗಳನ್ನು ಒತ್ತಾಯಿಸಿತ್ತು.
ಇದನ್ನೂ ಓದಿ: Threat To PM Modi: ಮೋದಿಗೆ ಗಣರಾಜ್ಯ ದಿನದ ವೇಳೆ ಉಗ್ರ ಬೆದರಿಕೆ: ಹೈ ಅಲರ್ಟ್
ಟ್ವಿಟ್ಟರ್ ಬಳಕೆದಾರರಿಂದ ಪೋಸ್ಟ್ ಮಾಡಲಾದ ಎಲ್ಲಾ ಉತ್ಪನ್ನಗಳು ಅಮೆಝಾನ್‌ನಲ್ಲಿ ಮಾರಾಟಕ್ಕಿಲ್ಲ. ಅಮೆಜಾನ್ ಇಂಡಿಯಾದಲ್ಲಿ ಫೇಸ್ ಮಾಸ್ಕ್‌ಗಳು, ಬಟ್ಟೆಗಳನ್ನು ಪ್ರಾಥಮಿಕವಾಗಿ ಭಾರತೀಯ ಕ್ರೀಡಾ ಉಡುಪುಗಳ ಹಾಗೂ ಕೀಚೈನ್ಸ್ನಂತಹ ಕೆಲವು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಆದರೆ ಬಳಕೆದಾರರು ಆರೋಪಿಸಿದಂತೆ ಭಾರತೀಯ ಧ್ವಜವಿರುವ ಯಾವುದೇ ಬೂಟುಗಳನ್ನು ಲಭ್ಯವಿಲ್ಲ. ಇನ್ನು ಕೆಲವು ಬಳಕೆದಾರರು ಭಾರತೀಯ ಧ್ವಜದೊಂದಿಗೆ ವಿವಿಧ ಉತ್ಪನ್ನಗಳನ್ನು ತೋರಿಸುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಈ ಚಿತ್ರಗಳು ಅಮೆಜಾನ್ ಇಂಡಿಯಾದ ಪ್ರೋಡಕ್ಟ್ಸ ಎಂಬುದರ ಬಗ್ಗೆ ಯಾವುದೇ ಖಚಿತತೆ ಇಲ್ಲ.