ನವದೆಹಲಿ(ಜು.13): ಸುಪ್ರೀಂ ಕೋರ್ಟ್ ಆದೇಶದಿಂದ ಭಾರತದಲ್ಲಿ ಎಪ್ರಿಲ್ 1, 2020ರಿಂದ BS4 ವಾಹನಗಳ ಮಾರಾಟ ನಿಷೇಧಿಸಿದೆ. ಆದರೆ ವಾಹನ ಕಂಪನಿಗಳಿಗೂ ಉತ್ಪಾದನೆ ಮಾಡಿದ BS4 ವಾಹನ ಮಾರಾಟ ಮಾಡಲು ಕೊರೋನಾ ಅಡ್ಡಿಯಾಗಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಹೆಚ್ಚುವರಿ 10 ದಿನ ಕಾಲಾವಕಾಶ ನೀಡಿದರೂ ಲಾಕ್‌ಡೌನ್ 4 ಹಂತದ ವರೆಗೆ ಮುಂದುವರಿದ ಕಾರಣ ಮಾರಾಟ ಸಾಧ್ಯವಾಗಿಲ್ಲ. ಇದೀಗ BS4 ವಾಹನ ಮಾರಾಟವೂ ಇಲ್ಲ, ರಿಜಿಸ್ಟ್ರೇಶನ್ ಕೂಡ ಆಗಲ್ಲ.

TVS ಅಪಾಚೆ ಪ್ರತಿಸ್ಪರ್ಧಿ, ಹೊಂಡಾ X-Blade ಬೈಕ್ ಬಿಡುಗಡೆ!.

ಇದನ್ನು ಅರಿತಿದ್ದ ಹೊಂಡಾ, ಮೊದಲೇ BS4 ವಾಹನಗಳನ್ನು ರಿಜಿಸ್ಟ್ರೇಶನ್ ಮಾಡಿಸಿದೆ. ಇದೀಗ ಒಂದು ಕಿಲೋಮೀಟರ್ ಬಳಸದ ನೂತನ BS4 ಬೈಕ್ ಹಾಗೂ ಸ್ಕೂಟರ್‌ಗಳನ್ನು ಸೆಕೆಂಡ್ ಹ್ಯಾಂಡ್ ವಾಹನದ ರೀತಿಯಲ್ಲಿ ಮಾರಾಟ ಮಾಡುತ್ತಿದೆ. ಇಷ್ಟೇ ಅಲ್ಲ ಬರೋಬ್ಬರಿ 15,000 ರೂಪಾಯಿ ಡಿಸ್ಕೌಂಟ್ ನೀಡೋ ಮೂಲಕ ಕಡಿಮೆ ಬೆಲೆಗೆ ಹೋಂಡಾ ತನ್ನ ದ್ವಿಚಕ್ರವಾಹನ ಮಾರಾಟ ಮಾಡುತ್ತಿದೆ

ಆಕರ್ಷಕ ವಿನ್ಯಾಸ, ಹೊಸತನಗಳೊಂದಿಗೆ ಹೊಂಡಾ ಲಿವೊ BS6 ಬೈಕ್ ಬಿಡುಗಡೆ.

BS4 ವಾಹನ ಮಾರಾಟಕ್ಕೆ ಹೊಂಡಾ ತನ್ನ ಅಧೀಕೃತ ವೆಬ್‌ಸೈಟ್ ಮೂಲಕ ಗ್ರಾಹಕರಿಗೆ ಅವಕಾಶ ಮಾಡಿಕೊಟ್ಟಿದೆ. ಖರೀದಿಸುವ ಗ್ರಾಹಕರು ತಮ್ಮ ಹತ್ತಿರದ ಡೀಲರ್ ಬಳಿ BS4 ವಾಹನ ಇದ್ದರೆ ಖರೀದಿ ಮಾಡಬಹುದು. ಗ್ರಾಹಕ ಬುಕ್ ಮಾಡಿದ ದ್ವಿಚಕ್ರವಾಹನ ಸ್ಟಾಕ್ ಹೆಚ್ಚಿದ್ದರೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ. ಕೆಲವು ಶೋ ರೂಂಗಳಲ್ಲಿ 15,000 ರೂಪಾಯಿ ಡಿಸ್ಕೌಂಟ್ ನೀಡಿ BS4 ಸ್ಕೂಟರ್ ಮಾರಾಟ ಮಾಡಿದೆ.