ನವದೆಹಲಿ(ಜು.07):  ಹೊಂಡಾ ಮೋಟರ್‌ಸೈಕಲ್ ಹಾಗೂ ಸ್ಕೂಟರ್ ಇಂಡಿಯಾ ನೂತನ ಬೈಕ್ ಬಿಡುಗಡೆ ಮಾಡಿದೆ. ಬಿಎಸ್6 ಎಮಿಶನ್ ಎಂಜಿನ್ ಹೊಂದಿರುವ X-Blade ಬೈಕ್ ಬೆಲೆ 1.05 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ನೂತನ X-Blade ಬೈಕ್ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಸಿಂಗ್ ಡಿಸ್ಕ್ ಹಾಗೂ ಡುಯೆಲ್ ಡಿಸ್ಕ್ ವೇರಿಯೆಂಟ್ ಬೈಕ್ ಲಭ್ಯವಿದೆ.

ಆಕರ್ಷಕ ವಿನ್ಯಾಸ, ಹೊಸತನಗಳೊಂದಿಗೆ ಹೊಂಡಾ ಲಿವೊ BS6 ಬೈಕ್ ಬಿಡುಗಡೆ

ಹೊಂಡಾ X-Blade ಬೈಕ್ 160cc ಎಂಜಿನ್,  ಬೈಕ್, ಫ್ಯುಯೆಲ್ ಇಂಜೆಕ್ಟ್, ಹೊಂಡಾ ಇಕೋ ಟೆಕ್ನಾಲಜಿ ಹೊಂದಿದೆ. ಇನ್ನು 13.67 Bhp ಪವರ್ ಹಾಗೂ 14.7nm ಪೀಕ್ ಟಾರ್ಕ್ ಉತ್ಪಾದಿಸ ಬಲ್ಲ ಸಾಮರ್ಥ್ಯ ಹೊಂದಿದೆ. ರೋಬೋ ಫೇಸ್ LED ಹೆಡ್‌ಲ್ಯಾಂಪ್ಸ್, ಹೊಸ ವಿನ್ಯಾಸದ  LED ಟೈಲ್ ಲ್ಯಾಂಪ್ ಹೊಂದಿದೆ. ಇಂಧನ ಟ್ಯಾಂಕ್ ವಿನ್ಯಾಸದಲ್ಲೂ ಬದಲಾವಣೆ ಮಾಡಲಾಗಿದೆ.

ಜುಲೈನಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಬೈಕ್ ವಿವರ ಇಲ್ಲಿದೆ

ಮುಂಭಾಗದಲ್ಲಿ 276 mm ಪೆಟಲ್ ಡಿಸ್ಕ್ ಹಾಗೂ ಸಿಂಗಲ್ ಚಾನೆಲ್ ABS ಬ್ರೇಕ್ ಹೊಂದಿದೆ. ಹಿಂಭಾಗದಲ್ಲಿ 220 mm ಡಿಸ್ಕ್ ಅಥವಾ  130 mm ಡ್ರಂ ಬ್ರೇಕ್ ಆಯ್ಕೆ ಲಭ್ಯವಿದೆ.  ಹೊಸ ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಹೊಂದಿದಿ. ಟಿವಿಎಸ್ ಅಪಾಚೆ, ಹೀರೋ Xtreme, ಬಜಾಜ್ ಪಲ್ಸಾರ್ NS 160 ಸೇರಿದಂತೆ ಕಲ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.