ನವದೆಹಲಿ(ಏ.22): ಹೊಂಡಾ ಮೋಟರ್‌ಸೈಕಲ್ & ಸ್ಕೂಟರ್ ಇಂಡಿಯಾ ಇದೀಗ ನೂತನ ಸ್ಪೋರ್ಟ್ ಬೈಕ್ ಬಿಡುಗಡೆ ಮಾಡಿದೆ. ಹೊಂಡಾ CBR650R ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. 2 ಬಣ್ಣಗಳಲ್ಲಿ ನೂತನ ಬೈಕ್ ಲಭ್ಯವಿದೆ. ಹೊಂಡಾ CBR650F ಬೈಕ್ ಬದಲು ಇದೀಗ ನೂತನ CBR650F ಬೇಕ್ ಬಿಡುಗಡೆಯಾಗಿದೆ.

ಇದನ್ನೂ ಓದಿ: ಶೀಘ್ರದಲ್ಲೇ ಬಜಾಜ್ ಅವೆಂಜರ್ 160 ABS ಬಿಡುಗಡೆ- 180 ಸ್ಥಗಿತ!

ಭಾರತದಲ್ಲಿ ಬಿಡುಗಡೆಯಾಗಿರುವ ಹೊಂಡಾ CBR650R ಬೈಕ್  649 cc, ಲಿಕ್ವಿಡ್ ಕೂಲ್ಡ್, ಇನ್‌ಲೈನ್ 4 ಸಿಲಿಂಡರ್ ಎಂಜಿನ್ ಹೊಂದಿದ್ದು, 87 bhp ಪವರ್ (@11,500 rpm) ಹಾಗೂ  60.1 Nm (@8000 rpm) ಪೀಕ್ ಟಾರ್ಕ್ ಉತ್ಪಾದಿಸಲಿದೆ. ವಿದೇಶಗಳಲ್ಲಿ ಬಿಡುಗಡೆಯಾಗಿರು  ಹೊಂಡಾ  CBR650R ಬೈಕ್  94 bhp ಪವರ್ ಹಾಗೂ  64 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.

ಇದನ್ನೂ ಓದಿ: ದ್ವಿಚಕ್ರ ವಾಹನದ ಜೊತೆಗೆ ಹೆಲ್ಮೆಟ್ ಖರೀದಿ ಕಡ್ಡಾಯ!

ಹೊಂಡಾ CBR650R ಸ್ಪೋರ್ಟ್ ಬೈಕ್ ಬೆಲೆ 7.7 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಡ್ಯುಯೆಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೆಕಿಂಗ್ ಸಿಸ್ಟಮ್), ಹೊಂಡಾ ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಆಧುನಿಕ ತಂತ್ರಜ್ಞಾನ ಈ ಬೈಕ್‌ನಲ್ಲಿದೆ. ಗ್ರ್ಯಾಂಡ್ ಪ್ರಿಕ್ಸ್ ರೆಡ್ ಹಾಗೂ ಗನ್‌ಪೌಡರ್ ಬ್ಲಾಕ್ ಕಲರ್‌ಗಳಲ್ಲಿ ನೂತನ ಬೈಕ್ ಲಭ್ಯವಿದೆ.