ನವದೆಹಲಿ(ಏ.18): ಕ್ರೂಸರ್ ವಿಭಾಗದಲ್ಲಿ ಬಜಾಜ್ ಅವೆಂಜರ್ ಬೈಕ್ ಹೆಚ್ಚು ಸದ್ದು ಮಾಡಿದೆ. ಕ್ರೂಸರ್ ಬೈಕ್‌ಗಳಲ್ಲಿ ಅತೀ ಕಡಿಮೆ ಬೆಲೆಗೆ ಲಭ್ಯವಿರುವ ಬೈಕ್ ಅನ್ನೋ ಹೆಗ್ಗಳಿಕೆಗೂ ಬಜಾಜ್ ಅವೆಂಜರ್ ಪಾತ್ರವಾಗಿದೆ. ಇದೀಗ ಅವೆಂಜರ್ 180 ಬೈಕ್ ಸ್ಥಗಿತಗೊಳ್ಳುತ್ತಿದೆ. ಇದರ ಬದಲು ಅವೆಂಜರ್ 160ABS ಬೈಕ್ ಶೀಘ್ರದಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಎಪ್ರಿಲಿಯಾ ಸ್ಟ್ರೋಮ್ 125 ಆಟೋಮ್ಯಾಟಿಕ್ ಸ್ಕೂಟರ್ ಲಾಂಚ್!

ಅವೆಂಜರ್ ಬೈಕ್‌ಗಳಲ್ಲಿ ಎಂಟ್ರಿ ಲೆವಲ್ ಬೈಕ್ 180 ಸ್ಥಗಿತಗೊಳಿಸಲಾಗುತ್ತಿದೆ.  ನೂತನ ಅವೆಂಜರ್ 160 ಬೈಕ್ ಎಂಜಿನ್ ಹಾಗೂ ಪಲ್ಸಾರ್ 160 ಎಂಜಿನ್‌ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ನೂತನ ಅವೆಂಜರ್ ಬೈಕ್ 160.3 cc ಎಂಜಿನ್ ಹೊಂದಿದ್ದು,  15.5 PS ಪವರ್ ಹಾಗೂ 14.6 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.   ಅವೆಂಜರ್ 180 ಬೈಕ್ 15.5 PS  ಪವರ್ ಹಾಗೂ 13.7 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 

ಇದನ್ನೂ ಓದಿ: ದ್ವಿಚಕ್ರ ವಾಹನದ ಜೊತೆಗೆ ಹೆಲ್ಮೆಟ್ ಖರೀದಿ ಕಡ್ಡಾಯ!

ಬಜಾಜ್ ಅವೆಂಜರ್ 180 ಬೈಕ್ ಬೆಲೆ 88,077 (ಏಕ್ಸ್ ಶೋ ರೂಂ). ಇನ್ನು ಬಿಡುಗಡೆಯಾಗಲಿರುವ ಅವೆಂಜರ್ 160 ಬೈಕ್ ಬೆಲೆ ಹಾಗೂ ಮೈಲೇಜ್ ಇನ್ನೂ ಬಹಿರಂಗವಾಗಿಲ್ಲ. ನೂತನ ಬೈಕ್ ABS ಹಾಗೂ BS-VI ಎಮಿಶನ್ ಹೊಂದಿದೆ.