ಚೆನ್ನೈ(ಏ.17): ಬೈಕ್, ಸ್ಕೂಟರ್ ಸವಾರ ಹಾಗೂ ಹಿಂಬದಿ ಸವಾರರ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಇಷ್ಟಾದರೂ ಹಲವು ದ್ವಿಚಕ್ರ  ವಾಹನ ಸವಾರರ ಬಳಿ ಹೆಲ್ಮೆಟ್ ಮಾತ್ರ ಇಲ್ಲ. ಹೆಲ್ಮೆಟ್ ಇಲ್ಲದೆ ಅಘಾತದಲ್ಲಿ ಸಾವನ್ನುಪ್ಪುತ್ತಿರುವ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ಬೈಕ್ ಅಥವಾ ಸ್ಕೂಟರ್ ಖರೀದಿ ವೇಳೆ  ಹೆಲ್ಮೆಟ್ ಖರೀದಿಸುವುದು ಇದೀಗ ಕಡ್ಡಾಯವಾಗಿದೆ.

ಇದನ್ನೂ ಓದಿ: ಬೈಕ್, ಪೆಟ್ರೋಲ್ ನಂದು, ಬಿದ್ರೆ ಸಾಯೋದು ನಾನು- ಹಿಡಿಯೋಕೆ ನೀವ್ಯಾರು?

ಈ ನಿಯಮ ಜಾರಿ ಮಾಡಿರುವುದು ತಮಿಳುನಾಡು ಸರ್ಕಾರ. ತಮಿಳುನಾಡಿನಲ್ಲಿ ದ್ವಿಚಕ್ರ ವಾಹನ ಖರೀದಿಸುವವರು ಹೆಲ್ಮೆಟ್ ಕಡ್ಡಾಯವಾಗಿ ಖರೀದಿಸಲೇಬೇಕು. ಬೈಕ್ ಶೋ ರೂಂಗಳಲ್ಲಿ ಹೆಲ್ಮೆಟ್ ಖರೀದಿಗೆ ಸಿಗಲಿದೆ.  ಬೈಕ್ ಶೋ ರೂಂ ಮಾಲೀಕರು ಪ್ರತಿ ತಿಂಗಳು, ಬೈಕ್ ಮಾರಾಟ ಹಾಗೂ ಹೆಲ್ಮೆಟ್ ಮಾರಾಟದ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕಿದೆ.

ಇದನ್ನೂ ಓದಿ: ನಡು ರಸ್ತೆಯಲ್ಲಿ ಮಹಿಳೆ ಹೆಲ್ಮೆಟ್ ಪುಡಿ ಮಾಡಿ ಸರ್ಪ್ರೈಸ್ ನೀಡಿದ ಪೊಲೀಸ್!

BIS ಸ್ಟಾಂಡರ್ಡ್ ಹೆಲ್ಮೆಟ್ ಮಾತ್ರ ಬಳಕೆ ಮಾಡಬೇಕು. ಹೀಗಾಗಿ ಸದ್ಯ ಬೈಕ್ ಖರೀದಿಸುವಾಗ ಹೆಲ್ಮೆಟ್ ಕೂಡ ಖರೀದಿಸಲೇಬೇಕು. ಇನ್ನು ನಿಮ್ಮಲ್ಲಿ ಹಳೇ ಹೆಲ್ಮೆಟ್ ಇದೆ, ಹೆಚ್ಚುವರಿ ಹೆಲ್ಮೆಟ್ ಇದೆ ಅನ್ನೋ ವಾದಗಳು ಒಪ್ಪುವುದಿಲ್ಲ. ಹೊಸ ಬೈಕ್, ಹೊಸ ಹೆಲ್ಮೆಟ್ ಕಡ್ಡಾಯವಾಗಿದೆ. ತಮಿಳುನಾಡು ಸರ್ಕಾರದ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.