ಅಚ್ಚರಿ ಬೆಲೆಗೆ ಹೀರೋ XPulse 200, ಹೀರೋ XPulse 200T ಬೈಕ್ ಬಿಡುಗಡೆ!

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ ಇದೀಗ ಹೀರೋ ಅಡ್ವೆಂಚರ್ ಬೈಕ್ ಬಿಡುಗಡೆಯಾಗಿದೆ. ಹೀರೋ XPulse 200, ಹೀರೋ XPulse 200T ನೂತನ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಈ ಬೈಕ್ ವಿಶೇಷತೆ, ಬೆಲೆ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

Hero XPulse 200 and XPulse 200T adventure bike launched in India

ನವದೆಹಲಿ(ಮೇ.01): ಅಡ್ವೆಂಚರ್ ಬೈಕ್ ಬೆಲೆ ಕನಿಷ್ಠ 2 ಲಕ್ಷ ರೂಪಾಯಿ. ಆದರೆ ಇದೀಗ ಹೀರೋ ಮೋಟಾರ್ ಕಾರ್ಪ್ ಕಡಿಮೆ ಬೆಲೆಗೆ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಿದೆ. ಹೀರೋ ಮೋಟಾರ್ ಇದೀಗ  XPulse 200, ಹೀರೋ XPulse 200T ಬೈಕ್ ಬಿಡುಗಡೆ ಮಾಡಿದೆ. ಬಹುನಿರೀಕ್ಷಿತ ಅಡ್ವೆಂಚರ್ ಬೈಕ್ ಇದೀಗ ಭಾರತದ ಮಾರುಕಟ್ಟೆ ಪ್ರವೇಶಿಸಿದೆ.

 

 

ಇದನ್ನೂ ಓದಿ: 125 ಬೈಕ್ ಯಶಸ್ಸಿನ ಬಳಿಕ KTM ಡ್ಯೂಕ್ RC 125 ಶೀಘ್ರದಲ್ಲಿ ಬಿಡುಗಡೆ!

ಹೀರೋ XPulse 200 ADV ಬೆಲೆ 97,000 ರೂಪಾಯಿ(ಎಕ್ಸ್ ಶೋ ರೂಂ), ಇನ್ನು ಫ್ಯುಯೆಲ್ ಇಂಜೆಕ್ಟ್ ಮಾಡೆಲ್ ಬೆಲೆ 1.05 ಲಕ್ಷ ರೂಪಾಯಿ(ಏಕ್ಸ್ ಶೋ ರೂಂ), ಹೀರೋ XPulse 200T ಬೈಕ್ ಬೆಲೆ 94,000 ರೂಪಾಯಿ(ಏಕ್ಸ್ ಶೋ ರೂಂ). ಭಾರತದಲ್ಲಿ ಲಭ್ಯವಿರುವ  ಕಡಿಮೆ ಬೆಲೆ ಅಡ್ವೆಂಚರ್ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

 

 

ಇದನ್ನೂ ಓದಿ: ಹೊಸ ಅವತಾರದಲ್ಲಿ ಯಮಹಾ R15 V3 ಬೈಕ್!

200 cc ಸಿಂಗಲ್ ಸಿಲಿಂಡರ್,2 -ವೇಲ್ವ್, ಏರ್‌ಕೂಲ್ಡ್ ಎಂಜಿನ್ ಹೊಂದಿದ್ದ, 18.4 bhp ಪವರ್ ಹಾಗೂ 17.1 ಪೀಕ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ.  XPulse 200 ಬೈಕ್‌ನಲ್ಲಿ ಫ್ಯೂಯೆಲ್ ಇಂಜೆಕ್ಟ್ ಮಾಡೆಲ್ ಕೂಡ ಲಭ್ಯವಿದೆ. 5 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. ಅಡ್ವೆಂಚರ್ ಬೈಕ್ ಆಗಿರೋದರಿಂದ 37 mm ಟಲಿಸ್ಕೋಪಿಕ್ ಫೋರ್ಕ್ಸ್, ಸಿಂಗಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ. 

 

 

ಇದನ್ನೂ ಓದಿ: ಹೊಂಡಾ CBR650R ಸ್ಪೋರ್ಟ್ ಬೈಕ್ ಬಿಡುಗಡೆ!

ನೂತನ ಹೀರೋ XPulse 200 ಬೈಕ್ ನೇರವಾಗಿ  ಪ್ರತಿಸ್ಪರ್ಧಿ ಯಾವುದು ಇಲ್ಲ. ಇನ್ನು ಹೆಚ್ಚಿನ ಎಂಜಿನ್ ಸಿಸಿ ಹೊಂದಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಬೈಕ್ ಮಾರುಕಟ್ಟೆಯಲ್ಲಿದೆ. ಹಿಮಾಲಯನ್ ಬೈಕ್‌ಗಿಂತ ಹೀರೋ  XPulse 200 ಹಾಗೂ 200T ಅಡ್ವೆಂಚರ್ ಬೈಕ್ ಬೆಲೆಯಲ್ಲಿ 60,000 ರೂಪಾಯಿ ವ್ಯತ್ಯಾಸವಿದೆ.

Latest Videos
Follow Us:
Download App:
  • android
  • ios