Asianet Suvarna News Asianet Suvarna News

ಕಡಿಮೆ ಬೆಲೆಗೆ ಬಂತು ಹೀರೋ ಪ್ಲೆಶರ್ ಪ್ಲಸ್ 110 ಸ್ಕೂಟರ್!

ಹೀರೋ ಮೋಟಾರ್ ಕಾರ್ಪ್ ಬಿಡುಗಡೆ ಮಾಡಿರುವ ಪ್ಲೆಶರ್ 110 ಸ್ಕೂಟರ್ ಹಲವು ವಿಶೇಷತೆಗಳನ್ನೊಳಗೊಂಡಿದೆ. ಕಡಿಮೆ ಬೆಲೆ, 110 ಸಿಸಿ ಎಂಜಿನ್‌ನಲ್ಲಿ ನೂತನ ಸ್ಕೂಟರ್ ಬಿಡುಗಡೆಯಾಗಿದೆ. ಇಲ್ಲಿದೆ ಹೆಚ್ಚಿನ ವಿವರ.
 

Hero motor corp launched pleasure pulse scooter
Author
Bengaluru, First Published May 13, 2019, 3:32 PM IST

ನವದೆಹಲಿ(ಮೇ.13): ಹೀರೋ ಮೋಟಾರ್ ಕಾರ್ಪ್ ಜೊತೆ ಜೊತೆಯಾಗಿ ಎರಡು ಸ್ಕೂಟರ್ ಬಿಡುಗಡೆ ಮಾಡಿದೆ. ಹೀರೋ ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್ ಜೊತೆಗೆ ಹೀರೋ ಪ್ಲೆಶರ್ ಪ್ಲಸ್ ಬಿಡುಗಡೆಯಾಗಿದೆ. ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್ ಕುರಿತು ಸುವರ್ಣ ನ್ಯೂಸ್.ಕಾಂ ಈಗಾಗಲೇ ಸಂಪೂರ್ಣ ವಿವರ ನೀಡಿದೆ. ಮಾರುಕಟ್ಟೆ ಪ್ರವೇಶಿಸಿರು ಪ್ಲೆಶರ್ ಪ್ಲಸ್ ಸ್ಕೂಟರ್ ಕಡಿಮೆ ಬೆಲೆ 110 ಸಿಸಿ ಸ್ಕೂಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಭಾರತದ ಟಾರ್ಕ್ T6X ಎಲೆಕ್ಟ್ರಿಕ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ!

ನೂತನ ಹೀರೋ ಪ್ಲೆಶರ್ ಪ್ಲಸ್ 110 ಸ್ಕೂಟರ್ ಬೆಲೆ 47,300 ರೂಪಾಯಿ(ಎಕ್ಸ್ ಶೋ ರೂಂ)ಆರಂಭವಾಗಲಿದ್ದು ಗರಿಷ್ಠ ಬೆಲೆ ₹ 49,300(ಎಕ್ಸ್ ಶೋ ರೂಂ).  110 cc ಸಿಂಗಲ್-ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿದ್ದು,   8 bhp ಪವರ್ ಹಾಗೂ 8.7 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  

ಇದನ್ನೂ ಓದಿ: ಬರುತ್ತಿದೆ TVS ಕ್ರಿಯಾನ್ ಎಲೆಕ್ಟ್ರಿಕ್ ಸ್ಕೂಟರ್ - 80KM ಮೈಲೇಜ್ ರೇಂಜ್!

ಫ್ರಂಟ್ 130mm ಡ್ರಂ ಬ್ರೇಕ್ ಹಾಗೂ IBS(ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್) ಬ್ರೇಕಿಂಗ್ ಸಿಸ್ಟಮ್ ಹೊಂದಿದೆ. ಹೀರೊ ಪ್ಲೆಶರ್ ಪ್ಲಸ್ ಸ್ಕೂಟರ್, ಹೊಂಡಾ ಆಕ್ಟೀವಾ ಐ, ಟಿವಿಎಸ್ ಸ್ಕೂಟಿ ಜೆಸ್ಟ್ ಸ್ಕೂಟರ್‌ಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾಗಿದೆ. 

Follow Us:
Download App:
  • android
  • ios