Asianet Suvarna News Asianet Suvarna News

ಆಕರ್ಷಕ ಬೆಲೆಯಲಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ ಬ್ಲಾಕ್ ಎಡಿಶನ್ ಬಿಡುಗಡೆ!

ನವರಾತ್ರಿ ಹಬ್ಬದ ಪ್ರಯುಕ್ತ ಹೀರೋ ಮೋಟೊಕಾರ್ಪ್ ಇದೀಗ ಅತ್ಯಧಿಕ ಮಾರಾಟವಾಗಿರುವ ಹೀರೋ ಸ್ಪ್ಲೆಂಡರ್ ಬೈಕ್ ಬ್ಲಾಕ್ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ. ಆಕರ್ಷಕ ಬೆಲೆ, ಅತ್ಯಾಕರ್ಷಕ ಬ್ಲಾಕ್ ಎಡಿಶನ್ ಬೈಕ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Hero motocorp launch splendor plus black and accent in this festival season ckm
Author
Bengaluru, First Published Oct 19, 2020, 6:04 PM IST

ನವದಹೆಲಿ(ಅ.19); ಭಾರತದ ಅತೀ ದೊಡ್ಡ ಮೋಟಾರ್‌ಸೈಕಲ್ ಹೀರೋ ಇದೀಗ ಹಬ್ಬದ ಪ್ರಯುಕ್ತ ಬ್ಲಾಕ್ ಎಡಿಶನ್ ಹೀರೋ ಸ್ಪ್ಲೆಂಡರ್ ಬೈಕ್ ಬಿಡುಗಡೆ ಮಾಡಿದೆ ನೂನತ ಬ್ಲಾಕ್ ಎಡಿಶನ್ ಬೈಕ್ ಬೆಲೆ 64,470 ರೂಪಾಯಿ(ಎಕ್ಸ್ ಶೋ ರೂಂ). 

ಹೀರೋ ಮೋಟೋಕಾರ್ಪ್‌ನಿಂದ ಹೊಸ ಸೇವೆ; ಗ್ರಹಾಕರಿಗೆ 24x7 ರಸ್ತೆ ಬದಿ ನೆರವು!.

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ವೇರಿಯೆಂಟ್ ಹಾಗೂ ಬೆಲೆ
ಕಿಕ್ ಸ್ಟಾರ್ಟ್ ಬೆಲೆ 60,960 ರೂಪಾಯಿ
ಸೆಲ್ಫ್ ಸ್ಟಾರ್ಟ್ ಬೆಲೆ 63,260 ರೂಪಾಯಿ
ಸೆಲ್ಫ್ ಸ್ಟಾರ್ಟ್ i3s ಬೆಲೆ 64,470 ರೂಪಾಯಿ
ಬ್ಲಾಕ್ ಎಡಿಶನ್ ಬೆಲೆ 64,470 ರೂಪಾಯಿ

ಹಚ್ಚುವರಿ ಗ್ರಾಫಿಕ್ ಥೀಮ್‌ಗೆ 899 ರೂಪಾಯಿ ಹಾಗೂ 3ಡಿ ಹೀರೋ ಲೋಗೋಗಾಗಿ 1,399 ರೂಪಾಯಿ ಎಕ್ಸಸರಿ ದರ ನಿಗದಿ ಪಡಿಸಲಾಗಿದೆ. 3ಡಿ ಲೋಗೋ ಹಾಗೂ ಗ್ರಾಫಿಕ್ ಥೀಮ್ ಗ್ರಾಹಕರ ಇಚ್ಚಿಸಿದ್ದಲ್ಲಿ ಹಾಕಿಸಿಕೊಳ್ಳಬಹುದು.

ಆತ್ಯಾಕರ್ಷಕ ಮೇಸ್ಟ್ರೋ ಎಡ್ಜ್ 125 ಸ್ಟೆಲ್ತ್ ಎಡಿಶನ್ ಸ್ಕೂಟರ್ ಬಿಡುಗಡೆ!

ನೂತನ ಬೈಕ್ 97.2 cc ಎರ್ ಕೂಲ್ಡ್ ಎಂಜಿನ್ ಹೊಂದಿದೆ.  4 ಸ್ಪೀಡ್ ಗೇರ್ ಬಾಕ್ಸ್,  7.9 hp ಪವರ್ ಹಾಗೂ 8.05 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಬ್ಲಾಕ್ ಎಡಿಶನ್ ಬೈಕ್ 8 ಇಂಚಿನ ಬ್ಲಾಕ್ ಅಲೋಯ್ ವೀಲ್ ಹೊಂದಿದೆ. ಇನ್ನು ಟ್ಯುಬ್ಲೆಸ್ ಟೈಯರ್ ಹಾಗೂ 130 mm ಡ್ರಂ ಬ್ರೇಕ್ ಹೊಂದಿದೆ.

Follow Us:
Download App:
  • android
  • ios