Asianet Suvarna News Asianet Suvarna News

ಹೀರೋ ಮೋಟೋಕಾರ್ಪ್‌ನಿಂದ ಹೊಸ ಸೇವೆ; ಗ್ರಹಾಕರಿಗೆ 24x7 ರಸ್ತೆ ಬದಿ ನೆರವು!

ಹೀರೋ ಮೋಟೋಕಾರ್ಪ್‌ನಿಂದ ಗ್ರಾಹಕರಿಗೆ ಮತ್ತೊಂದು ಸೇವೆ ನೀಡುತ್ತಿದೆ. ಕಾರು ಸೇರಿಂತೆ ಇತರ ವಾಹನಗಳಿಲ್ಲಿರುವಂತೆ ಇದೀಗ ದ್ವಿಚಕ್ರವಾಹನಕ್ಕೂ ರೋಡ್ ಸೈಡ್ ಅಸಿಸ್ಟೆಂಟ್ ಸೇವೆ ನೀಡುತ್ತಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಅಪರಿಮಿತ ಸೇವೆ ನೀಡುತ್ತಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.

Hero MotoCorp introduce convenience service for customers Roadside Assistance Program ckm
Author
Bengaluru, First Published Oct 9, 2020, 8:14 PM IST

ಬೆಂಗಳೂರು(ಅ.09):  ತನ್ನ ಉತ್ಕೃಷ್ಟ ಗ್ರಾಹಕ ಕೇಂದ್ರಿತ ನೀತಿಗೆ ಅನುಗುಣವಾಗಿ, ಮೋಟರ್‌ಸೈಕಲಲ್ ಹಾಗೂ ಸ್ಕೂಟರ್‌ಗಳ ವಿಶ್ವದ ಅತಿದೊಡ್ಡ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್, ತನ್ನ ಬಹುಮೂಲ್ಯ ಗ್ರಾಹಕರಿಗಾಗಿ 24x7 ರಸ್ತೆ ಬದಿ ನೆರವು ಕಾರ್ಯಕ್ರಮ ಆರಂಭಿಸಿದೆ.

ಆತ್ಯಾಕರ್ಷಕ ಮೇಸ್ಟ್ರೋ ಎಡ್ಜ್ 125 ಸ್ಟೆಲ್ತ್ ಎಡಿಶನ್ ಸ್ಕೂಟರ್ ಬಿಡುಗಡೆ

ತನ್ನ ಉತ್ಪನ್ನಗಳು ಹಾಗೂ ಸೇವೆಗಳ ಮೂಲಕ ಹೀರೋ ಮೋಟೋಕಾರ್ಪ್, ತನ್ನ ಗ್ರಾಹಕರಿಗೆ ಉತ್ಕೃಷ್ಟವಾದ ಮೌಲ್ಯ ಒದಗಿಸುವಲ್ಲಿ ನಿರಂತರ ತೊಡಗಿಕೊಂಡಿದೆ. ಸಂಸ್ಥೆಯ ಇತ್ತೀಚಿನ ಅನುಕೂಲಕರ ಸೇವೆ ಮೂಲಕ ಈಗ ಗ್ರಾಹಕರು ದೇಶದಾದ್ಯಂತ ಯಾವುದೇ ಚಿಂತೆಗಳಿಲ್ಲದೆ ಸವಾರಿ ಮಾಡಬಹುದು.

RSA(ರೋಡ್ ಸೈನ್ ಅಸಿಸ್ಟೆಂಟ್) ಕಾರ್ಯಕ್ರಮವು ಭಾರತದ ಎಲ್ಲಾ ಕಡೆಗಳಲ್ಲಿ ಗ್ರಾಹಕರಿಗೆ 24x7 ನೆರವು ಒದಗಿಸುತ್ತದೆ. ಟೋಲ್ ಫ್ರೀ ನಂಬರ್ ಮೂಲಕ ಗ್ರಾಹಕರು RSA ಸಂಪರ್ಕಿಸಬಹುದು. RSA ಕಾರ್ಯಕ್ರಮದಿಂದ ಗ್ರಾಹಕರಿಗೆ ಈ ಕೆಳಗಿನ ಅನುಕೂಲಗಳು ಲಭ್ಯವಾಗುತ್ತದೆ:

 • ·        ಸ್ಥಳದಲ್ಲೇ ದುರಸ್ತಿ
 • ·        ಸಮೀಪದ ಹೀರೊ ಕಾರ್ಯಾಗಾರಕ್ಕೆ ಟೋ ಮಾಡುವುದು
 •         ಇಂಧನ ಮುಗಿದುಹೋದರೆ ಇಂಧನ ಸರಬರಾಜು
 • ·        ಗಾಲಿ ಕೆಟ್ಟಿದ್ದರೆ ದುರಸ್ತಿ
 • ·        ಬ್ಯಾಟರಿ ಜಂಪ್ ಸ್ಟಾರ್ಟ್
 • ·        ಅಪಘಾತವಾದರೆ ನೆರವು(ಕೋರಿಕೆ ಮೇರೆಗೆ)
 • ·        ಕೀಲಿ ಪಡೆಯುವ ಬೆಂಬಲ

ಆಕರ್ಷಕವಾದ ಆರಂಭಿಕ  ರೂ. 350/- ವಾರ್ಷಿಕ ಚಂದಾದಾರ ಪಡೆದುಕೊಳ್ಳುವ ಮೂಲಕ, ಸಮೀಪದ ಹೀರೊ ಮೋಟೋಕಾರ್ಪ್ ಅಧಿಕೃತ ವಾಹಿನಿ ಪಾಲುದಾರರ ಮೂಲಕ ಗ್ರಾಹಕರು RSA ಯೋಜನೆ ಸೇವೆ ಪಡೆಯಬಹುದು.

RSA ಸೇವೆ ಜೊತೆ ಹೀರೋಮೋಟೋಕಾರ್ಪ್ ತನ್ನ ಗ್ರಾಹಕರಿಗಾಗಿ ಹೀರೊ ಮೋಟೋಕಾರ್ಪ್ ದೇಶದಾದ್ಯಂತ ಬೃಹತ್ ಸೇವಾ ಉತ್ಸವವನ್ನು ಸಹ ಆಯೋಜಿಸಿದೆ. ಅಕ್ಟೋಬರ್ 10, 2020 ರವರೆಗೆ ದೇಶಾದ್ಯಂತ 6000+ ಸ್ಥಳಗಳಲ್ಲಿ ಅಧಿಕೃತ ಹೀರೊ ಗ್ರಾಹಕ ಸಂಪರ್ಕ ಪಾಯಿಂಟ್‍ಗಳಲ್ಲಿ ಈ ಉಪಕ್ರಮವನ್ನು ಆಯೋಜಿಸಲಾಗಿದೆ.

ಉತ್ಸವದ ಭಾಗವಾಗಿ ಗ್ರಾಹಕರಿಗೆ ಈ ಕೆಳಗಿನ ಅನುಕೂಲಗಳು ಸಿಗಲಿದೆ:

 • ·        ಸರ್ವಿಸ್ ಲೇಬರ್ ಶುಲ್ಕಗಳ ಮೇಲೆ ರಿಯಾಯಿತಿ
 • ·        ಉಚಿತ ವಾಷಿಂಗ್/ಪಾಲಿಷಿಂಗ್/ನೈಟ್ರೊಜನ್ ಭರ್ತಿ
 • ·        ವಾರ್ಷಿಕ ನಿರ್ವಹಣೆ ಒಪ್ಪಂದ ಪ್ಯಾಕೇಜ್(ಜಾಯ್ ರೈಡ್)
 • ·        ಹೊಸ ವಾಹನ ಖರೀದಿಸಿದರೆ ರೂ. 3000 ವರೆಗೆ ಆಕರ್ಷಕ ವಿನಿಮಯ ಕೊಡುಗೆ
 • ·        ಗುಡ್ ಲೈಫ್ ಗ್ರಾಹಕರಿಗೆ ಹೆಚ್ಚುವರಿ ಪಾಯಿಂಟ್‍ಗಳು

ಗ್ರಾಹಕರಿಗೆ ಹರ್ಷ ತರುವ ಅನುಭವ ಒದಗಿಸಬೇಕೆನ್ನುವ ಹೀರೊ ಮೋಟೋಕಾರ್ಪ್‍ನ ಬದ್ಧತೆಗೆ ಈ ಉತ್ಸವ ಉದಾಹರಣೆಯಾಗಿದೆ. ಉತ್ಸವದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಗ್ರಾಹಕರು ತಮ್ಮ ಸಮೀಪದ ಹೀರೊ ಅಧಿಕೃತ ಡೀಲರ್ ಸಂಪರ್ಕಿಸಬಹುದು.

Follow Us:
Download App:
 • android
 • ios