ಬೆಂಗಳೂರು(ಅ.12): ವಿಶ್ವದ ಅತೀ ದೊಡ್ಡ ಮೋಟಾರ್ ಸೈಕಲ್ ಹಾಗೂ ಸ್ಕೂಟರ್ ಉತ್ಪಾದಕ ಕಂಪನಿ ಹೀರೋ ಮೋಟೊಕಾರ್ಪ್ ಇದೀಗ ಹೊಚ್ಚ ಹೊಸ ಗ್ಲಾಮರ್ ಬೈಕ್ ಸ್ಪೆಷಲ್ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ. ಹೊಚ್ಚ ಹೊಸ ಗ್ಲಾಮರ್ ಬ್ಲೇಜ್ 125ಸಿಸಿ ಬೈಕ್ ಆಗಿದ್ದು,  ಆಕರ್ಷಕ ವಿನ್ಯಾಸ ಹೊಂದಿದೆ.

ಹೀರೋ ಮೋಟೋಕಾರ್ಪ್‌ನಿಂದ ಹೊಸ ಸೇವೆ; ಗ್ರಹಾಕರಿಗೆ 24x7 ರಸ್ತೆ ಬದಿ ನೆರವು!

ಗ್ಲಾಮರ್ ಬ್ರ್ಯಾಂಡ್‌ಗೆ ಅನುಗುಣವಾಗಿ  ಹೊಸ ಮೋಟಾರ್ ಸೈಕಲ್ ನಿರ್ಮಾಣ ಮಾಡಲಾಗಿದೆ.  ಸಾಮರ್ಥ್ಯ, ಆರಾಮ ಮತ್ತು ಶೈಲಿಯಲ್ಲಿ ಹೊಸತನ ಹಾಗೂ ಹೊಸ ಮ್ಯಾಟ್ ವರ್ನಿಯರ್ ಗ್ರೇ ಬಣ್ಣದಲ್ಲಿ ಲಭ್ಯವಿದೆ.  ಗ್ಲಾಮರ್ ಬ್ಲೇಜ್ ದೇಶಾದ್ಯಂತ ಹೀರೊ ಮೊಟೊಕಾರ್ಪ್ ಶೋರೂಂ ನಲ್ಲಿ ರೂ. 72,200/-* ಗಳ ಆಕರ್ಷಕ ದರದಲ್ಲಿ ಲಭ್ಯವಿದೆ.(ಎಕ್ಸ್ ಶೋರೂಂ)

ಆತ್ಯಾಕರ್ಷಕ ಮೇಸ್ಟ್ರೋ ಎಡ್ಜ್ 125 ಸ್ಟೆಲ್ತ್ ಎಡಿಶನ್ ಸ್ಕೂಟರ್ ಬಿಡುಗಡೆ!.

ದೇಶದಲ್ಲಿ ಗ್ಲಾಮರ್ ಅತ್ಯಂತ ಜನಪ್ರಿಯ ಬ್ರ್ಯಾಂಡ್ ಆಗಿದೆ, ಮತ್ತು ಶೈಲಿ ಮತ್ತು ದಕ್ಷತೆಯ ಪ್ರತೀಕವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಹೊಸ ಗ್ಲಾಮರ್ ಗೆ ಜನರ ಪ್ರತಿಕ್ರಿಯೆಯು ಸಕಾರಾತ್ಮಕವಾಗಿದ್ದು, ಈಗ ಬ್ಲೇಜ್ ಆವೃತ್ತಿಯಲ್ಲಿ ಈ ಬ್ರ್ಯಾಂಡ್ ದೇಶದ ಯುವಜನತೆಯೊಂದಿಗೆ ಅನುರಣಿಸುತ್ತದೆ ಎಂದು ಹೀರೋ ಮೋಟೊಕಾರ್ಪ್ ಮಾರಾಟ ಮತ್ತು ಸೇವೆ ಮುಖ್ಯಸ್ಥ ನವೀನ್ ಚೌಹಾನ್ ಹೇಳಿದರು. 
 
ಮುಂಬರುವ ಹಬ್ಬದ ಸಮಯಕ್ಕೆ ಹೊಸ ಉತ್ಪನ್ನಗಳನ್ನು ಪಟ್ಟಿಯೊಂದಿಗೆ ನಾವು ಸಜ್ಜಾಗಿದ್ದೇವೆ. ಹೊಸ ಗ್ಲಾಮರ್ ಬ್ಲೇಜ್ ಬಹಳ ಶಕ್ತಿಶಾಲಿ ಉತ್ಪನ್ನವಾಗಿದ್ದು, ಯುವ ಸವಾರರನ್ನು ಆಕರ್ಷಿಸಲಿದೆ ಎಂದು ಹೀರೋ ಮೋಟೊಕಾರ್ಪ್ ತಾಂತ್ರಿಕ ಮುಖ್ಯಸ್ಥ ಮಾಲೊ ಲೆ ಮಾಸ್ಸನ್ ಹೇಳಿದರು. 

ಎಂಜಿನ್
ಹೊಸ ಗ್ಲಾಮರ್ ಬ್ಲೇಜ್ 125 ಸಿಸಿ, BS6 ಎಂಜಿನ್ ಹೊಂದಿದ್ದು, 10.7 bhp ಪವರ್ ಹಾಗೂ 10.6nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ಹೀರೊದ ಕ್ರಾಂತಿಕಾರಿ i3s (ಐಡಲ್ ಸ್ಟಾರ್ಟ್ ಸ್ಟಾಪ್ ವ್ಯವಸ್ಥೆ) ಹೊಂದಿದೆ. ಜೊತೆಗೆ ಆಟೊ ಸೈಲ್ ತಂತ್ರಜ್ಞಾನದ ಗ್ಲಾಮರ್ ಬ್ಲೇಜ್  ದಕ್ಷತೆ ಮತ್ತು ಆರಾಮವನ್ನು ನೀಡುತ್ತದೆ.

ಬೈಕ್ ಹ್ಯಾಂಡಲ್ ನಲ್ಲಿ USB ಚಾರ್ಜರ್ ಫೀಚರ್ಸ್ ನೀಡಲಾಗಿದೆ. ಇನ್ನು ಸೈಡ್ ಸ್ಟಾಂಡ್ ಸಿಗ್ನಲ್,  140MM ಡಿಸ್ಕ್ ಬ್ರೇಕ್ ಮತ್ತು 180mm ಗ್ರೌಂಡ್ ಕ್ಲೀಯರೆನ್ಸ್ ಹೊಂದಿದೆ.