60 ಲಕ್ಷದ ಬೈಕ್‌ಗೆ 42 ಲಕ್ಷ ರೂ ದಂಡ; ವಾಹನಕ್ಕಾಗಿ 14 ತಿಂಗಳು ಕಾನೂನು ಹೋರಾಟ!
ವಿಶ್ವದ ಅತ್ಯಂತ ದುಬಾರಿ ಬೈಕ್ ಅನ್ನೋ ಹೆಗ್ಗಳಿಕೆಗೆ ಹೊಂಡಾ ಗೋಲ್ಡ್ ವಿಂಗ್ ಪಾತ್ರವಾಗಿದೆ. ಭಾರತಕ್ಕೆ ಆಮದು ಮಾಡಿಕೊಳ್ಳುವಾಗ ಇದರ ಬೆಲೆ ಬರೋಬ್ಬರಿ 60 ಲಕ್ಷ ರೂಪಾಯಿ. ದುಬೈನಲ್ಲಿ ಉದ್ಯಮಿಯಾಗಿರುವ ಭಾರತದ ಬಾಬು ಜಾನ್ ಈ ಬೈಕ್ ಖರೀದಿಸಿದ್ದಾರೆ. ಆದರೆ ಭಾರತಕ್ಕೆ ಬಂದಾಗ ಕಸ್ಟಮ್ ಅಧಿಕಾರಿಗಳು ಬೈಕ್ ಹಿಡಿದಿಟ್ಟು 42 ಲಕ್ಷ ರೂಪಾಯಿ ಕಟ್ಟಲು ಸೂಚಿಸಿದ್ದಾರೆ. ಇದಕ್ಕಾಗಿ ಮಾಲೀಕ 14 ತಿಂಗಳು ಕಾನೂನು ಹೋರಾಟ ನಡೆಸಿದ ರೋಚಕ ವಿವರ ಇಲ್ಲಿದೆ.
ಹೊಂಡಾ ಗೋಲ್ಡ್ ವಿಂಗ್ ಟ್ರೈಕರ್ ಬೈಕ್ ಆಮದು ಮಾಡಿದ ಕೇರಳದ ಬಾಬು ಜಾನ್
ದುಬೈನಲ್ಲಿ ಉದ್ಯಮಿಯಾಗಿರುವ ಬಾಬು ಜಾನ್ 60 ಲಕ್ಷ ರೂಪಾಯಿ ಬೈಕ್ ಖರೀದಿಸಿದ ಭಾರತದ ಮೊದಲಿಗ
FM ರೇಡಿಯೋ, ಮ್ಯೂಸಿಕ್, ಕ್ರ್ಯೂಸ್ ಕಂಟ್ರೋಲ್, ಲಗೇಜ್ ಇಡಲು ಡಿಕ್ಕಿ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಈ ಬೈಕ್‌ನಲ್ಲಿವೆ
ಇಲ್ಲ ಸಲ್ಲದ ಕಾರಣ ನೀಡಿ ಆಮದು ಮಾಡಿದ ದುಬಾರಿ ಬೈಕ್‌ಗೆ ಹಿಡಿದಿಟ್ಟ ಕಸ್ಟಮ್ಸ್ ಅಧಿಕಾರಿಗಳು
42 ಲಕ್ಷ ರೂಪಾಯಿ ಕಸ್ಟಮ್ಸ್ ಡ್ಯೂಟಿ ತೆರಿಗೆ ಪಾವತಿಸಿದರೆ ಬೈಕ್ ಬಿಡುಗಡೆ ಮಾಡುವುದಾಗಿ ಹೇಳಿದ್ದ ಅಧಿಕಾರಿಗಳು
ಬೈಕ್ ಮರಳಿ ಪಡೆಯಲು ಕೋರ್ಟ್ ಮೆಟ್ಟಿಲೇರಿದ ಬಾಬು ಜಾನ್ ನಿರಂತರ 14 ತಿಂಗಳು ಹೋರಾಟ
ಬೈಕ್ ಹಿಡಿಟ್ಟ ಕಸ್ಟಮ್ಸ್ ಅಧಿಕಾರಿಗಳಿಗೆ ಛಾಟಿ ಬೀಸಿದ ಕೋರ್ಟ್, ಬೈಕ್ ಬಿಡುಗಡೆ ಮಾಡುವಂತೆ ಆದೇಶ
14 ತಿಂಗಳು ನಿಲ್ಲಿಸಿದ ಕಾರಣ 60 ಲಕ್ಷದ ಬೈಕ್ ಸಂಪೂರ್ಣ ಹಾಳು; ರಿಪೇರಿ ಮಾಡಲು ದುಬೈನಿಂದ ಮೆಕಾನಿಕ್ ತರಿಸಿದ ಜಾನ್