ಎಲೆಕ್ಟ್ರಿಕ್ ಸ್ಕೂಟರ್‌ಗೆ 12 ಸಾವಿರ, ರಿಕ್ಷಾಗೆ 48 ಸಾವಿರ ಸಬ್ಸಿಡಿ ಘೋಷಿಸಿದ ಸರ್ಕಾರ!
ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಿಸಲು ಕೆಲ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ತೆರಿಗೆ ಕಡಿತ, ಪ್ರೋತ್ಸಾಹಕ ಧನ ಸೇರಿದಂತೆ ಹಲವು ಸ್ಕೀಂ ಜಾರಿಯಲ್ಲಿದೆ. ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ 12 ಸಾವಿರ ರೂಪಾಯಿ ಹಾಗೂ ಎಲೆಕ್ಟ್ರಿಕ್ ರಿಕ್ಷಾ ಖರೀದಿಗೆ 48,000 ಸಬ್ಸಿಡಿ ಘೋಷಿಸಲಾಗಿದೆ.
ಅಹಮ್ಮದಾಬಾದ್(ಸೆ.26): ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಿಸಿ ಮಾಲಿನ್ಯ ಕಡಿಮೆ ಮಾಡಲು ದೆಹಲಿ ಸರ್ಕಾರ ವಿಶೇಷ ಸಬ್ಸಡಿ ಘೋಷಿಸಿದೆ. ಇದರ ಬೆನ್ನಲ್ಲೇ ಇದೀಗ ಗುಜರಾತ್ ಸರ್ಕಾರ ಕೂಡ ಸಬ್ಸಡಿ ಘೋಷಿಸಿದೆ. ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ 12,000 ರೂಪಾಯಿ ಸಬ್ಸಿಡಿ ಸಿಗಲಿದೆ. ಇನ್ನು ಎಲೆಕ್ಟ್ರಿಕ್ ರಿಕ್ಷಾ ಖರೀದಿಸುವ ಗ್ರಾಹಕರಿಗೆ 48,000 ರೂಪಾಯಿ ಸಬ್ಸಡಿ ಘೋಷಿಸಿದೆ.
ಕೇಂದ್ರದಿಂದ ಬಂಪರ್ ಕೊಡುಗೆ; ಭಾರತದಲ್ಲಿ EV ಬ್ಯಾಟರಿ ನಿರ್ಮಾಣಕ್ಕೆ ಯೊಜನೆ!
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಈ ಘೋಷಣೆ ಮಾಡಿದ್ದಾರೆ. ಗುಜರಾತ್ ಸರ್ಕಾರದ ಈ ಯೋಜನೆ 10,000 ಎಲೆಕ್ಟ್ರಿಕ್ ಸ್ಕೂಟರ್ ಹಾಗೂ 5,000 ಇ ರಿಕ್ಷಾಗೆ ಮಾತ್ರ ಸಿಗಲಿದೆ. ಹೀಗಾಗಿ ಮೊದಲು ಖರೀದಿಸುವ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ. ಈ ಮೂಲಕ ಗುಜರಾತ್‌ನಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಿಸಲು ನಿರ್ಧರಿಸಲಾಗಿದೆ.
ನೊವಸ್ ಎಲೆಕ್ಟ್ರಿಕ್ ಬೈಕ್ ಅನಾವರಣ, ಇದು ದುಬಾರಿ EV!
ಇದರ ಜೊತೆಗೆ ಗುಜರಾತ್‌ನಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜ್ ಮಾಡಲು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಯೋಜನೆ ಸಿದ್ದಪಡಿಸಲಾಗಿದೆ. ಇನ್ನು ಗುಜರಾತ್‌ನಲ್ಲಿ ಎಲೆಕ್ಟ್ರಿಕ್ ಬಳೆಕ ಹೆಚ್ಚಿಸಲು ಜಾರಿಗೆ ತರುತ್ತಿರುವ ಸಬ್ಸಡಿ ಸ್ಕೀಂ ಹಾಗೂ ಇತರ ಯೋಜನೆಗಳಿಗೆ 800 ಕೋಟಿ ರೂಪಾಯಿ ಮೀಸಲಿಡಲಾಗಿದೆ. 2022ರ ವೇಳೆಗೆ ಗುಜರಾತ್‌ನಲ್ಲಿ 1,00,000 ಎಲೆಕ್ಟ್ರಿಕ್ ವಾಹನ ಓಡಾಟ ಆರಂಭಿಸುವ ಯೋಜನೆ ಹಾಕಿಕೊಂಡಿದ್ದಾರೆ.
ಗುಜರಾತ್ ಸರ್ಕಾರದ ನಡೆಯನ್ನು ಬೆಂಗಳೂರು ಮೂಲದ ಎದರ್ ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಸೇರಿದಂತೆ ಹಲವು ಎಲೆಕ್ಟ್ರಿಕ್ ವಾಹನ ಕಂಪನಿಗಳು ಸ್ವಾಗತಿಸಿದೆ.