ನವದೆಹಲಿ(ಸೆ.26): ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದಲ್ಲಿ ಭಾರತ ತೀವ್ರಗತಿಯಲ್ಲಿ ಅಭಿವೃದ್ಧಿಹೊಂದುತ್ತಿದೆ. ಭಾರತೀಯ ಕಂಪನಿಗಳ ಜೊತೆಗೆ ವಿದೇಶಿ ಕಂಪನಿಗಳು ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ನಿರ್ಮಾಣ ಮಾಡುತ್ತಿದೆ. ಆದರೆ ಎಲ್ಲಾ ಎಲೆಕ್ಟಿಕ್ ವಾಹನ ತಯಾರಕ ಕಂಪನಿಗಳು ವಾಹನದ ಬ್ಯಾಟರಿಗಾಗಿ ವಿದೇಶಗಳನ್ನು ಅವಲಂಬಿಸಿದೆ. ಇದರಿಂದ ಎಲೆಕ್ಟ್ರಿಕ್ ವಾಹನ ಬೆಲೆ ದುಬಾರಿಯಾಗಿದೆ. ಇದೀಗ ನೀತಿ ಆಯೋಗದ ಯೋಜನೆಯಂತೆ ಕೇಂದ್ರ ಸರ್ಕಾರ ಭಾರತದಲ್ಲಿ ಅತ್ಯಾಧುನಿಕ ಬ್ಯಾಟರಿ ಉತ್ಪಾದನ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ.

ಲೀಸ್ ಮೂಲಕ ಕಾರು; ಟಾಟಾ ನೆಕ್ಸಾನ್ EV ಮೇಲೆ ಭರ್ಜರಿ ಆಫರ್!..

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅತ್ಯಾಧುನಿಕ ಬ್ಯಾಟರಿ ಉತ್ಪಾದನಾ ಕೇಂದ್ರ ನಿರ್ಮಾಣಕ್ಕೆ ಬರೋಬ್ಬರಿ 4.6 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಪ್ರೋತ್ಸಾಹ ಧನ ನೀಡುವುದಾಗಿ ಹೇಳಿದೆ. ಇದರೊಂದಿಗೆ ವಿದೇಶದಿಂದ ಅಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣ ತಗ್ಗಿಸಲು ಸರ್ಕಾರ ಪ್ಲಾನ್ ಮಾಡಿದೆ.

100 ಕಿ.ಮೀ ಮೈಲೇಜ್, ಕಡಿಮೆ ಬೆಲೆ; ಬಿಡುಗಡೆಯಾಗುತ್ತಿದೆ ಆಟಮ್ 1.0 ಎಲೆಕ್ಟ್ರಿಕ್ ಬೈಕ್

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ನೀತಿ ಆಯೋಗ ಈ ಯೋಜನೆ ರೂಪಿಸಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಾದರೆ 2030ರ ವೇಳೆ ಬರೋಬ್ಬರಿ 40 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದಷ್ಟು ಹಣ ಉಳಿತಾಯವಾಗಲಿದೆ. ನೀತಿ ಆಯೋಗ ಈ ಯೋಜನೆಯನ್ನು  ಕ್ಯಾಬಿನೆಟ್ ಚರ್ಚೆ ನಡೆಸಲಿದೆ. 

ಅತ್ಯಾಧುನಿಕ ಬ್ಯಾಟರಿ ಉತ್ಪಾದನಾ ಘಟನಾ ನಿರ್ಮಾಣಕ್ಕೆ ಈ ಯೋಜನೆ ಮೂಲಕ ಖಾಸಗಿ ಕಂಪನಿಗಳು ಪ್ರೋತ್ಸಾಹ ಧನ ಪಡೆಯಬಹುದು. ಈ ಮೂಲಕ ಭಾರತದ ಉತ್ಪನ್ನಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಮುಂದಾಗಿದೆ. 2022ರ ಬಳಿಕ ಆಮದು ಸಂಕ ಹೆಚ್ಚಿಸಲು ಕೇಂದ್ರ ಮುಂದಾಗಿದೆ.