Asianet Suvarna News Asianet Suvarna News

ಲೈಸೆನ್ಸ್, ದಾಖಲೆ ಯಾವುದೂ ಬೇಡ; ಬಿಡುಗಡೆಯಾಗಿದೆ 35,000 ರೂಪಾಯಿ ಬೈಕ್!

ನೂತನ ಇ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಈ ನೂತನ ಬೈಕ್ ಸವಾರಿ ಮಾಡಲು ಲೈಸೆನ್ಸ್ ಬೇಡ, ಹೆಲ್ಮೆಟ್ ಬೇಕಾಗಿಲ್ಲ, ರಿಜಿಸ್ಟ್ರೇಶನ್ ಇಲ್ಲ. ಬೆಲೆ ಕೇವಲ 35,000 ರೂಪಾಯಿ ಮಾತ್ರ.  ದುಬಾರಿ ದಂಡದಿಂದ ಮುಕ್ತರಾಗಲು ಬಯಸವು ಸವಾರರಿಗೆ ಇ ಬೈಕ್ ಉತ್ತಮವಾಗಿದೆ. ನೂತನ ಬೈಕ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. 

GreenVolt Mobility launch mantis e bike in India
Author
Bengaluru, First Published Oct 2, 2019, 6:01 PM IST

ಅಹಮ್ಮದಾಬಾದ್(ಅ.02): ಹೊಸ ಟ್ರಾಫಿಕ್ ನಿಯಮ ಜಾರಿಯಾದ ಮೇಲೆ ಲೈಸೆನ್ಸ್, ಎಮಿಶನ್, ಇನ್ಶೂರೆನ್ಸ್  ಸೇರಿದಂತೆ ವಾಹನದ ದಾಖಲೆ ಪತ್ರ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಪೊಲೀಸರು ಎಲ್ಲಿ ಚಲನ್ ಹಾಕಿ ಬಿಡುತ್ತಾರೋ ಅನ್ನೋ ಭಯ ಇದ್ದೇ ಇದೆ. ಕಾರಣ ದುಬಾರಿ ದಂಡಕ್ಕಿಂತ ನಿಯಮ ಪಾಲನೆಯೇ ಲೇಸು ಅನ್ನೋ ವಾತಾವರಣ ನಿರ್ಮಾಣವಾಗುತ್ತಿದೆ. ಇದೀಗ ಲೈಸೆನ್ಸ್ ಬೇಡ, ಹೆಲ್ಮೆಟ್ ಕಡ್ಡಾಯವಲ್ಲ ಜೊತೆಗೆ ಯಾವುದೇ ದಾಖಲೆ ಪತ್ರ ಇಲ್ಲದೆ ಸವಾರಿ ಮಾಡಬಲ್ಲ ಇ ಬೈಕ್ ಬಿಡುಗಡೆಯಾಗಿದೆ. 

ಇದನ್ನೂ ಓದಿ: ವಾಹನ ಮಾರಾಟ ಚೇತರಿಕೆಗೆ 50% ರೋಡ್ ಟ್ಯಾಕ್ಸ್ ಕಡಿತ; ದಿಟ್ಟ ಹೆಜ್ಜೆ ಇಟ್ಟ ಸರ್ಕಾರ!

ಅಹಮ್ಮದಾಬಾದ್ ಮೂಲಕ ಗ್ರೀನ್ ವೋಲ್ಟ್ ಮೊಬಿಲಿಟಿ ಕಂಪನಿ ಇದೀಗ ಮ್ಯಾಂಟೀಸ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದೆ. ಮ್ಯಾಂಟೀಸ್ ಇ ಬೈಕ್ ಬೆಲೆ ಕೇವಲ 35,000 ರೂಪಾಯಿ. ಕಡಿಮೆ ಬೆಲೆಯಲ್ಲಿ ಮಾಲಿನ್ಯ ರಹಿತ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ.

GreenVolt Mobility launch mantis e bike in India

ಇದನ್ನೂ ಓದಿ: 8 ವರ್ಷದ ಬಾಲಕನ ಬೈಕ್ ರೈಡ್; ತಂದೆಗೆ 30,000 ರೂ ದಂಡ!

ಮ್ಯಾಂಟೀಸ್ ಇ ಬೈಕ್ ಖರೀದಿಸುವ ಗ್ರಾಹಕರಿಗೆ ರಿಜಿಸ್ಟ್ರೇಶನ್ ಮಾಡಿಸುವ ತಲೆ ಬಿಸಿ ಇಲ್ಲ. ಈ ಬೈಕ್ ಮೇಲೆ ಸವಾರಿ ಮಾಡಲು ಲೈಸೆನ್ಸ್ ಬೇಕಿಲ್ಲ, ಹೆಲ್ಮೆಟ್ ಕಡ್ಡಾಯವಲ್ಲ(ಸುರಕ್ಷತೆಗೆ ಹೆಲ್ಮೆಟ್ ಬಳಸುವುದು ಉತ್ತಮ). ಮ್ಯಾಂಟೀಸ್ ಇ ಬೈಕ್ ಗರಿಷ್ಠ ವೇಗ 25 ಕಿ.ಮೀ ಪ್ರತಿ ಗಂಟೆಗೆ.

GreenVolt Mobility launch mantis e bike in India

ಇದನ್ನೂ ಓದಿ: ಮಾರುತಿ ಸುಜುಕಿ s presso ಕಾರು ಲಾಂಚ್; ಬೆಲೆ ಕೇವಲ 3.69 ಲಕ್ಷ!

ಮ್ಯಾಂಟೀಸ್ ಇ ಬೈಕ್‌‌ನಲ್ಲಿ 48v 14.5 Ah ಲಿ-ಇಯಾನ್ ಬ್ಯಾಟರಿ ಪ್ಯಾಕ್ ಬಳಸಲಾಗಿದೆ.  ಒಂದು ಬಾರಿ ಚಾರ್ಜ್ ಮಾಡಿದರೆ 50 km ಮೈಲೇಜ್ ರೇಂಜ್ ನೀಡಲಿದೆ. ಸಂಪೂರ್ಣ ಚಾರ್ಜ್‌ಗೆ  2.5 ಗಂಟೆ ಸಮಯ ತೆಗೆದುಕೊಳ್ಳಲಿದೆ.

ಇದನ್ನೂ ಓದಿ: ಫೈನ್ ಹಾಕಿದ್ರೆ ಸೂಸೈಡ್; ಮಹಿಳೆಗೆ ಅಂಜಿ ಬಿಟ್ಟು ಕಳುಹಿಸಿದ ಪೊಲೀಸ್!

ಬೈಸಿಕಲ್ ಮಾದರಿಯಲ್ಲೇ ಇರುವ ನೂಟನ ಮ್ಯಾಂಟೀಸ್ ಇ ಬೈಕ್ ನಗರ ಪ್ರದೇಶಗಳ ಸವಾರಿಗೆ ಸೂಕ್ತವಾಗಿದೆ. ಇನ್ನು ಸೈಕಲ್‌ಗಿಂತ ಆರಾಮದಾಯದ ಪ್ರಯಾಣ ನೀಡಲಿದೆ. ಮೊದಲ ಹಂತವಾಗಿ ಅಹಮ್ಮದಾಬಾದ್ ನಗರದಲ್ಲಿ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಬೆಂಗಳೂರು, ಮುಂಬೈ, ನವದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಇ ಬೈಕ್ ಬಿಡುಗಡೆಯಾಗಲಿದೆ.

 

Follow Us:
Download App:
  • android
  • ios