Asianet Suvarna News Asianet Suvarna News

ಮಾರುತಿ ಸುಜುಕಿ s presso ಕಾರು ಲಾಂಚ್; ಬೆಲೆ ಕೇವಲ 3.69 ಲಕ್ಷ!

ಮಾರುತಿ ಸುಜುಕಿ ಹೊಸ ಕಾರು ಬಿಡುಗಡೆ ಮಾಡಿದೆ. ಕಡಿಮೆ ಬೆಲೆ ಮಿನಿ SUV ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ನೂತನ s presso ಕಾರು ಮಾರಾಟ ಕುಸಿತದಲ್ಲೂ ಸಂಚಲನ ಮೂಡಿಸಿದೆ. ಮಾರುತಿ ಸುಜುಕಿ s presso ಕಾರಿನ ಬೆಲೆ, ವಿಶೇಷತೆ ಕುರಿತ ಸಂಪೂರ್ಣ ವಿವರ ಇಲ್ಲಿದೆ.
 

Maruti suzuki lunch s presso mini suv car in India
Author
Bengaluru, First Published Oct 1, 2019, 2:56 PM IST
  • Facebook
  • Twitter
  • Whatsapp

ನವದೆಹಲಿ(ಅ.01): ಬಹುನಿರೀಕ್ಷಿತ ಮಾರುತಿ ಸುಜುಕಿ ಸಂಸ್ಥೆಯ ಸಣ್ಣ SUV ಕಾರು ಬಿಡುಗಡೆಯಾಗಿದೆ. s presso ಮಿನಿ SUV ಕಾರು ಆಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನ, ಸುರಕ್ಷತಾ ಸೌಲಭ್ಯಗಳನ್ನೊಳಗೊಂಡಿದೆ. ವಿಶೇಷ ಅಂದರೆ ನೂತನ s presso ಕಾರಿನ ಬೆಲೆ 3.69 ಲಕ್ಷ ರೂಪಾಯಿಯಿಂದ ಆರಂಭವಾಗುತ್ತಿದೆ.

Maruti suzuki lunch s presso mini suv car in India

ಇದನ್ನೂ ಓದಿ: ಬಹುಬೇಡಿಕೆಯ ಮಾರುತಿ ಬಲೆನೋ ಕಾರು ಬೆಲೆ 1 ಲಕ್ಷ ರು. ಭಾರೀ ಇಳಿಕೆ!

ನಾಲ್ಕು ವೇರಿಯೆಂಟ್‌ಗಳಲ್ಲಿ s presso ಕಾರು ಲಭ್ಯವಿದೆ. Std, LXi, VXi ಹಾಗೂ VXi+ ವೇರಿಯೆಂಟ್ ಲಭ್ಯವಿದೆ. ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರ ಈ ಕಾರು ಲಭ್ಯವಿದೆ. ಮಿನಿ SUV ಕಾರಿನ ಮೂಲಕ ರೆನಾಲ್ಟ್ ಕ್ವಿಡ್, ದಾಟ್ಸನ್ ರೆಡಿ ಗೋ ಹಾಗೂ ತಮ್ಮದೆ ಮಾರುತಿ ಸುಜುಕಿ ಅಲ್ಟೋ ಕೆ10 ಕಾರಿಗೆ ಪ್ರತಿಸ್ಪರ್ಧಿಯಾಗಿ ನೂತನ ಕಾರು ಬಿಡುಗಡೆಯಾಗಿದೆ.

ಮಾರುತಿ ಸುಜುಕಿ s presso ಕಾರಿನ Std ಹಾಗೂ LXi ವೇರಿಯೆಂಟ್  21.4 kmpl ಮೈಲೇಜ್ ನೀಡಿದರೆ,  VXi ಮತ್ತು VXi+ ವೇರಿಯೆಂಟ್ 21.7 kmpl ಮೈಲೇಜ್ ನೀಡಲಿದೆ.

Maruti suzuki lunch s presso mini suv car in India

ಇದನ್ನೂ ಓದಿ: 11 ಸಾವಿರಕ್ಕೆ ಬುಕ್ ಮಾಡಿ ಮಾರುತಿ ಸುಜುಕಿ XL6 ಕಾರು!

BS6 ಎಮಿಶನ್ ಎಂಜಿನ್ ಹೊಂದಿದೆ.  ಈ ಕಾರು 1.0 ಲೀಟರ್  K10 ಪೆಟ್ರೋಲ್ ಎಂಜಿನ್ ಹೊಂದಿದ್ದು, 68 hp ಪವರ್ ಹಾಗೂ 90 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ವೀಡ್ ಮ್ಯಾನ್ಯುಯೆಲ್ ಹಾಗೂ ಆಟೋ ಗೇರ್ ಶಿಫ್ಟ್ ಆಯ್ಕೆ ಲಭ್ಯವಿದೆ. 

Maruti suzuki lunch s presso mini suv car in India

ಇದನ್ನೂ ಓದಿ: ಇನೋವಾ ಹಿಂದಿಕ್ಕಿದ ಮಾರುತಿ ಎರ್ಟಿಗಾ; ಗರಿಷ್ಠ ಮಾರಾಟವಾದ MPV ಕಾರು!

ನೂತನ ಕಾರು 3,565 mm ಉದ್ದ, 1,520 mm ಅಗಲ ಹೊಂದಿದ್ದು,  2,380 mm ವೀಲ್ಹ್ ಬೇಸ್ ಹೊಂದಿದೆ.  Std ಹಾಗೂ LXi ವೇರಿಯೆಂಟ್ ಕಾರಿನ ಎತ್ತರ 1,549 mm, VXi ಹಾಗೂ VXi+ ಟ್ರಿಮ್ ಕಾರಿನ ಎತ್ತರ 1,564 mm.

Maruti suzuki lunch s presso mini suv car in India

ಇದನ್ನೂ ಓದಿ: ಭಾರತೀಯರ ನಂಬಿಕಸ್ಥ ವಾಹನ ಯಾವುದು?- ಇಲ್ಲಿದೆ ಲಿಸ್ಟ್!

ಮಾರುತಿ ಸುಜುಕಿ s presso ಕಾರಿನ ಬೆಲೆ 3.69 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭವಾಗಲಿದ್ದು, ಗರಿಷ್ಠ ಬೆಲೆ  4.91 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

ಎಸ್ ಪ್ರೆಸ್ಸೋ ಕಾರಿನ ಬೆಲೆ(ಎಕ್ಸ್ ಶೋ ರೂಂ):
S-Presso Std -  3.69 ಲಕ್ಷ ರೂಪಾಯಿ
S-Presso LXi -  4.05 ಲಕ್ಷ ರೂಪಾಯಿ
S-Presso VXi -  4.24 ಲಕ್ಷ ರೂಪಾಯಿ
Presso VXi AGS -  4.67 ಲಕ್ಷ ರೂಪಾಯಿ
S-Presso VXi+ -  4.48 ಲಕ್ಷ ರೂಪಾಯಿ
S-Presso VXi+ AGS -  4.91 ಲಕ್ಷ ರೂಪಾಯಿ

ಅಕ್ಟೋಬರ್ 01ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;

Follow Us:
Download App:
  • android
  • ios