ದೆಹಲಿ(ಮಾ.012): ವಾಹನ ಕಳ್ಳರು ದೊಡ್ಡ ಗ್ಯಾಂಗ್ ಕಟ್ಟಿಕೊಂಡಿರುತ್ತಾರೆ. ವಾಹನ ಕದ್ದು ಬಿಡಿ ಭಾಗಗಳನ್ನು ತೆಗೆದು ಮಾರಾಟ ಮಾಡುವುದು, ಗುಜುರಿಗೆ ಹಾಕುವುದು ಸೇರಿದಂತೆ ಅತೀ ದೊಡ್ಡ  ಜಾಲ ಇದರ ಹಿಂದೆ ಕೆಲಸ ಮಾಡುತ್ತಿರುತ್ತದೆ. ಇವರ ಉದ್ದೇಶ ಸುಲಭವಾಗಿ ಹಣಗಳಿಸುವುದು. ಆದರೆ ಪ್ರೀತಿಸಿದ ಹುಡುಗಿ ಮಾತಿಗೆ ಬೈಕ್ ಕದಿಯಲು ಆರಂಭಿಸಿದ ಕಳ್ಳನ ಕತೆ ನಿಜಕ್ಕೂ ರೋಚಕ.

ಇದನ್ನೂ ಓದಿ: ಜಾಮ್ ಆಗಿದೆ ಎಂದ ಪ್ರಯಾಣಿಕನ್ನೇ ಹಿಡಿದು ಟ್ರಾಫಿಕ್ ಪೊಲೀಸ್ ಮಾಡಿದರು!.

ಈ ಘಟನೆ ನಡೆದಿರುವುದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ. ಹೆಸರು ಲಲಿತ್. ಹೇಳಿಕೊಳ್ಳಲು ಕೈಯಲ್ಲಿ ಕೆಲಸವಿಲ್ಲ. ಹಾಗಂತ ಶ್ರೀಮಂತನೂ ಅಲ್ಲ. ದುಡಿಯಲು ಇಷ್ಟವಿಲ್ಲ. ಅವನ ಪಾಡಿಗೆ ಇದ್ದರೆ ಸಮಸ್ಯೆ ಇರಲಿಲ್ಲ. ಕ್ಯಾಪಿಟಲ್ ಸಿಟಿಯಲ್ಲಿರುವಾಗ ಗೆಳತಿ ಇಲ್ಲದಿದ್ದರೆ ಹೇಗೆ? ಹೀಗಾಗಿ ಲಲಿತ್ ಕೂಡ ತನಗೆ ಸರಿಸಮಾನಾದ ಹುಡುಗಿಯನ್ನು ಪ್ರೀತಿಸುತ್ತಿದ್ದ. ಫಿಲ್ಮ್, ಧಾರವಾಹಿಗಳಲ್ಲಿರುವ ಪ್ರೀತಿಯಾಗಿದ್ದರೂ ಪರವಾಗಿರಲಿಲ್ಲ. ಆದರೆ ಇದು ಟ್ರೈನ್ ಹತ್ತಿದಾಗ, ಬಸ್ ಏರಿದಾಗ,  ಸಂತೆಯಲ್ಲಿ ನಡೆದುಕೊಂಡು ಹೋದಾಗ ಚಿಗುರೊಡೆಯುವ ಪ್ರೀತಿ ಆಗಿತ್ತು.

ಇದನ್ನೂ ಓದಿ: ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವವರ ಚಳಿ ಬಿಡಿಸಿದ ಮಹಿಳೆ!.

ಕೈಯಲ್ಲಿ ದುಡ್ಡಿಲ್ಲ, ಅತ್ತ ಪ್ರೀತಿಸಿದ ಹುಡುಗಿಗೆ ಪಿಜ್ಜಾ, ಐಸ್‌ಕ್ರೀಮ್, ಜ್ಯೂಸ್ ಸೇರಿದಂತೆ ಎಲ್ಲವನ್ನೂ ಕೊಡಿಸಲು ಅದ್ಹೇಗೆ ಹಣ ಹೊಂದಿಸುತ್ತಿದ್ದ ಅನ್ನೋದು ಇದೀಗ ಪೊಲೀಸರಿಗೆ ಅರ್ಥವಾಗುತ್ತಿದೆ. ಪ್ರತಿ ಬಾರಿ ಲಲಿತ್ ಗರ್ಲ್‌ಫ್ರೆಂಡ್ ಭೇಟಿಯಾಗಲು ಹೋದಾಗ, ಆಕೆ ಹೇಳುತ್ತಿದ್ದದ್ದೂ ಒಂದೇ ಮಾತು. ದೆಹಲಿಯಲ್ಲಿ ಇದ್ದೀಯಾ, ಬೈಕ್ ಇಲ್ಲ. ನಿನ್ ಜೊತೆ ನಡ್ಕೊಂಡ್ ನಾನ್ ಬರಲ್ಲ,  ನೀನು ಒಬ್ಬ ಬಾಯ್ ಫ್ರೆಂಡಾ ಅನ್ನೋ ಮಾತು ಲಲಿತ್‌ಗೆ ಚುಚ್ಚುತ್ತಿತ್ತು.

11 ಕಿ.ಮೀ ರೈಡ್ ಬಳಿಕ ಹೆಲ್ಮೆಟ್ ತೆಗೆದಾಗ ಬೆಚ್ಚಿ ಬಿದ್ದ ಶಿಕ್ಷಕ; ಆಸ್ಪತ್ರೆಗೆ ದಾಖಲು!.

ಹೀಗೆ  ಫೆಬ್ರವರಿ ಮೊದಲ ವಾರದಲ್ಲಿ ಲಲಿತ್‌ಗೆ ಗೆಳತಿ ಒಂದು ಕಂಡೀಷನ್ ಹಾಕಿ ಬಿಟ್ಟಳು. ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಗೆ ಬೈಕ್ ಇದ್ದರೆ ಮಾತ್ರ ನಿನ್ನ ಜೊತೆ ಬರುತ್ತೇನೆ ಎಂದು ಹೇಳಿಬಿಟ್ಟಳು. ಬೈಕ್ ಇಲ್ಲ ಎಂದು ವ್ಯಂಗ್ಯವಾಡುತ್ತಿದ್ದ ಗೆಳತಿ ಮಾತಿಗೆ ನೊಂದಿದ್ದ ಲಲಿತ್, ಇದೀಗ ಪ್ರೇಮಿಗಳ ದಿನಾಚರಣೆ ಕಂಡೀಷನ್‌ ಮತ್ತಷ್ಟು ನೋಯಿಸಿತು. 

ಲಲಿತ್ ಮುಂದೆ ಹಲವು ಆಯ್ಕೆಗಳಿತ್ತು. ಹುಡುಗಿಗಾಗಿ ಹೊಸ ಬೈಕ್ ಖರೀದಿಸುವುದು.  ಪೋಷಕರಲ್ಲಿ, ಕುಟುಂಬದ ಸದಸ್ಯರಲ್ಲಿ, ಸ್ನೇಹಿತರಲ್ಲಿ ಹಣ ಕೇಳಿ ಬೈಕ್ ಖರೀದಿಸಬಹುದಿತ್ತು. ಆದರೆ ಲಲಿತ್ ಇದ್ಯಾವುದನ್ನು ಯೋಚನೆ  ಮಾಡಲೇ ಇಲ್ಲ. ಫೆಬ್ರವರಿ 14ಕ್ಕೆ ಗೆಳತಿಗಾಗಿ ಬೈಕ್ ಸರ್ಪ್ರೈಸ್ ನೀಡಲು ಗೆಳೆಯ ಶಾಹೀದ್ ಕರೆ ಮಾಡಿ ಬೈಕ್ ಕಳ್ಳತನ ಮಾಡಲು ಮಾಸ್ಟರ್ ಪ್ಲಾನ್ ರೆಡಿ ಮಾಡಿದ. 

ಒಂದು ಬೈಕ್ ಪ್ಲಾನ್ ಮಾಡಿದ್ದ ಲಲಿತ್ ಬರೋಬ್ಬರಿ 8 ಬೈಕ್ ಕದ್ದಿದ್ದ. ಫೆಬ್ರವರಿ 14ಕ್ಕೆ ಗೆಳತಿಗೆ ಒಟ್ಟು 14 ಬೈಕ್ ನೀಡಲು ಪ್ಲಾನ್  ರೆಡಿ ಮಾಡಿದ್ದ. ಆದರೆ 9ನೇ ಬೈಕ್ ಕದಿಯುವಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದ. ಲಲಿತ್ ಹಾಗೂ ಆತನ ಗೆಳೆಯ ಶಾಹೀದ್‌ನನ್ನೂ ಅರೆಸ್ಟ್ ಮಾಡಲಾಗಿದೆ. ಪೊಲೀಸರು ಲಲಿತ್ ಚಳಿ ಬಿಡಿಸಿದಾಗ 8 ಬೈಕ್ ಕದ್ದಿರುವುದಾಗಿ ಹೇಳಿದ್ದಾನೆ. ಇಷ್ಟೇ ಅಲ್ಲ, ಗೆಳತಿಗಾಗಿ ಬೈಕ್ ಕದ್ದಿರುವುದಾಗಿ, ಹಣಕ್ಕಾಗಿ ಮಾಡಿಲ್ಲ ಎಂದಿದ್ದಾನೆ. ಗೆಳತಿಗೆ ಬೈಕ್ ಅಚ್ಚರಿ ನೀಡಲು ಹೋದ ಲಲಿತ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಮಾರ್ಚ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ