ಜಾಮ್ ಆಗಿದೆ ಎಂದ ಪ್ರಯಾಣಿಕನ್ನೇ ಹಿಡಿದು ಟ್ರಾಫಿಕ್ ಪೊಲೀಸ್ ಮಾಡಿದರು!

ಭಾರತದಲ್ಲಿ ಟ್ರಾಫಿಕ್ ನಿಯಮ ಪಾಲನೆ ಕಡಿಮೆ. ಟ್ರಾಫಿಕ್ ಜಾಮ್ ಆದಾಗ ಸಿಕ್ಕ ಜಾಗದಲ್ಲಿ ತೂರಿಕೊಂಡು ಬರುವವರೇ ಹೆಚ್ಚು. ರಸ್ತೆ ಜಾಮ್ ಆಗಿದೆ, ಹೇಗಾದರೂ ಸರಿಪಡಿಸಿ ಎಂದು ಅದೇ ದಾರಿಯಲ್ಲಿ ಬಂದ ಪ್ರಯಾಣಿಕೆ ಪೊಲೀಸರಿಗೆ ಹೇಳಿದರೆ, ಅವನನ್ನೇ ಹಿಡಿದು ಟ್ರಾಫಿಕ್ ಪೊಲೀಸ್ ಮಾಡಿದ ಘಟನೆ ನಡೆದಿದೆ.

Rider complains about road jam and Police ask him to manage traffic in Uttara pradesh

ಫಿರೋಝಾಬಾದ್(ಫೆ.21): ಮೋಟಾರು ವಾಹನ ನಿಯಮ ತಿದ್ದುಪಡಿ ಬಳಿಕವೂ ಭಾರತದಲ್ಲಿ ಟ್ರಾಫಿಕ್ ನಿಯಮ ಪಾಲೆನೆಯಲ್ಲಿ ಗಣನೀಯ ಬದಲಾವಣೆಯಾಗಿಲ್ಲ. ರಸ್ತೆಯಲ್ಲಿ ಸಂಚರಿಸುವಾಗ ಶಿಸ್ತು ಮುಖ್ಯ. ಜಾಮ್ ಆದಾಗ ತಾಳ್ಮೆ ಕೂಡ  ಮುಖ್ಯ. ಆದರೆ ಸಿಕ್ಕ ಜಾಗದಲ್ಲಿ ತೂರಿಕೊಂಡು ಮತ್ತಷ್ಟು ಜಾಮ್ ಮಾಡುವವರ ಸಂಖ್ಯೆಯೇ ಹೆಚ್ಚಾಗಿದೆ.

ಇದನ್ನೂ ಓದಿ: ಸಾರ್ವಜನಿಕ ರಸ್ತೆಯಲ್ಲಿ ರೇಸ್, ಲ್ಯಾಂಬೋರ್ಗಿನಿ, ಆಡಿ ಕಾರು ಸೀಝ್!

ಹೀಗೆ ಜಾಮ್ ಆಗಿದ್ದ ರಸ್ತೆಯಲ್ಲಿ ಬೈಕ್ ಮೂಲಕ ಬಂದ ಪ್ರಯಾಣಿಕ ಸೋನೋ ಚವ್ಹಾಣ್ ಜಂಕ್ಷನ್‌ನಲ್ಲಿ ನಿಂತಿದ್ದ ಹಿರಿಯ ಟ್ರಾಪಿಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮಾಹಿತಿ ತಿಳಿದ ಪೊಲೀಸರು ಟ್ರಾಫಿಕ್ ತಿಳಿಗೊಳಿಸಲು ಕ್ರಮಕೈಗೊಳ್ಳಬೇಕಿತ್ತು. ಆದರೆ ಸೋನು ಚವ್ಹಾಣ್‌ಗೆ ಕೆಲ ಹೊತ್ತು ನಿಂತು ಟ್ರಾಫಿಕ್ ನಿರ್ವಣೆ ಮಾಡಲು ಸೂಚಿಸಿದ್ದಾರೆ.

ಇದನ್ನೂ ಓದಿ: ನಾಯಿಯನ್ನು ಬೈಕ್‌ನಲ್ಲಿ ಕರೆದೊಯ್ದ ಮಾಲೀಕನಿಗೆ ಬಿತ್ತು ದುಬಾರಿ ದಂಡ!

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಫಿರೋಝಾಬಾದ್‌ನಲ್ಲಿ. ಸೋನು ಚವ್ಹಾಣ್‌ಗೆ ಸ್ವಯಂ ಸೇವಕ ಅನ್ನೋ ಬ್ಯಾಡ್ಜ್, ಡ್ರೆಸ್ ನೀಡಿದ್ದಾರೆ. ಸುಮಾರು 2 ತಾಸು ಸೋನು ಫಿರೋಝಾಬಾದ್ ಜಂಕ್ಷನ್‌ನಲ್ಲಿ ಸ್ವಯಂ ಸೇವಕ ಟ್ರಾಫಿಕ್ ಪೊಲೀಸ್ ಆಗಿ ಕಾರ್ಯನಿರ್ವಹಿಸಿದ್ದಾನೆ.

ಪೊಲೀಸ್ ಜೀಪಿನಲ್ಲಿ ಪಕ್ಕದ ಜಂಕ್ಷನ್‌ಗೆ ತೆರಳಿ ಟ್ರಾಫಿಕ್ ನಿರ್ವಹಣೆ ಮಾಡಿದ್ದಾನೆ. ಪೊಲೀಸರ ಸೂಚನೆಯಂತೆ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಹಾಕಿದ್ದಾನೆ. 2 ಗಂಟೆಯಲ್ಲಿ ಸೋನು 1,600 ರೂಪಾಯಿ ಫೈನ್ ಹಾಕಿದ್ದಾನೆ. 

ವಾಹನ ಮೇಲೆ ಸ್ಟಿಕ್ಕರ್ ಅಂಟಿಸಿದವರಿಗೆ ಫೈನ್, ಕೋರ್ಟ್ ಆದೇಶ ಜಾರಿಗೊಳಿಸಿದ ಪೊಲೀಸ್!

ಸಾರ್ವಜನಿಕರನ್ನು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುವ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಈ ಮೂಲಕ ಸಾರ್ವಜನಿಕರು, ಪ್ರಯಾಣಿಕರಲ್ಲಿ ಟ್ರಾಫಿಕ್ ನಿಯಮ ಪಾಲನೆ ಕುರಿತು ಜಾಗೃತಿ ಮೂಡಿಸಲಿದ್ದೇವೆ ಎಂದು ಫಿರೋಝಾಬಾದ್ ಟ್ರಾಫಿಕ್ ಪೊಲೀಸ್ ಇನ್ಸ್‌ಪೆಕ್ಟರ್ ರಾಮ್‌ದತ್ ಶರ್ಮಾ ಹೇಳಿದ್ದಾರೆ.

2 ಗಂಟೆ ಟ್ರಾಫಿಕ್ ಪೊಲೀಸ್ ಆಗಿ ಕಾರ್ಯನಿರ್ವಹಿಸಿದ ಸೋನು ಹೊಸ ಅನುಭವಕ್ಕೆ ಸಂತಸ ವ್ಯಕ್ತಪಡಿಸಿದ್ದಾನೆ. ಪೊಲೀಸರ ಕಷ್ಟ ಅರಿವಾಯಿತು. ಎಲ್ಲರೂ ಟ್ರಾಫಿಕ್ ನಿಯಮ ಪಾಲಿಸಬೇಕು ಎಂದು ಮನವಿ ಮಾಡಿದ್ದಾನೆ.

Latest Videos
Follow Us:
Download App:
  • android
  • ios