Asianet Suvarna News Asianet Suvarna News

11 ಕಿ.ಮೀ ರೈಡ್ ಬಳಿಕ ಹೆಲ್ಮೆಟ್ ತೆಗೆದಾಗ ಬೆಚ್ಚಿ ಬಿದ್ದ ಶಿಕ್ಷಕ; ಆಸ್ಪತ್ರೆಗೆ ದಾಖಲು!

ಮೋಟಾರು ವಾಹನ ಕಾಯ್ದೆ ತಿದ್ದುಪಡಿಯಿಂದ ಹೆಚ್ಚಿನವರು ಹೆಲ್ಮೆಟ್ ಮರಯದೆ ತೆಗೆದುಕೊಳ್ಳುತ್ತಾರೆ. ಹೀಗೆ ಸಂಸ್ಕೃತ ಶಿಕ್ಷಕ ಹೆಲ್ಮೆಟ್ ಧರಿಸಿ ಶಾಲೆಗೆ ತೆರಳಿದ್ದಾರೆ. ಸ್ಕೂಲ್‌ನಲ್ಲಿ ಬೈಕ್ ಪಾರ್ಕ್ ಮಾಡುವಾಗ ಹೆಲ್ಮೆಟ್ ತೆಗೆದಾಗ ಶಿಕ್ಷಕ ಬೆಚ್ಚಿ ಬಿದ್ದಿದ್ದಾನೆ. ಇಷ್ಟೇ ಅಲ್ಲ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತ ರೋಚಕ ಘಟನೆ ಇಲ್ಲಿದೆ.

School teacher found snake in helmet after 11 km rider Kerala
Author
Bengaluru, First Published Feb 9, 2020, 4:20 PM IST

ಕೇರಳ(ಫೆ.09): ದ್ವಿಚಕ್ರ ವಾಹನ ಅಥವಾ ಕಾರು ಪ್ರಯಾಣ ಆರಂಭಿಸುವ ಮುನ್ನ ಎರಡೆರಡು ಬಾರಿ ಪರಿಶೀಲನೆ ನಡೆಸುವುದು ಸೂಕ್ತ. ಆದರೆ ಹಲವು ಬಾರಿ ಲೇಟಾಯ್ತು, ತುರ್ತು ಸಂದರ್ಭದಲ್ಲಿ ಬೈಕ್ ಏರಿ ಹೊರಟೇ ಬಿಡುತ್ತಾರೆ. ಹೀಗೆ ಬೆಳಗ್ಗೆ ಪರಿಶೀಲನೆ ನಡೆಸಿದ ಶಾಲೆಗೆ ಹೊರಟ ಶಿಕ್ಷಕ ಆಸ್ಪತ್ರೆ ದಾಖಲಾದ ಘಟನೆ ನಡೆದಿದೆ.

ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನಲ್ಲಿ ಹಾವಿನಾಟ- ಒಳಗಿದ್ದವರಿಗೆ ಪ್ರಾಣಸಂಕಟ!.

ಕೇರಳದ ಸಂಸ್ಕೃತ ಶಿಕ್ಷಕ ರಂಜಿತ್ ಬೈಕ್ ಏರಿ ಮನೆಯಿಂದ 5 ಕಿ.ಮೀ ದೂರದಲ್ಲಿರುವ ಖಾಸಗಿ ಶಾಲೆಗೆ ತೆರಳಿದ್ದಾರೆ. ಬೆಳಗ್ಗೆ 8.30ಕ್ಕೆ ಶಾಲೆಗೆ ತಲುಪಿ ಮಕ್ಕಳಿಗೆ ಸಂಸ್ಕೃತ ಪಾಠ ಮಾಡಿದ್ದಾರೆ.ಬಳಿಕ ಮತ್ತೊಂದು ಶಾಲೆಗೆ ಸಂಸ್ಕೃತ ಪಾಠಕ್ಕಾಗಿ ತೆರಳಿದ್ದಾರೆ.  11.30ರ ಸುಮಾರಿಗೆ ಶಾಲೆಗೆ ತಲುಪಿದ್ದಾರೆ. 

ಇದನ್ನೂ ಓದಿ: ಸ್ಕೂಟರ್ ಒಳಗಡೆ ನಾಗಣ್ಣ- ಹಾವಿನ ರಕ್ಷಣೆಗಾಗಿ ವಾಹನ ಬಿಚ್ಚಿದ ಮಾಲೀಕ!

ಶಾಲೆಯಲ್ಲಿ ಬೈಕ್ ಪಾರ್ಕ್ ಮಾಡಿ ಹೆಲ್ಮೆಟ್ ತೆಗೆದಾಗ ಹಾವಿನ ಬಾಲವೊಂದು ಹೆಲ್ಮೆಟ್ ಒಳಗೆ ಕಾಣಿಸಿದೆ. ತಕ್ಷಣವೇ ಪರಿಶೀಲಿಸಿದಾಗ ವಿಷಕಾರಕ ಹಾವೊಂದು ಪತ್ತೆಯಾಗಿದೆ. ಗಾತ್ರದಲ್ಲಿ ಹಾವು ಸಣ್ಣದಾದರೂ ಅತ್ಯಂತ ವಿಷಕಾರಕ ಹಾವಾಗಿತ್ತು. ಈ ಹಾವನ್ನು ನೋಡಿದಾಗ ಶಿಕ್ಷಕ ಬೆಚ್ಚಿ ಬಿದ್ದಿದ್ದಾನೆ. 

School teacher found snake in helmet after 11 km rider Kerala

ಇದನ್ನೂ ಓದಿ:ಸ್ಕೂಟರ್ ಏರಿ ಅರ್ಧ ದಾರಿ ತಲುಪಿದಾಗ ಹೆಡೆ ಬಿಚ್ಚಿದ ನಾಗಣ್ಣ!

ಶಾಲೆಯ ಸಹ ಶಿಕ್ಷಕರು ತಕ್ಷಣವೇ ಸಂಸ್ಕೃತ ಶಿಕ್ಷಕ ರಂಜಿತ್‌ರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ರಂಜಿತ್ ದೇಹದಲ್ಲಿ ಹಾವಿನ ವಿಷ ಇದೆಯಾ ಎಂದು ರಕ್ಷ ಪರೀಕ್ಷೆ ನಡೆಸಲಾಗಿದೆ. ರಕ್ತದಲ್ಲಿ ಯಾವುದೇ ವಿಷ ಇಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ.

ಬೈಕ್‌ ಸೀಟ್ ಕೆಳಗಡೆ ಹೆಬ್ಬಾವು ಪ್ರತ್ಯಕ್ಷ - ವೀಡಿಯೋ ವೈರಲ್!

ಚಿಕ್ಕ ಹೆಲ್ಮೆಟ್ ಆದ ಕಾರಣ ರಂಜಿತ್‌ಗೆ ಕೊಂಚ ಟೈಟ್ ಆಗುತ್ತಿತ್ತು. ಹೀಗಾಗಿ ರಂಜಿತ್ ಮನೆಯಿಂದ ಶಾಲೆಗೆ ತೆರಳುವ ವೇಳೆ ಹೆಲ್ಮೆಟ್ ಧರಿಸಿದಾಗಲೇ ಹಾವು ಅಪ್ಪಚ್ಚಿಯಾಗಿದೆ. ಹಾವಿಗೆ ತಲೆ ಎತ್ತಿ ಕಚ್ಚುವಷ್ಟು ಜಾಗವೇ ಹೆಲ್ಮೆಟ್ ಒಳಗಿರಲಿಲ್ಲ. ಇತ್ತ ಆಸ್ಪತ್ರೆಯಿಂದ ಮರಳಿದ ಶಿಕ್ಷಕ ಹೆಲ್ಮೆಟ್‌ಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ. 

ಫೆಬ್ರವರಿ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios