ಕೋಲ್ಕತಾ(ಫೆ.08): ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ನಾಯಕ ಸೌರವ್ ಗಂಗೂಲಿ. ಭಾರತೀಯ ಕ್ರಿಕೆಟ್‌ಗೆ ಭದ್ರ ಬುನಾದಿ ಹಾಕಿದ ಈ ಮಾಜಿ ನಾಯಕ ಇದೀಗ ನೂತನ BMW G310 GS ಅಡ್ವೆಂಚರ್ ಬೈಕ್ ಖರೀದಿಸಿದ್ದಾರೆ. ಕಳೆದ ವರ್ಷ ಯುವರಾಜ್ ಸಿಂಗ್ BMW ಬೈಕ್ ಖರೀದಿಸಿದ್ದರು.

ಇದನ್ನೂ ಓದಿ: ಶಾಹಿದ್ ಕಪೂರ್ to ಸಂಜಯ್ ದತ್: ಸೆಲೆಬ್ರೆಟಿಗಳಲ್ಲಿದೆ ದುಬಾರಿ ಡುಕಾಟಿ ಬೈಕ್!

BMW ಹಾಗೂ ಟಿವಿಎಸ್ ಜಂಟಿಯಾಗಿ ನಿರ್ಮಿಸಿರುವ BMW ಬೈಕ್ ಅಡ್ವೆಂಚರ್ ಬೈಕ್‌ಗೆ ಭಾರತದಲ್ಲಿ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿದೆ. 3.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ನೀಡಿ ಗಂಗೂಲಿ ನೂತನ ಬೈಕ್ ಖರೀದಿಸಿದ್ದಾರೆ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಬೈಕ್ ಬೆಲೆ ಹೆಚ್ಚಳ-ಇಲ್ಲಿದೆ ನೂತನ ದರ!

ಗಂಗೂಲಿ ತಮ್ಮ ದಿನ ನಿತ್ಯ ಬಳಕೆಗೆ BMW 7 ಸೀರಿಸ್ ಕಾರು ಉಪಯೋಗಿಸುತ್ತಾರೆ. BMW ಬೈಕ್ ಖರೀದಿಸಿದ ಸೌರವ್ ಗಂಗೂಲಿಗೆ BMW ಧನ್ಯವಾದ ಹೇಳಿದೆ.  BMW G310 GS ಅಡ್ವೆಂಚರ್ ಬೈಕ್ 313cc, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್‌ಡ್ ಎಂಜಿನ್ 34 Bhp ಪವರ್ ಹಾಗೂ  28 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.