Asianet Suvarna News Asianet Suvarna News

ಫ್ಲಿಪ್‌ಕಾರ್ಟ್ ಡೆಲಿವರಿಗೆ ಎಲೆಕ್ಟ್ರಿಕ್ ವಾಹನ- ಹೊಸ ಪ್ರಯತ್ನಕ್ಕೆ ಮೆಚ್ಚುಗೆ!

ಫ್ಲಿಪ್‌ಕಾರ್ಟ್ ದೇಶದಾದ್ಯಂತ ಗ್ರಾಹಕರಿಗೆ ವಸ್ತುಗಳನ್ನು ಡೆಲಿವರಿ ಮಾಡಲು ವಾಹನಗಳನ್ನು ಬಳಸುತ್ತಿದೆ. ಇದೀಗ ಇಂಧನ ಚಾಲಿತ ವಾಹನಗಳ ಬದಲಾಗಿ, ಎಲೆಕ್ಟ್ರಿಕ್ ವಾಹನ  ಬಳಸಲು ಫ್ಲಿಪ್ ಕಾರ್ಟ್ ದಿಟ್ಟ ಹೆಜ್ಜೆ ಇಟ್ಟಿದೆ. ಫ್ಲಿಪ್‌ಕಾರ್ಟ್ ಕಾರ್ಯಕ್ಕೆ ಮೆಚ್ಚಗೆ ವ್ಯಕ್ತವಾಗಿದೆ.

Flipkart plan to replace fuel to electric vehicle for delivery
Author
Bengaluru, First Published Jun 28, 2019, 6:42 PM IST
  • Facebook
  • Twitter
  • Whatsapp

ಬೆಂಗಳೂರು(ಜೂ.28) : ಭಾರತದ ಅತಿದೊಡ್ಡ ಇ-ಕಾಮರ್ಸ್ ಮಾರುಕಟ್ಟೆಯಾದ ಫ್ಲಿಪ್‍ಕಾರ್ಟ್  ಎಲ್ಲಾ ಗ್ರಾಹಕರನ್ನು ತಲುಪುವ ಉದ್ದೇಶದಿಂದ ರಾಷ್ಟ್ರವ್ಯಾಪಿ ವಿದ್ಯುತ್‍ಚಾಲಿತ ವಾಹನ(ಇವಿ)ಗಳನ್ನು ಪರಿಚಯಿಸುವುದಾಗಿ ಘೋಷಿಸಿದೆ. ಫ್ಲಿಪ್‍ಕಾರ್ಟ್‍ನ ಸುಸ್ಥಿರತೆಯ ಬದ್ಧತೆಯ ಭಾಗವಾಗಿ ಈ ಘೋಷಣೆ ಮಾಡಲಾಗಿದೆ. ಪರಿಸರಕ್ಕೆ ಪೂರಕವಾದ ಹಾಗೂ ನಾಗರಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಫ್ಲಿಪ್ ಹೊಸ ಪ್ರಯತ್ನಕ್ಕೆ ಕೈಹಾಕಿದೆ. 

 

ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನ ಬಳಕೆಗೆ ಮೋದಿ ಸರ್ಕಾರ ಹೊಸ ಯೋಜನೆ- ರಿಜಿಸ್ಟ್ರೇಶನ್ ಉಚಿತ!

ಭಾರತದಲ್ಲಿ ಇ-ಕಾಮರ್ಸ್‍ನ ನಾಯಕನಾಗಿ ಬೆಳೆದಿರುವ ಫ್ಲಿಪ್‍ಕಾರ್ಟ್ ಸಮೂಹ ತನ್ನ ಡೆಲಿವರಿ ಜಾಲದ ಕೊನೆಯ-ತುದಿಯವರೆಗೂ ಹಂತ ಹಂತವಾಗಿ ವಿದ್ಯುತ್‍ಚಾಲಿತ ವಾಹನಗಳನ್ನು ಪರಿಚಯಿಸುವ ಉದ್ದೇಶ ಹೊಂದಿದೆ. ಸದ್ಯ ಇರುವ ಲಾಸ್ಟ್ ಮೈಲ್ ಡೆಲಿವರಿ ವ್ಯಾನ್‍ಗಳ ಪೈಕಿ ಶೇ.40ರಷ್ಟನ್ನು ಮಾರ್ಚ್ 2020ರೊಳಗಾಗಿ ಬದಲಿಸಿ, ಅವುಗಳ ಬದಲಿಗೆ ವಿದ್ಯುತ್‍ಚಾಲಿತ ವಾಹನಗಳನ್ನು ನಿಯೋಜಿಸುವ ಗುರಿಯನ್ನು ಹಾಕಿಕೊಂಡಿದೆ. ಆರಂಭದಲ್ಲಿ ಅಂದರೆ 2019ರ ಕೊನೆಯ ವೇಳೆಗೆ ದೇಶದ ನಗರಗಳಲ್ಲಿ ಸುಮಾರು 160 ವಿದ್ಯುತ್‍ಚಾಲಿತ ವಾಹನಗಳನ್ನು ನಿಯೋಜಿಸಲು ಫ್ಲಿಪ್‌ಕಾರ್ಟ್ ನಿರ್ಧರಿಸಿದೆ.

ಇದನ್ನೂ ಓದಿ: ಮಹೀಂದ್ರ ಎಲೆಕ್ಟ್ರಿಕ್ ಆಟೋ ಬಿಡುಗಡೆ-ಪ್ರತಿ ಕಿ.ಮೀಗೆ 50 ಪೈಸೆ!

ಕಳೆದ 6 ತಿಂಗಳಲ್ಲಿ, ಫ್ಲಿಪ್‍ಕಾರ್ಟ್ ತನ್ನ ಡೆಲಿವರಿ ಸರಪಳಿಯಲ್ಲಿ ಎಲೆಕ್ಟ್ರಿಕ್ ವಾಹನ(ಇವಿ)ಗಳ ನಿಯೋಜನೆಗೆ ಹಲವು ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿದ್ದು, ಇದಕ್ಕೆ ಅತ್ಯುತ್ತಮ ಫಲಿತಾಂಶ ಹಾಗೂ ಸ್ಪಂದನೆ ಸಿಕ್ಕಿದೆ. ಈಗ ಸಂಸ್ಥೆಯು ದೊಡ್ಡ ಮಟ್ಟದಲ್ಲಿ ವಿದ್ಯುತ್‍ಚಾಲಿತ ವಾಹನಗಳನ್ನು ನಿಯೋಜಿಸಲು ಅನುಕೂಲವಾಗುವಂತೆ ಮತ್ತು ಸರಾಗ ಕಾರ್ಯನಿರ್ವಹಣೆಗೆ ನೆರವಾಗುವಂತೆ ತನ್ನ ಹಬ್‍ಗಳಲ್ಲಿ ಅಗತ್ಯ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಸಿದ್ಧಪಡಿಸುತ್ತಿದೆ. ಈ ಪ್ರಯತ್ನದಿಂದಾಗಿ ಇಂಗಾಲದ ಹೊರಸೂಸುವಿಕೆ ಪ್ರಮಾಣವು ಸುಮಾರು ಶೇ.50ರಷ್ಟು ತಗ್ಗಲಿವೆ. ಪ್ರಸ್ತುತ, ಫ್ಲಿಪ್‍ಕಾರ್ಟ್ ಈಗಾಗಲೇ ಹೈದರಾಬಾದ್‍ನಲ್ಲಿ 8 ವಿದ್ಯುತ್ ಚಾಲಿತ ವಾಹನಗಳು, ನವದೆಹಲಿಯಲ್ಲಿ 10 ಹಾಗೂ ಬೆಂಗಳೂರಿನಲ್ಲಿ 30 ಇ-ಬೈಕ್‍ಗಳನ್ನು ನಿಯೋಜಿಸಿದೆ.

``ನಮ್ಮ ಪೂರೈಕಾ ಸರಣಿಯಾದ್ಯಂತ ವಿದ್ಯುತ್‍ಚಾಲಿತ ವಾಹನಗಳ ನಿಯೋಜನೆಯು ಸುಸ್ಥಿರತೆಯತ್ತ ಇಟ್ಟ ಪ್ರಮುಖ ಹೆಜ್ಜೆಗಳಲ್ಲೊಂದು. ಪರಿಸರ ಸ್ನೇಹಿ ಪೂರೈಕಾ ಸರಣಿಯ ನಿಟ್ಟಿನಲ್ಲಿ ನೋಡಿದರೆ, ವಿದ್ಯುತ್‍ಚಾಲಿತ ವಾಹನಗಳಿಗೆ ಅಗಾಧವಾದ ಅಭಿವೃದ್ಧಿಯ ಅವಕಾಶಗಳಿವೆ. ಇದು ಭವಿಷ್ಯದಲ್ಲಿ ಅತ್ಯುತ್ಕೃಷ್ಟವಾದ ಪೂರೈಕಾ ಸರಣಿಯನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಪ್ರಯತ್ನಗಳಿಂದಾಗಿ ಸಾಂಪ್ರದಾಯಿಕ ಶಕ್ತಿಯ ಮೂಲಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿ, ಉದ್ಯಮದ ವೆಚ್ಚವನ್ನೂ ತಗ್ಗಿಸುವ ಮೂಲಕ ವಿದ್ಯುತ್‍ಚಾಲಿತ ಚಲನಶೀಲತೆಯತ್ತ ಅರ್ಥಪೂರ್ಣವಾದ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಭಾರತದಲ್ಲಿ ವಿದ್ಯುತ್‍ಚಾಲಿತ ಚಲನಶೀಲತೆಯನ್ನು ಅಳವಡಿಸಿಕೊಳ್ಳುವಂಥ ಜೀವವ್ಯವಸ್ಥೆಯನ್ನು ಸೃಷ್ಟಿಸುವ ಆಶಾಭಾವನೆಯನ್ನೂ ನಾವು ಹೊಂದಿದ್ದೇವೆ'' ಎಂದು ಫ್ಲಿಪ್‍ಕಾರ್ಟ್ ಇಕಾರ್ಟ್ ಮತ್ತು ಮಾರ್ಕೆಟ್‍ಪ್ಲೇಸ್ ಹಿರಿಯ ಉಪಾಧ್ಯಕ್ಷ ಅಮಿತೇಶ್ ಜಾ ತಿಳಿಸಿದ್ದಾರೆ.

ಇದನ್ನೂ ಓದಿ: ಕಡಿಮೆ ಬೆಲೆ, ಗರಿಷ್ಠ ಮೈಲೈಜ್ BattRE ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

ಫ್ಲಿಪ್‍ಕಾರ್ಟ್‍ನಲ್ಲಿ ಪರಿಸರಕ್ಕೆ ಸಂಬಂಧಿಸಿದ ನಮ್ಮ ಹೊಣೆಗಾರಿಕೆಯನ್ನು ಅರ್ಥಮಾಡಿಕೊಂಡಿದ್ದು, ನಮ್ಮ ಉದ್ದಿಮೆಯನ್ನು ಹೆಚ್ಚು ಸುಸ್ಥಿರವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಮುಂಬರುವ ವರ್ಷಗಳಲ್ಲಿ ನಮ್ಮ ಕೊನೆಯ ತುದಿಯ ಡೆಲಿವರಿಗಳ ಗಣನೀಯ ಭಾಗವನ್ನು ವಿದ್ಯುತ್‍ಚಾಲಿತ ವಾಹನಗಳಿಗೆ ಬದಲಾಯಿಸುವುದು ಮತ್ತು ಸ್ವಚ್ಛ ಹಾಗೂ ಸುಸ್ಥಿರ ಚಲನಶೀಲತೆಗೆ ಕೊಡುಗೆ ನೀಡುವುದು ನಮ್ಮ ಧ್ಯೇಯವಾಗಿದೆ. ನಮ್ಮ ತಂಡವು ಸ್ಥಳೀಯ ಇಕೋಸಿಸ್ಟಂ ಪಾಲುದಾರರೊಂದಿಗೆ ಕೈಜೋಡಿಸಿದ್ದು, ಬೆಳೆಯುತ್ತಿರುವ ಇ-ಕಾಮರ್ಸ್ ಕ್ಷೇತ್ರಕ್ಕೆ ಸೂಕ್ತವಾಗಿ ಹೊಂದುವಂಥ ವಿದ್ಯುತ್‍ಚಾಲಿತ ವಾಹನಗಳ ವಿನ್ಯಾಸವನ್ನು ಅಭಿವೃದ್ಧಿಪಡಿಸುವಲ್ಲಿ ನೆರವಾಗುತ್ತಿದೆ. ಈ ದಿಕ್ಕಿನಲ್ಲಿ ನಾವು ಇಟ್ಟಿರುವಂಥ ಈ ಸಣ್ಣದಾದರೂ ಅರ್ಥಪೂರ್ಣವಾದ ಹೆಜ್ಜೆಯು ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಚಾಲಿತ ವಾಹನಗಳ ಅಳವಡಿಸಿಕೊಳ್ಳುವಿಕೆಗೆ ನೆರವಾಗಲಿದೆ ಎಂಬ ನಂಬಿಕೆ ನಮ್ಮದು'' ಎನ್ನುತ್ತಾರೆ ಫ್ಲಿಪ್‍ಕಾರ್ಟ್ ಸಮೂಹದ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ.

 ಇತ್ತೀಚೆಗೆ ನಡೆಸಲಾದ ನವೀಕರಿಸಬಹುದಾದ ಇಂಧನದ ಬಳಕೆ, ತ್ಯಾಜ್ಯ ನಿರ್ವಹಣೆಯತ್ತ ಗಮನ ಕೇಂದ್ರೀಕರಣ ಸೇರಿದಂತೆ ಫ್ಲಿಪ್‍ಕಾರ್ಟ್ ಸಮೂಹದ ತಂಡಗಳು ಪ್ರತಿ ದಿನ ನಡೆಸುತ್ತಿರುವ ವಿವಿಧ ಅಭಿಯಾನಗಳು ಫ್ಲಿಪ್‍ಕಾರ್ಟ್ ಸಂಸ್ಥೆಗೆ ಸುಸ್ಥಿರತೆಯ ಮೇಲೆ ಇರುವಂಥ ಬಲಿಷ್ಠವಾದ ಬದ್ಧತೆಯನ್ನು ಪ್ರತಿಬಿಂಬಿಸಿದೆ. ಫ್ಲಿಪ್‍ಕಾರ್ಟ್ ಸಮೂಹದಲ್ಲಿ, ನಾವು ಯಾವತ್ತೂ ಭಾರತದ ಬಗೆಗಿನ ಆತ್ಮೀಯ ಜ್ಞಾನವನ್ನು ಬಳಸಿಕೊಳ್ಳುತ್ತಾ, ಒಂದು ಸಕಾರಾತ್ಮಕ ಬದಲಾವಣೆ ತರುವಲ್ಲಿ ಹಾಗೂ ನಮ್ಮ ಎಲ್ಲ ಗ್ರಾಹಕರಿಗೂ ಮೌಲ್ಯಯುತ ಕೊಡುಗೆ ನೀಡುತ್ತಾ ಬರುವಲ್ಲಿ ಶ್ರಮಿಸುತ್ತಿದ್ದೇವೆ.
 

Follow Us:
Download App:
  • android
  • ios