ಎಲೆಕ್ಟ್ರಿಕ್ ವಾಹನ ಬಳಕೆಗೆ ಮೋದಿ ಸರ್ಕಾರ ಹೊಸ ಯೋಜನೆ- ರಿಜಿಸ್ಟ್ರೇಶನ್ ಉಚಿತ!
ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಕೇಂದ್ರ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ರಸ್ತೆ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೊಸ ಯೋಜನೆ ಮಾಹಿತಿ ನೀಡಿದ್ದಾರೆ. ಹೊಸ ಯೋಜನೆಯಿಂದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಾಗಲಿದೆ.
ನವದೆಹಲಿ(ಜೂ.19): ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಬಂಪರ್ ಕೊಡುಗೆ ನೀಡಿದ್ದಾರೆ. ಎಲೆಕ್ಟ್ರಿಕ್ ವಾಹನ ಖರೀದಿಸುವವರು ರೋಡ್ ಟ್ಯಾಕ್ಸ್ ರಿಜಿಸ್ಟ್ಕೇಶನ್ ಕಟ್ಟಬೇಕಿಲ್ಲ. ಇದು ಸಂಪೂರ್ಣ ಉಚಿತವಾಗಲಿದೆ.
ಇದನ್ನೂ ಓದಿ: ಡ್ರೈವಿಂಗ್ ಲೈಸನ್ಸ್‌ಗೆ ಶಿಕ್ಷಣದ ಅಗತ್ಯವಿಲ್ಲ!
ಎಲೆಕ್ಟ್ರಿಕ್ ವಾಹನ ಖರೀದಿಸುವವರು ಕಾರಿನ ಎಕ್ಸ್ ಶೋ ರೂಂ ಬೆಲೆ ಹಾಗೂ ಇನ್ಸುರೆನ್ಸ್ ಬೆಲೆ ಕಟ್ಟಿದರೆ ಸಾಕು, ರೋಡ್ ಟ್ಯಾಕ್ಸ್ ರಿಜಿಸ್ಟ್ರೇಶನ್ ಉಚಿತ. ಹೀಗಾಗಿ ಎಕ್ಸ್ ಶೋ ರೂಂ ಬೆಲೆಗಿಂತ ಹೆಚ್ಚಿನ ಬೆಲೆ ತೆರುವ ಅಗತ್ಯ ಗ್ರಾಹಕರಿಗಿಲ್ಲ. ಇಷ್ಟೇ ಅಲ್ಲ ಎಲೆಕ್ಟ್ರಿಕ್ ಕಾರಿನ ಬೆಲೆ ಕೂಡ ಕಡಿಮೆಯಾಗಲಿದೆ.
ಇದನ್ನೂ ಓದಿ: 5 ವರ್ಷದಲ್ಲಿ ಮಹಾರಾಷ್ಟ್ರದ 6 ಜಿಲ್ಲೆ ಡೀಸೆಲ್ ಮುಕ್ತಕ್ಕೆ ಗಡ್ಕರಿ ಸ್ಕೀಂ!
ಈಗಾಗಲೇ ಎಲೆಕ್ಟ್ರಿಕ್ ಕಾರು ಹೊಂದಿದವರು ರಿಜಿಸ್ಟ್ರೇಶನ್ ನವೀಕರಣಕವೂ ಉಚಿತವಾಗಲಿದೆ. ಎಲೆಕ್ಟ್ರಿಕ್ ವಾಹನ ಉಪಯೋಗದಿಂದ ಮಾಲಿನ್ಯ ಕಡಿಮೆಯಾಗಲಿದೆ. ಜೊತೆಗೆ ಇಂಧನ ಆಮದು ಮಾಡಿಕೊಳ್ಳುವುದು ಕಡಿಮೆಯಾಗಲಿದೆ. ಇದರಿಂದ ಬೊಕ್ಕಸ ಕೂಡ ತುಂಬಲಿದೆ.