ಮಹೀಂದ್ರ ಎಲೆಕ್ಟ್ರಿಕ್ ಆಟೋ ಬಿಡುಗಡೆ-ಪ್ರತಿ ಕಿ.ಮೀಗೆ 50 ಪೈಸೆ!
ಆಟೋ ರಿಕ್ಷಾ ಕ್ಷೇತ್ರದಲ್ಲಿ ಬಜಾಜ್ ಹಾಗೂ ಟಿವಿಎಸ್ ಪ್ರಾಬಲ್ಯ ಸಾಧಿಸಿದೆ. ಇದೀಗ ಈ ಎರಡೂ ಕಂಪೆನಿಗಳಿಗೆ ಪೈಪೋಟಿ ನೀಡಲು ಮಹೀಂದ್ರ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಿದೆ. ನೂತನ ಆಟೋ ರಿಕ್ಷಾ ಬೆಲೆ ಏನು? ಇಲ್ಲಿದೆ ಹೆಚ್ಚಿನ ಮಾಹಿತಿ.
ಬೆಂಗಳೂರು(ಜೂ.12): ಬಜಾಜ್, ಟಿವಿಎಸ್ ಆಟೋ ರಿಕ್ಷಾಗೆ ಪ್ರತಿಸ್ಪರ್ಧಿಯಾಗಿ ಮಹೀಂದ್ರ ಸಂಸ್ಥೆ ನೂತನ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಿದೆ. ಟ್ರಿಯೋ ಹಾಗೂ ಟ್ರಿಯೋ ಯಾರಿ ಎಂಬ 2 ಮಾಡೆಲ್‌ಗಳಲ್ಲಿ ಮಹೀಂದ್ರ ಸಂಸ್ಥೆ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಮೋದಿ ಹೊಸ ನೀತಿ -ಪೆಟ್ರೋಲ್ ಡೀಸಲ್ ಆಗಲ್ಲ, ಟ್ಯಾಕ್ಸಿಗೆ ಎಲೆಕ್ಟ್ರಿಕ್ ಕಾರು ಕಡ್ಡಾಯ!
ಒಂದು ಬಾರಿ ಚಾರ್ಜ್ ಮಾಡಿದರೆ 170 ಕಿ.ಮೀ ಪ್ರಯಾಣ ಮಾಡಲಿದೆ. ಟ್ರಿಯೋ ಆಟೋ ರಿಕ್ಷಾ 3 ಗಂಟೆ 50 ನಿಮಿಷ ಚಾರ್ಜ್ ಮಾಡಿದರೆ 130 ಕಿ.ಮೀ ಪ್ರಯಾಣಿಸಲಿದೆ. ಈ ಮೂಲಕ LPG ಆಟೋ ಪ್ರತಿ ಕಿ.ಮೀಗೆ 2 ರೂಪಾಯಿ ವೆಚ್ಚ ತಗುಲಿದರೆ, ಎಲೆಕ್ಟ್ರಿಕ್ ಆಟೋ ರಿಕ್ಷಾ ಬೆಲೆ ಕೇವಲ 50 ಪೈಸೆ ಮಾತ್ರ. ನೂತನ ಮಹೀಂದ್ರ ಎಲೆಕ್ಟ್ರಿಕ್ ಆಟೋ ರಿಕ್ಷಾ ಬೆಲೆ 1.77 ಲಕ್ಷ ರೂಪಾಯಿಂದ ಆರಂಭವಾಗಲಿದೆ.
ಇದನ್ನೂ ಓದಿ: ದಕ್ಷಿಣ ಭಾರತಕ್ಕೆ ಕಾಲಿಡುತ್ತಿದೆ ಸ್ವಿಸ್ ಎಲೆಕ್ಟ್ರಿಕ್ ಬಸ್ ಘಟಕ-ಸ್ಥಳೀಯರಿಗೆ ಉದ್ಯೋಗ!
ಮಹೀಂದ್ರ ಟ್ರಿಯೋ 7.37kwh ಲಿಥಿಯಂ ಇಯಾನ್ ಬ್ಯಾಟರಿ ಅಳವಡಿಸಲಾಗಿದೆ. ಸಂಪೂರ್ಣ ಚಾರ್ಜ್‌ಗೆ 3 ಗಂಟೆ 50 ನಿಮಿಷ ತೆಗೆದುಕೊಳ್ಳಲಿದೆ. ಗರಿಷ್ಛ ವೇಗ 45 ಕಿ.ಮೀ ಪ್ರತಿ ಗಂಟೆಗೆ. ಇನ್ನು ಟ್ರಿಯೋ ಯಾರಿ ರಿಕ್ಷಾ 3.69kWh ಲಿಥಿಯಂ ಇಯಾನ್ ಬ್ಯಾಟರಿ ಅಳವಡಿಸಲಾಗಿದೆ. ಇದರ ಸಂಪೂರ್ಣ ಚಾರ್ಜ್‌ಗೆ 2 ಗಂಟೆ 30 ನಿಮಿಷ ತೆಗೆದುಕೊಳ್ಳಲಿದೆ.