ಬೆಂಗಳೂರು(ಡಿ.17): ಮಾಲಿನ್ಯ ತಡೆಗೆ ಹಾಗೂ ಇಂಧನಕ್ಕೆ ಪರ್ಯಾಯವಾಗಿ ಎಲೆಕ್ಟ್ರಿಕ್ ಕಾರು ಪರಚಯಿಸಲಾಗುತ್ತಿದೆ. ಮಾರುತಿ ಸುಜುಕಿ, ಹ್ಯುಂಜೈ, ಮಹೀಂದ್ರ ಸೇರಿದಂತೆ ಬಹುತೇಕ ಎಲ್ಲಾ ಕಂಪೆನಿಗಳು ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ತಯಾರಿ ಆರಂಭಿಸಿದೆ.

2019ರ ಆರಂಭದಲ್ಲೇ ಮಹೀಂದ್ರ ಸೇರಿದಂತೆ ಹಲವು ಕಂಪೆನಿಗಳ ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆ ಪ್ರವೇಶಿಸಲಿದೆ. 2032ರಲ್ಲಿ ಭಾರತದಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನ ಜಾರಿಗೆ ತರಲು ಕೇಂದ್ರ ಸರ್ಕಾರ ಯೋಜನೆ ಸಿದ್ದಪಡಿಸಿದೆ.

ಮಹೀಂದ್ರ KUV100 ಎಲೆಕ್ಟ್ರಿಕ್
ಮಹೀಂದ್ರ KUV100 ಕಾರನ್ನ ಇದೀಗ ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆ ಮಾಡಲು ಕಂಪೆನಿ ತಯಾರಿ ಆರಂಭಿಸಿದೆ. ಇದಕ್ಕಾಗಿ ಓಟ್ಟು 6,500 ಕೋಟಿ ರೂಪಾಯಿ ಬಂಡವಾಳ ಹೂಡಲು ಕಂಪೆನಿ ಮುಂದಾಗಿದೆ. ಈಗಾಗಲೇ 500 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿದೆ. ಸುಮಾರು 10 ರಿಂದ 12 ಲಕ್ಷ ರೂಪಾಯಿ ಬೆಲೆ ಇರಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ರೋಲ್ಸ್ ರಾಯ್ಸ್ TO ವಿಹಾರ ನೌಕೆ-ಎಲ್ಲವನ್ನೂ ಕಳೆದುಕೊಂಡ ಮಲ್ಯ!

ನಿಸಾನ್ ಲೀಫ್ ಎಲೆಕ್ಟ್ರಿಕ್
ನಿಸಾನ್ ಲೀಫ್ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ. ಈಗಾಗಲೇ ರೋಡ್  ಟೆಸ್ಟ್ ಯಶಸ್ವಿಯಾಗಿ ಪೂರೈಸಿರುವ ನಿಸಾನ್ ಲೀಫ್, ಸಾಕಷ್ಟು ಕುತೂಹಲ ಕೆರಳಿಸಿದೆ. ಸಂಪೂರ್ಣ ಚಾರ್ಜ್ ಮಾಡಿದರೆ ಬರೋಬ್ಬರಿ 400 ಕೀಮಿ ಪ್ರಯಾಣ ಮಾಡಬಹುದು ಎಂದು ಕಂಪೆನಿ ಹೇಳಿಕೊಂಡಿದೆ. 

ಹ್ಯುಂಡೈ ಕೋನಾ
ಭಾರತದ ಮೊತ್ತ ಮೊದಲ ಎಲೆಕ್ಟ್ರಿಕ್ SUV ಕಾರು ಬಿಡುಗಡೆ ಮಾಡಲು ಹ್ಯುಂಡೈ ಸಜ್ಜಾಗಿದೆ. ಹ್ಯುಂಡೈ ಕೋನಾ ಎಲೆಕ್ಟ್ರಿಕ್ SUV ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 300 ಕೀ.ಮಿ ಪ್ರಯಾಣ ಮಾಡುಬಹುದು. ಗರಿಷ್ಠ ಸ್ಪೀಡ್ 155kmph.

ಇದನ್ನೂ ಓದಿ: ಈ ನಗರದಲ್ಲಿದ್ದಾರೆ ಅತ್ಯಂತ ಬ್ಯಾಡ್ ಡ್ರೈವರ್ಸ್: ಇವರಿಗೆ ಅಪ್ಲೈ ಆಗಲ್ಲ ರೂಲ್ಸ್!

ಆಡಿ ಇ ಟ್ರೊನ್
ಆಡಿ ಸಂಸ್ಥೆ ಕೂಡ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ. ಆಡಿ Q5 ಹಾಗೂ Q7 ಮಾದರಿಯಲ್ಲಿರುವ ಆಡಿ ಇ ಟ್ರೊನ್ ಗರಿಷ್ಟ ವೇಗ 200kmph. ಒಂದು ಬಾರಿ ಚಾರ್ಜ್ ಮಾಡಿದರೆ 400 ಕೀ.ಮಿ ಪ್ರಯಾಣ ಮಾಡುಬಹುದು ಎಂದು ಆಡಿ ಹೇಳಿದೆ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: