ಬೆಂಗಳೂರು(ಡಿ.13): ರಸ್ತೆ ನಿಯಮ ಉಲ್ಲಂಘನೆಗೆ ದಂಡ ಹೆಚ್ಚಿಸಿದರೂ ಭಾರತದಲ್ಲಿ ನಿಯಮ ಪಾಲನೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿಲ್ಲ. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ನಿಯಮ ಪಾಲನೆ ಮಾಡುವವರ ಸಂಖ್ಯೆ 1000ಕ್ಕೆ  200 ಮಂದಿ ಮಾತ್ರ. ಆದರೆ ವಿದೇಶದಲ್ಲಿ 1000ಕ್ಕೆ 687 ಜನ ರಸ್ತೆ ನಿಯಮ ಪಾಲಿಸುತ್ತಾರೆ.

ಇದನ್ನೂ ಓದಿ: ಸಿಗ್ನಲ್ ಜಂಪ್- ರದ್ದಾಗಲಿದೆ 900 ಮಂದಿಯ ಡ್ರೈವಿಂಗ್ ಲೈಸೆನ್ಸ್!

ಭಾರತದ ಪ್ರಮುಖ ನಗರಗಳಲ್ಲಿ ಅಡ್ಡಾ ದಿಡ್ಡಿ ಓಡಿಸುವುದು, ನಿಯಮ ಉಲ್ಲಂಘನೆ ಕುರಿತು ಫೋರ್ಡ್ ಮೋಟಾರ್ಸ್ ಸಂಸ್ಥೆಯ ಅಸ್ತ್ರಂ ಕಮಿಶನ್ ಸಮೀಕ್ಷೆ ಮಾಡಿದೆ. ಭರಾತದ 10 ಮೆಟ್ರೋ ನಗರಗಳಲ್ಲಿನ ಅಂಕಿ ಅಂಶ ಭಾರತೀಯರ ಡ್ರೈವಿಂಗ್ ಬಯಲು ಮಾಡಿದೆ.

ಇದನ್ನೂ ಓದಿ: ಭಾರತದಲ್ಲಿ ದಾಖಲೆ ಬರೆದ ಮಾರುತಿ ಸುಜುಕಿ ಸ್ವಿಫ್ಟ್!

ಅಡ್ಡಾ ದಿಡ್ಡಿ ವಾಹನ ಓಡಿಸುವವರಲ್ಲಿ ಕೋಲ್ಕತ್ತಾ ನಗರದ ಜನ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ನಮ್ಮ ಬೆಂಗಳೂರು 4ನೇ ಸ್ಥಾನದಲ್ಲಿದೆ. ಗರಿಷ್ಠ ವಾಹನ ಹೊಂದಿರುವ ನಗರ ದೆಹಲಿ 6ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಅಂಬಿ ಕಾರ್ ಕ್ರೇಜ್: 2 ಗಂಟೆಯಲ್ಲಿ ಮೈಸೂರು to ಬೆಂಗಳೂರು!

ಅಡ್ಡಾ ದಿಡ್ಡಿ ವಾಹನ ಚಲಾವಣೆ
1 ಕೋಲ್ಕತಾ
2 ಹೈದರಾಬಾದ್
3 ಚೆನ್ನೈ
4 ಬೆಂಗಳೂರು
5 ಮುಂಬೈ
6 ದೆಹಲಿ

ರಸ್ತೆ ನಿಯಮ ಪಾಲನೆಯಲ್ಲಿ ಹೈದರಬಾದ್ ಜನ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಬೆಂಗಳೂರಿನ ಶೇಕಡಾ 64 ರಷ್ಟು ಜನ ಟ್ರಾಫಿಕ್ ನಿಯಮ ಪಾಲಿಸುತ್ತಿದ್ದಾರೆ. ಅತೀ ಕಡಿಮೆ ಟ್ರಾಫಿಕ್ ನಿಯಮ ಪಾಲನೆ ನಗರ ದೆಹಲಿ.
 
ಟ್ರಾಫಿಕ್ ನಿಯಮ ಪಾಲನೆ
ಹೈದರಾಬಾದ್: 81%
ಕೋಲ್ಕತಾ: 77%
ಬೆಂಗಳೂರು: 64%
ಮುಂಬೈ: 54%
ಚೆನ್ನೈ: 52%
ದೆಹಲಿ:  52%

ಟ್ರಾಫಿಕ್ ಪೊಲೀಸ್ ಇಲ್ಲದ ವೇಳೆ ಸಿಗ್ನಲ್ ಜಂಪ್ ಮಾಡುವವರಲ್ಲಿ ದೆಹಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು 4ನೇ ಸ್ಥಾನದಲ್ಲಿದೆ.

ಪೊಲೀಸ್ ಇಲ್ಲದೆ ವೇಳೆ ಸಿಗ್ನಲ್ ಜಂಪ್
ದೆಹಲಿ: 42%
ಚೆನ್ನೈ : 38%
ಮುಂಬೈ: 35%
ಬೆಂಗಳೂರು: 25%
ಕೋಲ್ಕತ್ತಾ : 4%
ಹೈದರಾಬಾದ್: 2 %

ಸೀಟ್ ಬೆಲ್ಟ್ ಹಾಕದೇ, ಡ್ರೈವಿಂಗ್ ವೇಳೆ ಫೋನ್ ಕಾಲ್ ರಿಸೀವ್, ಹೆಲ್ಮೆಟ್ ಇಲ್ಲದೆ ಪ್ರಯಾಣ ಸೇರಿದಂತೆ ಯಾವುದೇ ಸುರಕ್ಷತೆ ಪಾಲಿಸದೇ ಪ್ರಯಾಣ ಮಾಡುವವರಲ್ಲಿ ಕೋಲ್ಕತಾ ನಗರ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು 5ನೇ ಸ್ಥಾನದಲ್ಲಿದೆ.

ಸುರಕ್ಷತಾ ನಿಯಮ ಉಲ್ಲಂಘನೆ
ಕೋಲ್ಕತಾ : 83 %
ಹೈದರಾಬಾದ್ : 73 %
ಚೆನ್ನೈ:  62 %
ದೆಹಲಿ : 60 %
ಬೆಂಗಳೂರು: 56 %
ಮುಂಬೈ: 56 %

ಅಪಘಾತವಾದ ತಕ್ಷಣ ಸಹಾಯಕ್ಕೆ ಬರುವುದು, ಅಪಘಾತವಾದವರನ್ನ ಆಸ್ಪತ್ರೆಗೆ ಸೇರಿಸುವುದು ಸೇರಿದಂತೆ ಮಾನವೀಯತೆ ಮೆರದವರಲ್ಲಿ ಚೆನ್ನೈ ಜನ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು 2ನೇ ಸ್ಥಾನದಲ್ಲಿದೆ.

ಸಹಾಯ ಹಸ್ತ ಚಾಚುವ ನಗರ
ಚೆನ್ನೈ : 75%
ಬೆಂಗಳೂರು:59%
ದೆಹಲಿ: 51%
ಮುಂಬೈ: 42%
ಹೈದರಾಬಾದ್: 38%
ಕೋಲ್ಕತಾ: 24%

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: