ಲಂಡನ್(ಅ.20): ಭಾರತೀಯ ಬ್ಯಾಂಕ್‌ಗಳಿಗೆ ವಂಚಿಸಿ ಲಂಡನ್‌ನಲ್ಲಿ ಹಾಯಾಗಿದ್ದ ಉದ್ಯಮಿ ವಿಜಯ್ ಮಲ್ಯ ಗಡೀಪಾರಿಗೆ ನ್ಯಾಯಾಲಯ ಸೂಚಿಸಿದೆ. ಹೀಗಾಗಿ ಮಲ್ಯ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಇಷ್ಟೇ ಅಲ್ಲ ಸಾಲ ವಸೂಲಾತಿಗೆ ಮಲ್ಯ ಆಸ್ತಿ ಮುಟ್ಟುಗೋಲಿಗೆ ಭಾರತೀಯ ಬ್ಯಾಂಕ್‌ಗಳು ತುದಿಗಾಲ್ಲಿ ನಿಂತಿದೆ.

ಇದನ್ನೂ ಓದಿ: 1 ಲೀಟರ್‌ನಲ್ಲಿ 250 ಕೀ.ಮಿ ಮೈಲೇಜ್-ದಾಖಲೆ ಬರೆದ ಕಾರು!

ವಿಜಯ್ ಮಲ್ಯ ಬಳಿ ಐಷಾರಾಮಿ ಕಾರು, ವಿಹಾರ ನೌಕೆ ಸೇರಿದಂತೆ ಬರೋಬ್ಬರಿ 30 ಕೋಟಿ ಮೌಲ್ಯದ ವಾಹನಗಳಿದೆ.  ಲಂಡನ್‌ನಲ್ಲಿ ವಿಜಯ್ ಮಲ್ಯ ಬಳಿ 15 ಕ್ಕೂ ಹೆಚ್ಚು ಕಾರುಗಳಿವೆ. ಇದರಲ್ಲಿ 6 ದುಬಾರಿ ಕಾರುಗಳನ್ನ  ಹರಾಜು ಹಾಕಲು ಕೋರ್ಟ್ ಸೂಚಿಸಿದೆ. ಕೋರ್ಟ್ ಆದೇಶದ ಪ್ರಕಾರ, 2016 ಮಿನಿ ಕೂಪರ್, 2012 ಮೇಬ್ಯಾಚ್ 62, 2006 ಫೆರಾರಿF430, ಲ್ಯಾಂಡ್ ರೋವರ್ ರೇಂಜ್ ರೋವರ್ ಹಾಗೂ ಪೋರ್ಶೆ ಕಾರನ್ನ ಹರಾಜಿಗೆ ಇಡಲಾಗಿದೆ.

ಇದನ್ನೂ ಓದಿ: ಈ ನಗರದಲ್ಲಿದ್ದಾರೆ ಅತ್ಯಂತ ಬ್ಯಾಡ್ ಡ್ರೈವರ್ಸ್: ಇವರಿಗೆ ಅಪ್ಲೈ ಆಗಲ್ಲ ರೂಲ್ಸ್!

ಮಲ್ಯರ ಬಹುತೇಕ ಕಾರುಗಳನ್ನ ಕಸ್ಟಮೈಸ್ ಮಾಡಲಾಗಿದೆ. ಕೋಟಿ ಕೋಟಿ ಹಣ ಸುರಿದು ಫ್ಯಾನ್ಸಿ ನಂಬರ್ ಕೂಡ ಮಾಡಿಸಿದ್ದಾರೆ.  ಮೇಬ್ಯಾಚ್ 62 ಕಾರಿನ ನಂಬರ್ VJM1, ಫೆರಾರಿF430 ಕಾರಿನ ನಂಬರ್ BO55 VJM(ಅರ್ಥ: ಬಾಸ್ ವಿಜಯ್ ಮಲ್ಯ), ರೇಂಜ್ ರೋವರ್ ನಂಬರ್ F1VJM(ಅರ್ಥ :ಫಾರ್ಮುಲಾ ಒನ್ ವಿಜಯ್ ಮಲ್ಯ) ಪೊರ್ಶೆ ಕಾರಿನ ನಂಬರ್ 0007 VJM(ಅರ್ಥ: ಜೇಮ್ಸ್ ಬಾಂಡ್ ಮೂವಿ)

ಇದನ್ನೂ ಓದಿ: ಕಾರಿನ ಹೆಡ್ ಲೈಟ್ ಮಾಡಿಫೈ ಮಾಡಿದರೆ ಎಚ್ಚರ-ದಾಖಲಾಗುತ್ತೆ ಕೇಸ್!

ಐಷಾರಾಮಿ ಜೀವನದಲ್ಲಿದ್ದ ವಿಜಯ್ ಮಲ್ಯ ಇದೀಗ ಎಲ್ಲವನ್ನೂ ಕಳೆದುಕೊಳ್ಳಲಿದ್ದಾರೆ. ಕಾರು ಬಂಗಲೆ, ಆಸ್ತಿ ಅಂತಸ್ತು ಯಾವುದು ಉಳಿಯಲ್ಲ. ಕಾರಣ ಇದೆಲ್ಲವನ್ನೂ ಹರಾಜು ಹಾಕಿಗರೂ ಬ್ಯಾಂಕ್ ಸಾಲ ತೀರಿಸುವುದು  ಕಷ್ಟ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: